ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಯುವತಿ ಆತ್ಮಹತ್ಯೆ

ನವದೆಹಲಿ, ಜೂನ್ 08: ಇಲ್ಲಿನ ಮಯೂರ್ ವಿಹಾರ್ ನ ಫೈವ್ ಸ್ಟಾರ್ ಹೋಟೆಲ್ ವೊಂದರಲ್ಲಿ ಹುಟ್ಟುಹಬ್ಬ ಆಚರಣೆಗೆಂದು ಬಂದಿದ್ದ 18 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿದೆ.

ಮಯೂರ ವಿಹಾರ್​ ಹಾಲಿಡೇ ಇನ್​ ಹೋಟೆಲ್​ ಕೊಠಡಿ 1137ರ ಶೌಚಾಲಯದಲ್ಲಿ 18 ವರ್ಷ ವಯಸ್ಸಿನ ಯುವತಿಯ ದೇಹ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿಲ್ಲ.

ಯುವತಿ ಹಾಗೂ ಆಕೆಯ ಬಾಯ್​ ಫ್ರೆಂಡ್​ ಇಬ್ಬರು ನವದೆಹಲಿಯ ಷಹಾದಾರಾ ಪ್ರದೇಶದ ನಿವಾಸಿಗಳಾಗಿದ್ದು, ಗುರುವಾರ ರಾತ್ರಿ ಹೋಟೆಲ್ ​ಗೆ ಚೆಕ್​ ಇನ್​ ಆಗಿದ್ದರು. ಯುವತಿಯ ಹುಟ್ಟುಹಬ್ಬದ ಆಚರಣೆಗೆಂದು ಬಂದಿದ್ದರು ಎಂದು ತಿಳಿದು ಬಂದಿದೆ.

Woman found dead under mysterious condition inside washroom of 5-star hotel in Mayur Vihar

ವಿಷಯ ತಿಳಿದ ತಕ್ಷಣ ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾಲಕರಿಗೆ ವಿಷಯ ತಿಳಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾದ ಬೆನ್ನಲ್ಲೇ ಆಕೆಯ ಬಾಯ್​ ಫ್ರೆಂಡ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬರ್ಥ್ ಡೇ ಪಾರ್ಟಿ ನಂತರ ನಾನು ಹೋಟೆಲ್ ನಿಂದ ಹೊರಟೆ ನಂತರ ಎಷ್ಟು ಬಾರಿ ಕರೆ ಆಡಿದರೂ ಆಕೆ ಕರೆ ಸ್ವೀಕರಿಸಲಿಲ್ಲ ಎಂದು ವಿಚಾರಣೆ ವೇಳೆ ಯುವಕ ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+