• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕಮಲ್ ನಾಥ್‌ರ ಕೊರಳಪಟ್ಟಿ ಹಿಡಿದು ವೇದಿಕೆಯಿಂದ ಕೆಳಗಟ್ಟುತ್ತೇನೆ'

|

ನವದೆಹಲಿ, ಜನವರಿ 23: ಕಾಂಗ್ರೆಸ್ ಬಿಡುಗಡೆ ಮಾಡಿರುವ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಹೆಸರಿರುವುದು ಅಕಾಲಿದಳ ಮುಖ್ಯಸ್ಥ ಮಂಜಿಂದರ್ ಸಿಂಗ್ ಅವರ ಕೆಂಗಣ್ಣಿಗೆ ಕಾರಣವಾಗಿದೆ.

ಒಂದೊಮ್ಮೆ ಕಮಲ್ ನಾಥ್ ನಗರದಲ್ಲಿ ಭಾಷಣ ಮಾಡಿದ್ದೇ ಆದರೆ ಅವರ 'ಕೊರಳಪಟ್ಟಿಯನ್ನು ಹಿಡಿದು ವೇದಿಕೆಯಿಂದ ಕೆಳಗಟ್ಟಲು ನಾನು ಸಿದ್ಧನಿದ್ದೇನೆ' ಎಂದು ಅವರು ಹೇಳಿದ್ದಾರೆ.

ದೆಹಲಿ ಚುನಾವಣೆ: 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್

ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಕಾಂಗ್ರೆಸ್ ಬಿಡುಗಡೆ ಮಾಡಿರುವ 40 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಹೆಸರೂ ಇದೆ.

ದೆಹಲಿಯಲ್ಲಿ ಭಾಷಣ ಮಾಡಲು ನಾವು ಬಿಡುವುದಿಲ್ಲ

ದೆಹಲಿಯಲ್ಲಿ ಭಾಷಣ ಮಾಡಲು ನಾವು ಬಿಡುವುದಿಲ್ಲ

ಕಮಲ್ ನಾಥ್ ಅವರಿಗೆ ಯಾವುದೇ ಕಾರಣಕ್ಕೂ ದೆಹಲಿಯಲ್ಲಿ ಭಾಷಣ ಮಾಡಲು ನಾವು ಬಿಡುವುದಿಲ್ಲ. ನಾವು ಕಾಂಗ್ರೆಸ್‌ಗೆ ಚಾಲೆಂಜ್ ಮಾಡುತ್ತಿದ್ದೇವೆ ಒಂದೊಮ್ಮೆ ಕಮಲ್‌ ನಾಥ್ ದೆಹಲಿಯ ಯಾವುದೇ ಭಾಗದಲ್ಲಾದರೂ ಭಾಷಣ ಮಾಡುತ್ತಿರುವುದು ನಮಗೆ ತಿಳಿದುಬಂದರೆ ಕೊರಳ ಪಟ್ಟಿ ಹಿಡಿದು ವೇದಕೆಯಿಂದ ಕೆಳಗಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

1984 ಸಿಖ್ ದಂಗೆಯಲ್ಲಿ ಕಮಲ್‌ನಾಥ್ ಪಾತ್ರ

1984 ಸಿಖ್ ದಂಗೆಯಲ್ಲಿ ಕಮಲ್‌ನಾಥ್ ಪಾತ್ರ

1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ದಂಗೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಹೆಸರು ಕೇಳಿಬಂದಿತ್ತು. ಸಿಖ್ ದಂಗೆಯಲ್ಲಿ ಹತ್ಯೆಯಾದ ಸಿಖ್ಖರ ಸಾವಿಗೆ ಅವರೂ ಕೂಡ ಕಾರಣ ಎಂದು ಆರೋಪಿಸಿದರು.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಸ್ತಿ ಏರಿಕೆ ಎಷ್ಟು?

ಪ್ರಕರಣವನ್ನು ತೆರೆಯಲು ಸಾಕಷ್ಟು ಪ್ರಯತ್ನ

ಪ್ರಕರಣವನ್ನು ತೆರೆಯಲು ಸಾಕಷ್ಟು ಪ್ರಯತ್ನ

ಸಿಖ್ ದಂಗೆಗೆ ಸಂಭಂಧಿಸಿದ ಪ್ರಕರಣವನ್ನು ಓಪನ್ ಮಾಡಲು ಸಾಕಷ್ಟು ಕಷ್ಟ ಪಟ್ಟೆವು ಆದರೆ. ಕಾಂಗ್ರೆಸ್ ಮಾತ್ರ ಕಮಲ್‌ನಾಥ್‌ಗೆ ಉತ್ತಮ ಸ್ಥಾನ, ಉತ್ತಮ ಅವಕಾಶಗಳನ್ನು ನೀಡುತ್ತಾ, ಅವರ ತಪ್ಪನ್ನು ಮುಚ್ಚಿ ಹಾಕುವ ಕೆಲಸವನ್ನು ಮಾಡಿತು.

ದೆಹಲಿ ಚುನಾವಣೆ ಕಾಂಗ್ರೆಸ್‌ನಿಂದ 40 ಸ್ಟಾರ್ ಪ್ರಚಾರಕರು

ದೆಹಲಿ ಚುನಾವಣೆ ಕಾಂಗ್ರೆಸ್‌ನಿಂದ 40 ಸ್ಟಾರ್ ಪ್ರಚಾರಕರು

ಕಾಂಗ್ರೆಸ್ ಒಟ್ಟು 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಟುಗಡೆ ಮಾಡಿದೆ.ಪಟ್ಟಿಯಲ್ಲಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್, ಸಂಸದ ಶಶಿ ತರೂರ್, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಫೈರ್ ಬ್ರಾಂಡ್ ಶತ್ರುಘ್ನ ಸಿನ್ಹಾ ಅವರು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ರಾಜಕೀಯ ಅಂತೆಯೇ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪ್ರಮುಖರಾಗಿದ್ದಾರೆ.

English summary
Akali Dal leader Manjinder Singh Sirsa said that Kamal Nath will be dragged out by his collar if he addresses a public rally in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X