ದೆಹಲಿಯವರೆಂದರೆ ಯಾರು? ಮಿಸ್ಟರ್ ಕೇಜ್ರಿವಾಲ್: ಚಿದಂಬರಂ ಪ್ರಶ್ನೆ
ನವದೆಹಲಿ, ಜೂನ್ 8: ದೆಹಲಿಯವರೆಂದರೆ ಯಾರು, ದೆಹಲಿಯಲ್ಲಿ ಇದ್ದಾಕ್ಷಣ ಅವರೆಲ್ಲ ದೆಹಲಿಯವರೇ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.
Recommended Video
ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಅಭಾವವಿರುವುದರಿಂದ ದಯವಿಟ್ಟು ಚಿಕಿತ್ಸೆಗೆಂದು ಯಾರು ದಹಲಿಗೆ ಬರಬೇಡಿ ಇಲ್ಲಿರುವ ಆಸ್ಪತ್ರೆಯನ್ನು ಸಧ್ಯಕ್ಕೆ ದೆಹಲಿಯವರಿಗೆಂದೇ ಮೀಸಲಿರಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ಈ ರೀತಿ ಹೇಳಿಕೆ ನೀಡುವ ಮುನ್ನ ಕಾನೂನು ಸಲಹೆ ಪಡೆದಿದ್ದೀರಾ, ದಯವಿಟ್ಟು ಹೇಳುತ್ತೀರಾ ದೆಹಲಿಯವರೆಂದರೆ ಯಾರು ಎಂದು, ನಾನು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಅಥವಾ ದೆಹಲಿಯಲ್ಲಿ ವಾಸವಿದ್ದರೆ ದೆಹಲಿಯವನಾಗಿಬಿಡುತ್ತೀನಾ ಎಂದು ಟ್ವೀಟ್ ಮಾಡಿದ್ದಾರೆ.
Mr. Kejriwal says Delhi hospitals are only for Delhiites. Will he please tell us who is a Delhiite?
— P. Chidambaram (@PChidambaram_IN) June 8, 2020
If I live or work in Delhi, am I a Delhiite?
ಜನ ಆರೋಗ್ಯ ಯೋಜನಾ ಅಥವಾ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನೋಂದಣಿಯಾದವರು ದೇಶದ ಯಾವುದೇ ಮೂಲೆಯಲ್ಲಾದರೂ, ಸರ್ಕಾರಿ, ಖಾಸಗಿ ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ನಾನು ನಂಬಿದ್ದೇನೆ.
10 ಸಾವಿರ ಹಾಸಿಗೆಗಳನ್ನು ದೆಹಲಿ ನಿವಾಸಿಗಳಿಗೆ ಮೀಸಲಿಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಬೇಕಾಗುತ್ತದೆ.ಒಟ್ಟು ಐದು ಮಂದಿ ವೈದ್ಯರಿರುವ ಸಮಿತಿಯನ್ನು ರೂಪಿಸಲಾಗಿದೆ.

ಇದೀಗ ಕೊರೊನಾ ಸೋಂಕಿತರಿಗಾಗಿ ಕೇವಲ 9 ಸಾವಿರ ಹಾಸಿಗೆಗಳಿವೆ ಜೂನ್ ಮುಗಿಯುವರೊಳಗಾಗಿ 15 ಸಾವಿರ ಹಾಸಿಗೆಗಳು ಲಭ್ಯವಾಗುವಂತೆ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೆಹಲಿ ಸರ್ಕಾರ ಮಾತ್ರ ನಮ್ಮ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಲ್ಲ ಎಂದು ಹೇಳುತ್ತಿದೆ. ದೆಹಲಿಯಲ್ಲಿ 29 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳಿವೆ.












Click it and Unblock the Notifications