ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!

Subscribe to Oneindia Kannada

ಬೆಂಗಳೂರು, ಡಿಸೆಂಬರ್, 28: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಕ್ಕೆ ಬರಬೇಕು. ಪುರುಷನಿಗೆ ಸರಿಸಮನಾದ ಸಾಧನೆ ಮಾಡಬೇಕು ಎಂದು ಹೇಳುತ್ತಲೇ ಬರಲಾಗಿದೆ. ಅದಕ್ಕೆ ತಕ್ಕ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಅಂಥ ಕೆಲ ಸಾಧನೆಗಳು ನಡೆದಿವೆ. ಆದರೆ ಬೇಡದ ವಿಷಯವೊಂದರಲ್ಲಿ ಮಹಿಳೆಯರು ಪುರುಷರ ಬೆನ್ನ ಹಿಂದೆ ಬಿದ್ದಿದ್ದಾರೆ. ಅಮೆರಿಕದ ನಂತರದ ಸ್ಥಾನವನ್ನು ಮಹಿಳೆಯರು ಭಾರತಕ್ಕೆ ತಂದುಕೊಟ್ಟಿದ್ದಾರೆ.

ಧೂಮಪಾನಿಗಳ ಲೆಕ್ಕದಲ್ಲಿ ಭಾರತದ ಮಹಿಳೆಯರು ಪುರುಷರನ್ನು ಮೀರುವ ಸಾಧನೆ ಮಾಡುತ್ತಿದ್ದಾರೆ! ಆರೋಗ್ಯ ಇಲಾಖೆ ನೀಡುರುವ ಮಾಹಿತಿಯಂತೆ 2014-15ರ ಸಾಲಿನಲ್ಲಿ 10 ಬಿಲಿಯನ್ ಸಿಗರೇಟ್ ಸೇವನೆ ಕಡಿಮೆಯಾಗಿದೆ(2013-14 ರಲ್ಲಿ 93.2 ಬಿಲಿಯನ್ ಇತ್ತು). ಆದರೆ ಸಿಗರೇಟ್ ಗೆ ದಾಸರಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಬೃಹತ್ ಏರಿಕೆಯಾಗಿದೆ.[2015ರ 10 ಅತಿಕೆಟ್ಟ ಕೆಲಸಗಳು; ನಿಮ್ಮ ವೃತ್ತಿ ಯಾವುದು?]

women

ಆದರೆ ಆತಂಕಕಾರಿ ಮಾಹಿತಿಯೊಂದು ಇದರೊಂದಿಗೆ ಸಿಕ್ಕಿದೆ. ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ. 139 ಏರಿಕೆ ಕಂಡಿದ್ದು ಭಾರತದಲ್ಲಿ 12.7(2012) ಮಿಲಿಯನ್ ಹೆಂಗಳೆಯರು ಸಿಗರೇಟ್ ಸುಡುತ್ತಿದ್ದಾರೆ. ಧೂಮಪಾನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ಪುರುಷರಿಂತ ಮಹಿಳೆಯರ ಪ್ರಗತಿಯೇ ಉತ್ತಮವಾಗಿದೆ!

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು:
ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದ ಮಹಿಳೆಯರೇ ದುಶ್ಚಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಶೇ. 52 ಪುರುಷರು ಮತ್ತು ಶೇ. 24 ಮಹಿಳೆಯರು ಧೂಮಪಾನಕ್ಕೆ ಬಲಿಯಾಗಿದ್ದಾರೆ. ನಗರ ಪ್ರದೇಶದ ಶೇ. 38 ಪುರುಷರು ಮತ್ತು ಶೇ. 12 ಮಹಿಳೆಯರು ಸಿಗರೇಟು ದಾಸರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.[ಇದನ್ನು ಓದಿ,,, ಆಮೇಲೆ ಧುಮಪಾನ ಮಾಡೋದು ನಿಮ್ಮ ಇಷ್ಟ]

ತಂಬಾಕು ಬಳಕೆ ಮಾಡುವ ದೇಶಗಳ ಸಾಲಲ್ಲಿ ಭಾರತಕ್ಕೆ ಎರಡನೇ ಸ್ಥಾನ. 2020 ಕ್ಕೆ ಸಿಗರೇಟು ಸೇದುವವರ ಸಂಖ್ಯೆಯಲ್ಲಿ ಶೇ. 20 ಮತ್ತು 2025ರ ವೇಳೆಗೆ ಶೇ. 30 ರಷ್ಟು ಕಡಿಮೆ ಮಾಡಬೇಕು ಎಂಬ ಗುರಿಯನ್ನುನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದೆ. ಆದರೆ ಈಗಿನ ವಾತಾವರಣವನ್ನು ನೋಡಿದರೆ ಅದು ಅಸಾಧ್ಯ ಎಂದೇ ಹೇಳಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Going by the steady fall in cigarette consumption in India, which has the world's second highest number of tobacco users, the goal of Ministry of Health and Family Welfare that was set in 2014 to cut down tobacco use by 20% by 2020 and 30% by 2025 may not be impossible. However, one thing that might come in way is that India houses the second largest number of female smokers after United States.
Please Wait while comments are loading...