ಡಾಲರ್ ಗಂಡನ ಮೋಹಕ್ಕೊಳಗಾಗಿ ಮೋಸ ಹೋದವರು

ನವದೆಹಲಿ, ಡಿ. 11: 'ವಿದೇಶಿ ಗಂಡ' ಎಂಬುದು ಇಂದಿನ ಯುವತಿಯರ ಬಹುದೊಡ್ಡ ಕನಸಿನಲ್ಲಿ ಒಂದು. ಅದರಲ್ಲೂ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಸಿಂಗಪುರದಂತಹ ದೇಶಗಳಲ್ಲಿ ಉದ್ಯೋಗದಲ್ಲಿರುವ ಹುಡುಗ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಅಚ್ಚುಮೆಚ್ಚು.

ಆದರೆ, ಇವರಲ್ಲಿ ಮೋಸಗಾರರೂ ಇರುತ್ತಾರೆ ಎಚ್ಚರ... ಹೀಗೆ ಮೋಸದ ಮದುವೆ ಪ್ರಕರಣಗಳ ಅಂಕಿಅಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. [ಸೆಕ್ಸ್ ನಿರಾಕರಿಸಿದ ದೇವಾನಿ ಕೊಲೆಗಾರನಲ್ಲ]

marry

ಕೇವಲ 2011-12ರ ಅವಧಿಯಲ್ಲೇ ಮೋಸದ ಮದುವೆ ಕುರಿತು ದಾಖಲಾದ ಪ್ರಕರಣಗಳ ಸಂಖ್ಯೆ 188. ಇದರಲ್ಲಿ ಅಮೆರಿಕ ನಿವಾಸಿ ಎಂದು ಹೇಳಿ ಏಮಾರಿಸಿದವರು 139. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ನಂತರ ಸ್ಥಾನದಲ್ಲಿ ಕೆನಡಾ (22), ಯುನೈಟೆಡ್ ಕಿಂಗ್‌ಡಮ್ (13) ಹೆಸರು ಹೇಳಿ ಮೋಸಗೊಳಿಸಿದವರು ಬರುತ್ತಾರೆ. [ವಿದೇಶಿ ಪ್ರವಾಸಿಗರ ಮೇಲೆ ಉಗ್ರರ ದೃಷ್ಟಿ]

ಈ ಕುರಿತು ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಮಾಹಿತಿ ನೀಡಿದ್ದಾರೆ. ಹೀಗೆ ಮೋಸಹೋದವರ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 3,000 ಡಾಲರ್ (ಸುಮಾರು 1.8 ಲಕ್ಷ ರೂ.) ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 2,000 (ಸುಮಾರು 1.2 ಲಕ್ಷ ರೂ.) ಡಾಲರ್ ಹಣ ವ್ಯಯಿಸಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+