ಗರ್ಭಿಣಿ ಮೇಲೆ ಹರಿದ ಕಾರು: ನೋಯ್ಡಾದಲ್ಲಿ ತಾಯಿಯೊಂದಿಗೆ ಭ್ರೂಣವೂ ಬಲಿ!
ನೋಯ್ಡಾ(ಉತ್ತರ ಪ್ರದೇಶ), ನವೆಂಬರ್ 13: ಪಾರ್ಕಿಂಗ್ ಲಾಟ್ ನಿಂದ ಹೊರಬರುತ್ತಿದ್ದ ಕಾರೊಂದು ಹಠಾತ್ ಆಗಿ ಬಂದು ತುಂಬು ಗರ್ಭಿಣಿಯೊಬ್ಬರ ಮೇಲೆ ಹರಿದ ಪರಿಣಾಮ ಆಕೆ ಮೃತಪಟ್ಟ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನ.12 ರ ಸಂಜೆ ನಡೆದಿದೆ.
26 ವರ್ಷದ ಈ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಎಂಟು ತಿಂಗಳ ಭ್ರೂಣವನ್ನೂ ರಕ್ಷಿಸುವುದಕ್ಕೆ ವೈದ್ಯರಿಗೆ ಸಾಧ್ಯವಾಗಲಿಲ್ಲ. ಪತ್ನಿಯನ್ನು ಅಪಘಾತದಿಂದ ಪಾರುಮಾಡಲು ಹೋದ ಪತಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನ.12 ರ ಭಾನುವಾರ ದಂಪತಿಗಳು ಶಾಪಿಂಗ್ ಗೆಂದು ಮಾಲ್ ಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪಾರ್ಕಿಂಗ್ ಲಾಟ್ ನಿಂದ ಅನಗತ್ಯವಾಗಿ ಅಷ್ಟು ವೇಗವಾಗಿ ಕಾರು ಓಡಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ಚಿತ್ರಕೃಪೆ: ಎಎನ್ ಐ)












Click it and Unblock the Notifications