ರಾಜ್ಯಕ್ಕೆ ತಲುಪಿದೆಯೇ ರು 500 ಹೊಸ ನೋಟು?

Posted By:
Subscribe to Oneindia Kannada

ಬೆಂಗಳೂರು ನವೆಂಬರ್ 22: ನೋಟು ಬದಲಾವಣೆಯಿಂದ ರಾಜ್ಯದ ಎಲ್ಲೆಡೆ ರು 2000 ಹೊಸ ನೋಟು ಮಾತ್ರ ಕಾಣಿಸುತ್ತಿದೆ. ರು 500 ಹೊಸ ನೋಟು ರಾಜ್ಯಕ್ಕೆ ಇನ್ನು ಬಂದೇ ಇಲ್ಲ.

ಹೊಸ ನೋಟುಗಳ ಬದಲಾವಣೆಯಾಗಿ ಒಟ್ಟು 13 ದಿನಗಳೇ ಕಳೆದಿದೆ. ನ. 10 ನಂತರ ಎಲ್ಲ ರಾಜ್ಯಕ್ಕೆ ರು 2000 ನೋಟುಗಳನ್ನು ವಿತರಿಸಲಾಗಿದೆ. ರಾಜ್ಯದ ಬ್ಯಾಂಕುಗಳಿಗೆ ಮುಂಬೈ ಪ್ರಧಾನ ಕಚೇರಿಯಿಂದ ರು 500 ಹೊಸ ನೋಟುಗಳನ್ನು ವಿತರಿಸಿಯೇ ಇಲ್ಲ.

ನೋಟುಗಳ ವಿತರಣೆಯ ಮಾಹಿತಿಗಾಗಿ ನಾವೂ ಕಾಯುತ್ತಿದ್ದೇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ನೋಟಿಗಾಗಿ ಸಾಲಿನಲ್ಲಿ ನಿಂತಾಗ ಮಾಡಬಹುದಾದ 12 ಕೆಲಸಗಳು]

new rs 500 note

ಸಾಮಾನ್ಯವಾಗಿ ರು 100,500, 1000 ನೋಟುಗಳು ಹೆಚ್ಚು ಬಳಸಲ್ಪಡುತ್ತವೆ ಆದರೆ ನೂರು, ಎರಡು ಸಾವಿರ ರುಪಾಯಿ ನೋಟುಗಳು ಸದ್ಯದ ಬಳಕೆಯಾಗಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ.

ರಿಸರ್ವ್ ಬ್ಯಾಂಕ್ ಮಾಹಿತಿ ಪ್ರಕಾರ, ಚಲಾವಣೆಯಲ್ಲಿದ್ದ ಕರೆನ್ಸಿಯ (14 ಲಕ್ಷ ಕೋಟಿ) ಶೇ.86 ರಷ್ಟು ಮೌಲ್ಯವು ಅಸಿಂಧುವಾಗಿದೆ. ಇದರಲ್ಲಿ ₹7.85 ಲಕ್ಷ ಕೋಟಿ ಹಣ ₹500 ರ ನೋಟು ಮೂಲಕವೂ ₹6.33 ಲಕ್ಷ ಕೋಟಿ ಹಣ ₹1000 ನೋಟಿನ ಚಲಾವಣೆ ರದ್ದು ಆಗುವ ಮೂಲಕವೂ ಮೌಲ್ಯ ಕಳೆದುಕೊಂಡಿದೆ. ಮೈಸೂರಿನಲ್ಲಿರುವ ಪ್ರೆಸ್ ಸೇರಿದಂತೆ ದೇಶದ ಹಲವಾರು ಪ್ರೆಸ್‍ಗಳಲ್ಲಿ ₹500 ನೋಟುಗಳು ಪ್ರಿಂಟ್ ಆಗುತ್ತಿರುವುದರಿಂದ ಈ ವಾರದಲ್ಲಿ ₹500 ನೋಟು ಸಿಗಲಿದೆ ಎನ್ನುತ್ತಾರೆ ಅಖಿಲ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಕಾರ್ಯದರ್ಶಿ ಎ. ಎನ್. ಕೃಷ್ಣಮೂರ್ತಿ.[10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]

ರು 1000, 500 ಅಪಮೌಲ್ಯ, ರು 100, 50 ನೋಟುಗಳ ಚಲಾವಣೆಯನ್ನು ಹೆಚ್ಚಿಸಿದೆ, ರು 2000 ನೋಟುಗಳನ್ನು ತೆಗೆದುಕೊಳ್ಳಲು ಜನ ಹೆದರುತ್ತಿದ್ದಾರೆ. ಇದನ್ನು ತೆಗೆದುಕೊಂಡು ಚಿಲ್ಲರೆಗಾಗಿ ಪರಿಪಾಟಲು ಬಿದ್ದವರು ಈ ನೋಟೇ ಬೇಡ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
note ban: every where Rs 2000 note are seeing. where is new Rs 500 notes. Karnataka and so many states don't have new Rs 500 notes.
Please Wait while comments are loading...