ಸೋನಿಯಾ ಅಥವಾ ರಾಹುಲ್ ಯಾರಾಗಬಹುದು ಕಾಂಗ್ರೆಸ್ ಅಧ್ಯಕ್ಷರು?
Recommended Video
ನವದೆಹಲಿ, ಮೇ 31: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕಾಂಗ್ರೆಸ್ ಸಂಸದರ ಸಭೆಯು ಶನಿವಾರ ನವದೆಹಲಿಯಲ್ಲಿ ನಡೆಯಲಿದೆ. ಅಲ್ಲಿ ತಮ್ಮ ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ರಾಹುಲ್ ಪಟ್ಟು ಹಿಡಿದು ಕೂತಿದ್ದಾರೆ.
ಈ ವರೆಗೆ ಅವರ ಮನವೊಲಿಸಲು ಸಾಧ್ಯವಾಗಿಲ್ಲ ಎನ್ನುವ ಮೂಲಗಳು, ಕನಿಷ್ಠ ಪಕ್ಷ ಸಂಸತ್ ನಲ್ಲಿ ಪಕ್ಷವನ್ನು ಮುನ್ನಡೆಸುವಂತೆ ಒಪ್ಪಿಸಲು ಯತ್ನಿಸುತ್ತವೆ ಎನ್ನುತ್ತವೆ. ಐವತ್ತೆರಡು ಸ್ಥಾನಗಳಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಗೆ ಈ ಬಾರಿ ಅಧಿಕೃತ ವಿರೋಧ ಪಕ್ಷದ ಸ್ಥಾನ-ಮಾನ ಸಿಗುವುದಿಲ್ಲ. ಅದಕ್ಕೆ ಇನ್ನೂ ಮೂರು ಸ್ಥಾನಗಳ ಕೊರತೆ ಇದೆ.
ಕಾಂಗ್ರೆಸ್ ನ ಸಂಸದೀಯ ನಾಯಕಿಯಾಗಿ ಸೋನಿಯಾ ಗಾಂಧಿ ಇರಬೇಕು ಎಂಬ ಪ್ರಸ್ತಾವ ಇಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಕಾಂಗ್ರೆಸ್ ನ ಹಲವು ನಾಯಕರ ಒತ್ತಾಯದ ನಂತರವೂ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪಿಲ್ಲ.

ಅಷ್ಸ್ಟೇ ಅಲ್ಲ, ಪಕ್ಷದ ನಾಯಕರ ಪೈಕಿ ಅಹ್ಮದ್ ಪಟೇಲ್ ಹಾಗೂ ಕೆ.ಸಿ.ವೇಣುಗೋಪಾಲ್ ರನ್ನು ಬಿಟ್ಟು ಯಾರನ್ನೂ ರಾಹುಲ್ ಗಾಂಧಿ ಭೇಟಿ ಕೂಡ ಆಗಿಲ್ಲ. ಇನ್ನು ಗುರುವಾರದಂದು ತನ್ನ ತಾಯಿ ಸೋನಿಯಾ ಗಾಂಧಿ ಜತೆಗೆ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿ ಆಗಿದ್ದರು.
ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದ ರಾಹುಲ್, ನನ್ನ ನಿರ್ಧಾರವನ್ನು ಬದಲಿಸಿಕೊಳ್ಳುವುದಿಲ್ಲ. ಯಾರು ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುತ್ತಾರೋ ಅವರಿಗೆ ನೆರವಾಗುತ್ತೇನೆ ಎಂದಿದ್ದಾರೆ.












Click it and Unblock the Notifications