ಅಮೆಜಾನ್ ಡೆಲಿವರಿ ಬಾಯ್ ಯಿಂದ ಅತ್ಯಾಚಾರ ಯತ್ನ, ಪ್ರಕರಣಕ್ಕೆ ವಿಚಿತ್ರ ತಿರುವು

ನೋಯ್ಡಾ, ಅಕ್ಟೋಬರ್ 11: ಇ ಕಾಮರ್ಸ್ ಫರ್ಮ್ ಅಮೆಜಾನ್ ನ ಡೆಲಿವರಿ ಬಾಯ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ನಡೆಸಿದ ಪ್ರಕರಣ ವಿಚಿತ್ರ ತಿರುವು ಪಡೆದಿದೆ.

ಅಕ್ಟೋಬರ್ 7 ರ ಬೆಳಿಗ್ಗೆ ಅಮೆಜಾನ್ ನಿಂದ ಖರೀದಿಸಿದ್ದ ವಸ್ತುವಿನ ರಿಪ್ಲೇಸ್ ಮೆಂಟ್ ಗೆಂದು ಮಹಿಳೆಯೊಬ್ಬರು ಮನವಿ ಮಾಡಿದ್ದರು. ಸೋಮವಾರ ಬೆಳಿಗ್ಗೆ ವಸ್ತುವನ್ನು ಪಡೆಯಲು ಬಂದಿದ್ದ ವ್ಯಕ್ತಿ ಗ್ರಾಹಕಿಯ ಜೊತೆ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಮಹಿಳೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಮಹಿಳೆಯನ್ನು ಎರಡು ಬಾರಿ ವಿಚಾರಣೆಗೆ ಕರದೆರೂ ಆಕೆ ಬಾರದೆ ಇರುವುದು ಪ್ರಕರಣಕ್ಕೆ ವಿಚಿತ್ರ ತಿರುವು ನೀಡಿದೆ.

ದೂರು ವಾಪಸ್ ಪಡೆಯಲು ಮಹಿಳೆ ಮನವಿ

ದೂರು ವಾಪಸ್ ಪಡೆಯಲು ಮಹಿಳೆ ಮನವಿ

ಪೊಲೀಸರು ಎರಡು ಬಾರಿ ಮನವಿ ಮಾಡಿದರೂ ಮಹಿಳೆ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದಾರೆ. ಜೊತೆಗೆ ತಾವು ದೂರನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ವಾಪಸ್ ಪಡೆಯಲು ಕಾರಣವೇನು?

ವಾಪಸ್ ಪಡೆಯಲು ಕಾರಣವೇನು?

ದೂರು ನೀಡಿದ್ದು ನನ್ನ ಸಹೋದರಿ, ನಾನಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಪೊಲೀಸರಿಗೆ ಈ ವಿಷಯದಲ್ಲಿ ಹೇಳಿಕೆ ನೀಡಲು ಸಾಧ್ಯವೇ ಇಲ್ಲ ಎಂದು ಯುವತಿ ಹೇಳಿದ್ದಾರೆ.

ಹೇಳಿಕೆ ನೀಡಿದ ಆರೋಪಿ

ಹೇಳಿಕೆ ನೀಡಿದ ಆರೋಪಿ

"ಆರೋಪಿಯಿಂದ ಹೇಳಿಕೆ ಪಡೆಯಲಾಗಿದ್ದು, ಆತ ಸಮನ್ ನೀಡಿದ ತಕ್ಷಣ ಸ್ಟೇಶನ್ನಿಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅತ್ಯಾಚಾರ ಯತ್ನದ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲದ ಕಾರಣ ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅಮೆಜಾನ್ ನಿಂದ ಸ್ಪಷ್ಟನೆ

ಅಮೆಜಾನ್ ನಿಂದ ಸ್ಪಷ್ಟನೆ

'ಮಹಿಳೆ ಅಮೆಜಾನ್ ಗೆ ಎರಡು ಬಾರಿ ರಿಪ್ಲೇಸ್ ಮೆಂಟ್ ಆರ್ಡರ್ ಮಾಡಿದ್ದು, ಕಸ್ಟಮರ್ ಗೆ ಕೇರ್ ಗೆ ಸಹ ಫೋನಾಯಿಸಿದ್ದರು. ಎರಡು ಬಾರಿಯೂ ಆರೋಪಿ ಡೆಲಿವರಿ ಬಾಯ್ ಆಕೆಯ ಮನೆಗೆ ತೆರಳಿದ್ದರು. ಮಹಿಳೆಯ ದೂರಿನ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಅಮೆಜಾನ್ ಗಮನಕ್ಕೆ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ' ಎಂದು ಅದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+