ಗೊಗೊಯ್ ವಿರುದ್ಧ ಪ್ರತಿಭಟನೆ: ಸುಪ್ರೀಂಕೋರ್ಟ್ ಹೊರಗೆ ಸೆಕ್ಷನ್ 144 ಜಾರಿ

ನವದೆಹಲಿ, ಮೇ 7: ಸುಪ್ರೀಂಕೋರ್ಟ್‌ನ ಮಾಜಿ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದನ್ನು ವಿರೋಧಿಸಿ ಸಂತ್ರಸ್ತೆಯ ಪರ ಮಹಿಳಾ ವಕೀಲರು ಮತ್ತು ಕಾರ್ಯಕರ್ತರು ಸುಪ್ರೀಂಕೋರ್ಟ್ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಸುಪ್ರೀಂಕೋರ್ಟ್ ಹೊರಭಾಗದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ನ್ಯಾಯಾಲಯದ ಮುಂಭಾಗ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದ್ದು, ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

ತಾವು ಸುಪ್ರೀಂಕೋರ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ ಸಿಜೆಐ ರಂಜನ್ ಗೊಗೊಯ್ ಅವರು ತಮ್ಮ ಬಳಿ ಲೈಂಗಿಕ ಸಹಕಾರಕ್ಕೆ ಕೋರಿದ್ದರು. ತಾವು ಅದನ್ನು ತಿರಸ್ಕರಿಸಿದ್ದಕ್ಕೆ ಸೇವೆಯಿಂದ ವಜಾಗೊಳಿಸಲಾಗಿತ್ತು. ದೆಹಲಿ ಪೊಲೀಸ್ ಇಲಾಖೆಯಲ್ಲಿದ್ದ ಪತಿ ಹಾಗೂ ಅವರ ಸಹೋದರನನ್ನು ಕೂಡ ವಿನಾಕಾರಣ ಕೆಲಸದಿಂದ ಅಮಾನತು ಮಾಡಲಾಗಿತ್ತು. ಸುಪ್ರೀಂಕೋರ್ಟ್‌ನಲ್ಲಿಯೇ ಕೆಲಸಕ್ಕೆ ಇದ್ದ ಪತಿಯ ಮತ್ತೊಬ್ಬ ಸಹೋದರನನ್ನು ಕೂಡ ಬಳಿಕ ವಜಾಗೊಳಿಸಲಾಗಿತ್ತು. ಬಳಿಕ ತಮ್ಮ ಮೇಲೆ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡಿಸಲು ಲಂಚ ಪಡೆದ ಆರೋಪ ಹೊರಿಸಿ ಬಂಧಿಸಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದರು.

women lawyers activists protest outside supreme court against clean chit to CJI Ranjan gogoi

ಮಹಿಳೆಯ ಆರೋಪದ ಕುರಿತು ವಿಚಾರಣೆಗಾಗಿ ಸುಪ್ರೀಂಕೋರ್ಟ್‌ನ ಮೂವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ನ್ಯಾಯಯುತವಾಗಿ ತೀರ್ಪು ನೀಡುತ್ತದೆ ಎಂದು ತಮಗೆ ಅನಿಸುತ್ತಿದ್ದ ಎಂದಿದ್ದ ಮಹಿಳೆ ವಿಚಾರಣೆಗೆ ಹಾಜರಾಗಿರಲಿಲ್ಲ. ಸಮಿತಿ ಸೋಮವಾರ ವರದಿ ಸಲ್ಲಿಸಿದ್ದು, ಅದರಲ್ಲಿ ಸಿಜೆಐ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

'ಸಿಜೆಐ ಅವರನ್ನು ಆರೋಪ ಮುಕ್ತರನ್ನಾಗಿಸಿದ್ದು ತೀವ್ರ ಬೇಸರವಾಗಿದೆ, ನಾನು ಖಿನ್ನತೆಗೆ ಒಳಗಾಗಿದ್ದೇನೆ. ವ್ಯವಸ್ಥೆ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದೇನೆ. ಪ್ರಭಾವಿಗಳನ್ನು ಎದುರಿಸಿ ನಿಂತಾಗ ನಮ್ಮ ವ್ಯವಸ್ಥೆಯು ಸಾಮಾನ್ಯರಿಗೆ ನ್ಯಾಯ ಕೊಡುತ್ತದೆ ಎನ್ನುವುದು ಸುಳ್ಳಾಗಿದೆ' ಎಂದು ದೂರುದಾರ ಮಹಿಳೆ ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+