ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆ ಹಕ್ಕು ಕೇಳುವಂತಿಲ್ಲ!

court
ನವದೆಹಲಿ,ನ. 18 : ಪತಿಯ ಆಸ್ತಿಯಲ್ಲಿ ಪತ್ನಿ ಹಕ್ಕು ಹೊಂದಿರಬಹುದು. ಆದರೆ, ಅತ್ತೆ-ಮಾನವ ಆಸ್ತಿಯಲ್ಲಿ ಆಕೆ ಪಾಳು ಕೇಳುವಂತಿಲ್ಲ ಎಂದು ದೆಹಲಿ ನ್ಯಾಯಾಲಯವೊಂದು ಆದೇಶ ನೀಡಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಅತ್ತೆ-ಮಾವನ ಆಸ್ತಿಯಲ್ಲಿನ ಪಾಲು ಕೇಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಸರ್ಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರು ಅತ್ತೆ-ಮಾವ ವಾಸಿತ್ತಿರುವ ಮನೆಯ ಹಕ್ಕು ಕೇಳಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನವದೆಹಲಿ ಹೆಚ್ಚುವರಿ ಸೆಷನ್ಸ್ ಜಡ್ಜ್ ಕಾಮಿನಿ ಲಾವೊ ಅವರು ತಮ್ಮ ಆದೇಶದಲ್ಲಿ, ಪತ್ನಿಯು ಪತಿಯ ಆಸ್ತಿಯ ಮೇಲೆ ಹಕ್ಕು ಹೊಂದಿದ್ದಾರೆ. ಆದರೆ, ಅವರಿಗೆ ಅತ್ತೆ-ಮಾವನ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ ಎಂದು ಆದೇಶ ನೀಡಿದ್ದಾರೆ.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮಹಿಳೆ ಕೇಳಿರುವ ಅತ್ತ-ಮಾವನ ಮನೆಯಲ್ಲಿ ಆಕೆಯ ಪತಿಯ ಯಾವುದೇ ಕೊಡುಗೆ ಇಲ್ಲದಿರುವುದುದನ್ನು ನ್ಯಾಯಾಲಯ ಗಮನಿಸಿದೆ. ಮಹಿಳೆಯ ಪತಿ ಉದ್ಯೋಗದಲ್ಲಿದ್ದು, ಅನೇಕ ವರ್ಷಗಳಿಂದ ಚಂಡೀಗಢದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ತಂದೆ-ತಾಯಿಯೊಂದಿಗೆ ವಾಸಿಸುತ್ತಿಲ್ಲ ಎಂಬುದನ್ನು ಗಮನಿಸಿರುವ ಕೋರ್ಟ್, ಆದೇಶ ನೀಡಿದೆ.

ವೈದ್ಯಗೆ ಮನೆಯಲ್ಲಿ ಪಾಲು ನೀಡಲು ಆಕೆಯ ಅತ್ತೆ- ಮಾವನ ಅವರು ಸಹ ಸಮಮತವ ವ್ಯಕ್ತಪಡಿಸಿಲ್ಲ. ಆದ್ದರಿಂದ ತನ್ನ ಆದೇಶದಲ್ಲಿ ಕೋರ್ಟ್ ಅತ್ತೆ-ಮಾವನಿಗೆ ಸೇರಿದ ಆಸ್ತಿಯಲ್ಲಿ ಸೊಸೆಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿದೆ. ಮಹಿಳೆ ಮತ್ತು ಆಕೆಯ ಪತಿ ಉದ್ಯೋಗದಲ್ಲಿದ್ದಾರೆ, ಜೀವನ ನಡೆಸಲು ಸಶಕ್ತರಾಗಿದ್ದಾರೆ. ಆದ್ದರಿಂದ ಅವರಿಗೆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಇಲ್ಲವೆಂದು ಹೇಳಿದೆ.

ಅತ್ತೆ-ಮಾವ ಅವರ ಇಚ್ಛೆಗೆ ವಿರುದ್ಧವಾಗಿ ಸೊಸೆಗೆ ಮನೆಯ ಹಕ್ಕು ನೀಡಿದರೆ, ಅಲ್ಲಿ ವಾಸಿಸುವ ಹಿರಿಯ ಜೀವಗಳ ನೆಮ್ಮದಿಗೆ ಭಂಗ ಉಂಟಾಗುತ್ತದೆ. ಆದ್ದರಿಂದ ಅವರ ಇಷ್ಟಕ್ಕೆ ವಿರುದ್ಧವಾಗಿ ಅಧಿಕಾರ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+