ಮನುಕುಲಕ್ಕೆ ಮಾರಕವಾದ ತಂಬಾಕು ತ್ಯಜಿಸಲು ಈ ದಿನ ಸಕಾಲ
ಮನುಕುಲಕ್ಕೇ ಮಾರಕವಾದ ತಂಬಾಕು ತ್ಯಜಿಸಲು, ವಿಶ್ವ ತಂಬಾಕು ರಹಿತ ದಿನ ಸಕಾಲ.
ನವದೆಹಲಿ, ಮೇ 30: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಸಿಗರೇಟ್ ಪ್ಯಾಕೆಟ್ ಮೇಲೆ ಬರೆದ ಸಾಲನ್ನು ಓದುತ್ತಲೇ ಧೂಮಪಾನ ಮಾಡುವ ಜನರು ಇಂದು ಸಾಮಾನ್ಯವೆನ್ನಿಸಿದ್ದಾರೆ. ತಂಬಾಕು ಮತ್ತು ಅದರ ಉತ್ಪನ್ನಗಳಿಂದ ಆರೋಗ್ಯದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ದಿನೇ ದಿನೇ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದರೂ ವಿದ್ಯಾವಂತರೇ ಅವುಗಳ ದಾಸರಾಗುತ್ತಿರುವುದು ನಿಜಕ್ಕೂ ಆಘಾತಕಾರಿ!
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಲ್ಲಿ ಒಟ್ಟು ಶೇ.40 ಪ್ರತಿಶತ ಜನರು ಧೂಮಪಾನ ಮಾಡುತ್ತಾರೆ. ಅದರಲ್ಲಿ ಶೇ.9 ರಷ್ಟು ಮಹಿಳೆಯರಿದ್ದಾರೆ. ತಂಬಾಕಿನಿಂದಾಗಿ ಪ್ರತಿ ಆರು ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ ಎಂಬುದು ಆಘಾತಕಾರಿಯಾದ್ರೂ ಸತ್ಯ![ತಂಬಾಕುವಿರೋಧಿ ದಿನಕ್ಕಾಗಿ ಮೇ 31 ರಂದು ವ್ಯಂಗ್ಯಚಿತ್ರ ಪ್ರದರ್ಶನ]
ಭಾರತದಲ್ಲಿ ಪ್ರತಿದಿನ ತಂಬಾಕು ಉಪಯೋಗಿಸುವವರು 12 ಕೋಟಿಗೂ ಹೆಚ್ಚು ಜನ. ಭಾರತದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಮತ್ತು ಅದರ ಉತ್ಪನ್ನದಿಂದ ಉಂಟಾದ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಕ್ಯಾನ್ಸರ್ ಪ್ರಕರಣಗಳಂತೂ ಇತ್ತೀಚೆಗೆ ಅವ್ಯಾಹತವಾಗಿ ಹೆಚ್ಚುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ ಪ್ರತಿವರ್ಷ ಜಗತ್ತಿನಾದ್ಯಂತ 6 ಲಕ್ಷಕ್ಕೂ ಹೆಚ್ಚು ಪರೋಕ್ಷ ಧೂಮಪಾನಿಗಳು ಸಾವನ್ನಪ್ಪುತ್ತಿದ್ದಾರೆ. ಅಂದರೆ ತಪ್ಪನ್ನೇ ಮಾಡದಿದ್ದರೂ, ಯಾರದೋ ಧೂಮಪಾನದ ಚಟಕ್ಕೆ ಇಷ್ಟೊಂದು ಜನ ಪ್ರಾಣತೆರುತ್ತಿದ್ದಾರೆ.[ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]
ಮನುಕುಲಕ್ಕೇ ಮಾರಕವಾದ ತಂಬಾಕು ತ್ಯಜಿಸಲು, ವಿಶ್ವ ತಂಬಾಕು ರಹಿತ ದಿನ ಸಕಾಲ. ತಮ್ಮ ಆರೋಗ್ಯವನ್ನಷ್ಟೇ ಅಲ್ಲದೆ, ಅಕ್ಕಪಕ್ಕದವರ, ಪ್ರೀತಿಪಾತ್ರರ ಆರೋಗ್ಯವನ್ನೂ ನಿಷ್ಕಾರಣವಾಗಿ ಹಾಳು ಮಾಡುತ್ತಿರುವ ಧೂಮಪಾನದ ದಾಸರು ಇಂದಾದರೂ ತಮ್ಮ ದುಶ್ಚಟವನ್ನು ಬಿಡಲು ಪಣತೊಡಲಿ ಎಂಬುದು 'ಒನ್ ಇಂಡಿಯಾ' ಕಳಕಳಿ.
ತಂಬಾಕು ಅಭಿವೃದ್ಧಿಗೆ ಮಾರಕ ಎಂಬ ಘೋಷ ವಾಕ್ಯವನ್ನಿಟ್ಟುಕೊಂಡು ಈ ಬಾರಿಯ ತಂಬಾಕು ರಹಿತ ದಿನ ಇಂದು(ಮೇ 31) ಆಚರಣೆಗೊಳ್ಳುತ್ತಿದೆ. ಈ ಕುರಿತು ಟ್ವೀಟ್ಟರ್ ನಲ್ಲೂ ಜಾಗೃತಿಯ ಸಂದೇಶಗಳು ಹರಿದಾಡುತ್ತಿವೆ.
|
ಜಾಗೃತಿಯ ಪ್ರತಿಜ್ಞೆ ಮಾಡೋಣ
ತಂಬಾಕು ಮತ್ತು ಅದರ ಉತ್ಪನ್ನಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರತಿಜ್ಞೆ ಮಾಡೋಣವೆಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕರೆನೀಡಿದ್ದಾರೆ
|
ಮರಳು ಶಿಲ್ಪದ ಮೂಲಕ ಜಾಗೃತಿ
ಇನ್ನೂ ತಡಮಾಡಬೇಡಿ, ನಾವು ತಂಬಾಕನ್ನು ಸೋಲಿಸಬಹುದು, ತಂಬಾಕನ್ನು ತ್ಯಜಿಸಿ ಎಂದು ಮರಳು ಶಿಲ್ಪ ರಚಿಸುವ ಮೂಲಕ ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದ್ದಾರೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಫಟ್ನಾಯಕ್.[ತಂಬಾಕು ಬಳಕೆ ನಿಯಂತ್ರಣ : ಕನ್ನಡಿಗ ಡಾ.ವಿಶಾಲ್‍ರಾವ್ ಅವರಿಗೆ ಪ್ರತಿಷ್ಠಿತ ವಿಲ್ಕೆನ್‍ಫೆಲ್ಡ್ ಪ್ರಶಸ್ತಿ]
| Array |
ತಂಬಾಕು ಕೇವಲ ನಿಮ್ಮ ಜೀವವನ್ನಷ್ಟೇ ತೆಗೆಯೋದಿಲ್ಲ!
ತಂಬಾಕು ಕೇವಲ ನಿಮ್ಮ ಆರೋಗ್ಯವನ್ನಷ್ಟೇ ನಾಶಮಾಡುವುದಿಲ್ಲ. ನಿಮ್ಮ ಪ್ರೀತಿಪಾತ್ರರನ್ನೂ, ಕೊನೆಗೆ ಪರಿಸರವನ್ನೂ ನಾಶಮಾಡುತ್ತದೆ ಎಂದು ಡಬ್ಲ್ಯು ಎಚ್ ಒ ವೆಸ್ಟರ್ನ್ ಪೆಸಿಫಿಕ್ ಸಂಸ್ಥೆ ಟ್ವೀಟ್ ಮಾಡಿದೆ.[ಸಿಗರೇಟು ಶಾಶ್ವತವಾಗಿ ಸುಟ್ಟಾಕಿ : ಸೆಲೆಬ್ರಿಟಿಗಳ ಕೂಗು]
|
ತಂಬಾಕು ಮನುಕುಲಕ್ಕೇ ಮಾರಕ
ತಂಬಾಕು ಮನುಕುಲಕ್ಕೆ ಮಾತ್ರವಲ್ಲ, ಅಭಿವೃದ್ಧಿಗೂ ಮಾರಕ. ಆದ್ದರಿಂದ ತಂಬಾಕು ತ್ಯಜಿಸಿ ಎಂದು ಗುಜರಾತ್ ರಾಜ್ಯ ಬಿಜೆಪಿ ಅಧ್ಯಕ್ಷ ಜಿತು ವಘಾನಿ ಟ್ವೀಟ್ ಮಾಡಿದ್ದಾರೆ.[ತಂಬಾಕು ಬೇಕಿದ್ರೆ ಸೇವಿಸಿ, ದುಷ್ಪರಿಣಾಮ ನೀವೇ ಅನುಭವಿಸಿ!]
|
ಆಯಸ್ಸಿನ 14 ವರ್ಷ ಕಡಿಮೆ ಆಗುತ್ತೆ!
ಇಂದು ವಿಶ್ವ ತಂಬಾಕು ರಹಿತ ದಿನ. ನಿಮಗೆ ಗೊತ್ತಾ? ಧೂಮಪಾನ ನಿಮ್ಮ ಆಯಸ್ಸಿನ 14 ವರ್ಷವನ್ನೇ ಕಡಿಮೆ ಮಾಡುತ್ತದೆ? ಎಂದು ಯುರೋಪಿಯನ್ ಪಾರ್ಲಿಮೆಂಟ್ ಟ್ವೀಟ್ ಮಾಡಿದೆ.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]












Click it and Unblock the Notifications