ಲಾಕ್ ಡೌನ್ ನಡುವೆಯೂ ಕಚೇರಿ ತೆರೆಯಲು ಬೊಂಬಾಟ್ ಐಡಿಯಾ!

ನವದೆಹಲಿ, ಏಪ್ರಿಲ್.28: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟದ ನಡುವೆ ದೇಶದ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರವು ಕಾರ್ಯಯೋಜನೆಯನ್ನು ರೂಪಿಸಿದೆ. ಮೇ.03ರ ಲಾಕ್ ಡೌನ್ ನಂತರದಲ್ಲಿ ಕೆಲವು ಕಚೇರಿಗಳನ್ನು ತೆರೆಯಲು ಸೂಚನೆ ನೀಡಲಾಗಿದೆ.

Recommended Video

      ಮಂಡ್ಯದಲ್ಲಿ ಕೊರೊನ ಪರೀಕ್ಷೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ , ಸಚಿವ ಡಾ. ನಾರಾಯಣಗೌಡ ಪ್ರತಿಕ್ರಿಯೆ

      ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಬಹುತೇಕರು ಭಾರತ ಲಾಕ್ ಡೌನ್ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ದೇಶದಲ್ಲಿ ಲಾಕ್ ಡೌನ್ ಮುಂದುವರಿದರೂ ಕೆಲವೆಡೆ ವಿನಾಯಿತಿ ನೀಡಲು ಚಿಂತನೆ ನಡೆಸಲಾಗುತ್ತಿದೆ.

      ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಪತ್ತೆಯಾದ ಮಾತ್ರಕ್ಕೆ ಕಚೇರಿಯನ್ನು ಬಂದ್ ಮಾಡುವುದು ಅಥವಾ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗುವುದಿಲ್ಲ. ಬದಲಿಗೆ ಕೊರೊನಾ ವೈರಸ್ ಸೋಂಕಿತನ ಸಂಪರ್ಕದಲ್ಲಿದ್ದ ಜನರನ್ನು ದಿಗ್ಬಂಧನದಲ್ಲಿ ಇರಿಸಲಾಗುವುದು ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

      ಮುಖ್ಯ ಕಚೇರಿ ಮುಚ್ಚುವ ಯಾವುದೇ ಪ್ರಸ್ತಾಪವಿಲ್ಲ

      ಮುಖ್ಯ ಕಚೇರಿ ಮುಚ್ಚುವ ಯಾವುದೇ ಪ್ರಸ್ತಾಪವಿಲ್ಲ

      ಕೊರೊನಾ ವೈರಸ್ ಸೋಂಕಿತನು ಪತ್ತೆಯಾಗುತ್ತಿದ್ದಂತೆ ಜಿಲ್ಲಾ ಆರೋಗ್ಯ ತಜ್ಞರು ನೀಡುವ ಸಲಹೆಯಂತೆ ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಸೋಂಕಿತನು ಕೆಲಸ ಮಾಡುತ್ತಿದ್ದ ಮುಖ್ಯ ಕಚೇರಿಯನ್ನು ಮೂರು ತಿಂಗಳ ಅವಧಿಯವರೆಗೂ ಸೀಲ್ ಡೌನ್ ಮಾಡುವ ಬಗ್ಗೆ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡದ್ದಾರೆ.

      ಯಾವುದೇ ಕಾರ್ಮಿಕರಿಗೆ ಮಾನಸಿಕ ಹಿಂಸೆ ನೀಡುವಂತಿಲ್ಲ

      ಯಾವುದೇ ಕಾರ್ಮಿಕರಿಗೆ ಮಾನಸಿಕ ಹಿಂಸೆ ನೀಡುವಂತಿಲ್ಲ

      ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ನೋಟಿಸ್ ಜಾರಿಗೊಳಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಉತ್ಪಾದನಾ ಕಾರ್ಖಾನೆಗಳು ಮತ್ತು ವಾಣಿಜ್ಯ ಹಾಗೂ ವ್ಯಾಪಾರಿ ಸಂಸ್ಥೆಗಳು ಕಂಪನಿಯ ಕಾರ್ಮಿಕರಿಗೆ ಒತ್ತಡ ಹಾಗೂ ಮಾನಸಿಕ ಹಿಂಸೆ ನೀಡುವಂತಿಲ್ಲ ಎಂದು ಸೂಚಿಸಲಾಗಿತ್ತು.

      ಕೊರೊನಾ ನಿಯಂತ್ರಣ ಹಾಗೂ ಕಡಿವಾಣಕ್ಕೆ ಕ್ರಮ

      ಕೊರೊನಾ ನಿಯಂತ್ರಣ ಹಾಗೂ ಕಡಿವಾಣಕ್ಕೆ ಕ್ರಮ

      ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರವು ಕೊರೊನಾ ವೈರಸ್ ಸೋಂಕು ನಿಯಂತ್ರಣ ಹಾಗೂ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಈ ಪೈಕಿ ಕಂಟೋನ್ಮೆಂಟ್ ಝೋನ್ ಗಳನ್ನು ಮಾಡುವುದು ಹಾಗೂ ಸಾಮೂಹಿಕವಾಗಿ ಕಾರ್ಮಿಕರನ್ನು 14 ದಿನಗಳ ಕಾಲ ದಿಗ್ಬಂಧನದಲ್ಲಿ ಇರಿಸುವ ಮುನ್ನ ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆ ನಡೆಸುವಂತೆ ಸಲಹೆ ನೀಡಿವೆ.

      ಪೂಲ್ ಟೆಸ್ಟ್ ಮಾಡಿದ್ದಲ್ಲಿ ಸೋಂಕಿತ ಪ್ರದೇಶ ಗುರುತು ಪತ್ತೆ

      ಪೂಲ್ ಟೆಸ್ಟ್ ಮಾಡಿದ್ದಲ್ಲಿ ಸೋಂಕಿತ ಪ್ರದೇಶ ಗುರುತು ಪತ್ತೆ

      ಕೊರೊನಾ ವೈರಸ್ ಸೋಂಕಿತರ ಪೂಲ್ ಟೆಸ್ಟ್ ನಡೆಸಲು ಆಂಟಿ ಜೆನ್ ಕಿಟ್ ಲಭ್ಯತೆಯನ್ನು ನೋಡಿಕೊಳ್ಳಬೇಕಾಗುತ್ತದೆ. ಪೂಲ್ ಟೆಸ್ಟ್ ಮೂಲದ ನಿರ್ದಿಷ್ಟ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರಿದ್ದಾರೆ. ಯಾವ ಪ್ರದೇಶವು ಅಪಾಯಕಾರಿಯಾಗಿದ್ದು, ಯಾವ ಕಚೇರಿಯ ಯಾವ ಭಾಗ, ಯಾವ ಕಟ್ಟಡದ ಯಾವ ವಿಭಾಗವನ್ನು ಸೀಲ್ ಡೌನ್ ಮಾಡಬೇಕು. ಯಾವ ಕಚೇರಿಗಳು, ಅಂಗಡಿಗಳನ್ನು ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಣೆಗೆ ಅನುಮತಿ ನೀಡಬೇಕು ಎನ್ನುವುದನ್ನು ಪತ್ತೆ ಮಾಡುವುದಕ್ಕೆ ಸುಲಭವಾಗುತ್ತದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ಅಧ್ಯಕ್ಷ ಕೆ. ಶ್ರೀನಾಥ್ ರೆಡ್ಡಿ ತಿಳಿಸಿದ್ದಾರೆ.

      ಕೇಂದ್ರ ಆರೋಗ್ಯ ಸಚಿವಾಲಯದ ಬೊಂಬಾಟ್ ಐಡಿಯಾ

      ಕೇಂದ್ರ ಆರೋಗ್ಯ ಸಚಿವಾಲಯದ ಬೊಂಬಾಟ್ ಐಡಿಯಾ

      ಕೊರೊನಾ ವೈರಸ್ ಸೋಂಕಿತನು ಕಾಣಿಸಿಕೊಂಡ ಕಚೇರಿಯನ್ನು ಸಂಪೂರ್ಣವಾಗಿ ಲಾಕ್ ಮಾಡುವ ಅಗತ್ಯವಿಲ್ಲ. ಅದರ ಬದಲಿಗೆ ಕಚೇರಿಯಲ್ಲಿ ಸ್ಯಾನಿಟೈಸ್ ಮಾಡಿಸಿ 12 ಗಂಟೆಗಳ ಬಳಿಕ ಮತ್ತೆ ಎಂದಿನಂತೆ ತೆರೆಯಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಲಹೆ ನೀಡಿದೆ. ತಬ್ಲಿಘ್ ಜಮಾತ್ ಪ್ರಕರಣದಲ್ಲಿ ಇದೇ ತಂತ್ರವನ್ನು ಅನುಸರಿಸಲಾಗಿತ್ತು. ಸಂಪೂರ್ಣ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 48 ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು ಎಂದು ನ್ಯಾಷನಲ್ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ನಿರ್ದೇಶಕ ಸುಜೀತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

      ಕೇಂದ್ರ ಸರ್ಕಾರದಿಂದ ಸಿಬ್ಬಂದಿಗೂ ಮಾರ್ಗಸೂಚಿ

      ಕೇಂದ್ರ ಸರ್ಕಾರದಿಂದ ಸಿಬ್ಬಂದಿಗೂ ಮಾರ್ಗಸೂಚಿ

      ಒಂದು ಕಚೇರಿಯ ಒಟ್ಟು ಸಿಬ್ಬಂದಿಯ ಶೇ.50ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರ್ ಆಗಬೇಕು. ಸಿಬ್ಬಂದಿ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆಗಾಗ ಸ್ಯಾನಿಟೈಸರ್ ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಆರೋಗ್ಯದಲ್ಲಿ ಕೊಂಚ ಏರುಪೇರಾದಂತೆ ಭಾಸವಾದರೂ ತಕ್ಷಣ ಕಚೇರಿಯಿಂದ ಹೊರಟು ವೈದ್ಯರನ್ನು ಸಂಪರ್ಕಿಸಬೇಕು. ನಿರ್ದಿಷ್ಟ ಅವಧಿಯವರೆಗೂ ಗೃಹ ದಿಗ್ಬಂಧನದಲ್ಲಿ ರೆಸ್ಟ್ ತೆಗೆದುಕೊಳ್ಳುವುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+