ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ಲೇಷಣೆ : ಅಕಸ್ಮಾತ್ ಚುನಾವಣೋತ್ತರ ಸಮೀಕ್ಷೆ ಸತ್ಯವಾದರೆ...

|
Google Oneindia Kannada News

ನವದೆಹಲಿ, ಡಿಸೆಂಬರ್ 08: ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ವಿಧಾನಸಭೆ ಚುನಾವಣೆ ಅಂತ್ಯವಾಗುತ್ತಿದ್ದಂತೆಯೇ ಎಲ್ಲರೂ ಉಸಿರು ಬಿಗಿ ಹಿಡಿದು ಕಾಯುತ್ತಿದ್ದುದು ಚುನಾವಣೋತ್ತರ ಸಮೀಕ್ಷೆಗೆ.

ಬಹುತೇಕ ಸಂದರ್ಭದಲ್ಲಿ ಎಕ್ಸಿಟ್ ಪೋಲ್ ಗಳು ಸತ್ಯವಾಗುತ್ತವೆ ಎಂಬ ಕಾರಣಕ್ಕೆ ಇವುಗಳ ಬಗ್ಗೆ ಕುತೂಹಲ ಜಾಸ್ತಿ. ಅದೇ ರೀತಿ ಡಿಸೆಂಬರ್ 07 ರಂದು ಐದು ರಾಜ್ಯಗಳ ಚುನಾವಣೆಯ ಮತದಾನದ ಸಮಯ ಮುಗಿಯುತ್ತಿದ್ದಂತೆಯೇ ಎಕ್ಸಿಟ್ ಪೋಲ್ ಲೆಕ್ಕಾಚಾರ ಆರಂಭವಾದವು.

ರಾಜಸ್ಥಾನ, ತೆಲಂಗಾಣ, ಮಿಜೋರಾಂ ಗಳಲ್ಲಿ ಬಹುಪಾಲು ಸಮೀಕ್ಷೆಗಳು ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢಗಳಲ್ಲಿ ವ್ಯತಿರಿಕ್ತ ಸಮೀಕ್ಷೆಗಳು ಹೊರಬಿದ್ದಿವೆ. ಕೆಲವು ಏಜನ್ಸಿಗಳು ಕಾಂಗ್ರೆಸಿಗೆ ಬಹುಮತ ಎಂದಿದ್ದರೆ, ಕೆಲವು ಬಿಜೆಪಿಗೆ ಎಂದಿವೆ.

ಬಿಜೆಪಿಗೆ 'ಟುಡೇಸ್ ಚಾಣಕ್ಯ' ಶಾಕ್: ಲೋಕಸಮರಕ್ಕೂ ಮುನ್ನ ಮುಖಭಂಗಬಿಜೆಪಿಗೆ 'ಟುಡೇಸ್ ಚಾಣಕ್ಯ' ಶಾಕ್: ಲೋಕಸಮರಕ್ಕೂ ಮುನ್ನ ಮುಖಭಂಗ

ಸಮೀಕ್ಷೆಯ ಒಟ್ಟಾರೆ ಚಿತ್ರಣ ವಿಮರ್ಶಿಸುವುದಾದರೆ, ಈ ಬಾರಿ ಯಾವ ರಾಜ್ಯಗಳಲ್ಲೂ ಬಿಜೆಪಿ ಆಧಿಪತ್ಯ ಸ್ಥಾಪಿಸುವುದಕ್ಕೆ ಸಾಧ್ಯವಿಲ್ಲ! ಅಕಸ್ಮಾತ್ ಈ ಎಕ್ಸಿಟ್ ಪೋಲ್ ಸತ್ಯವೇ ಆದರೆ... ಲೋಕಸಭಾ ಚುನಾವಣೆಯ ಮೇಲೆ ಇದು ಬೀರುವ ಪರಿಣಾಮವೇನು?

ಯಾವ ರಾಜ್ಯದಲ್ಲಿ ಯಾವ ಸರ್ಕಾರ?

ಯಾವ ರಾಜ್ಯದಲ್ಲಿ ಯಾವ ಸರ್ಕಾರ?

ಮಧ್ಯಪ್ರದೇಶದಲ್ಲಿ 'ಅತಂತ್ರ ಸರ್ಕಾರ'ವಾದರೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾ! ಇನ್ನು ಛತ್ತೀಸ್ ಗಢದಲ್ಲಿ 50-50! ತೆಲಂಗಾಣದಲ್ಲಿ ಟಿಆರ್ ಎಸ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾದರೆ, ಮಿಜೋರಾಂ ನಲ್ಲಿ ಮೂರು ಅವಧಿಯ ನಂತರ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.

ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷದ ಗೆಲುವು? ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷದ ಗೆಲುವು?

ಬಿಜೆಪಿಗೆ ಆಘಾತ!

ಬಿಜೆಪಿಗೆ ಆಘಾತ!

ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಈ ಬಾರಿ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಮೂರೂ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಕೆಲವು ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ ವಿರುದ್ಧ ಇದ್ದ ಆಡಳಿ ವಿರೋಧಿ ಅಲೆಯಿಂದಾಗಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದೇ ಆದರೆ ಇದು ಲೋಕಸಭಾ ಚುನಾವಣೆಯ ಹೊತ್ತಲ್ಲಿ ಭಾರೀ ಮುಖಭಂಗವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರದ ಹೊರತಾಗಿಯೂ ಮೋದಿ ಅಲೆ ಕೆಲಸ ಮಾಡಿಲ್ಲ ಎಂಬುದು ದಿಟವಾದಂತಾಗುತ್ತದೆ.

ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್ ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್

ಲೋಕಸಭೆ ಚುನಾವಣೆ ಮೇಲೆ ಪರಿಣಾಮ?

ಲೋಕಸಭೆ ಚುನಾವಣೆ ಮೇಲೆ ಪರಿಣಾಮ?

ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಗಳು ಹೇಳಿದಂತೆಯೇ ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಬೇಕಾಗಬಹುದು. ಮಧ್ಯಪ್ರದೇಶದಲ್ಲಿ 29, ರಾಜಸ್ಥಾನದಲ್ಲಿ 25, ಛತ್ತೀಸ್ ಗಢದಲ್ಲಿ 11 ಲೋಕಸಭಾ ಕ್ಷೇತ್ರಗಳಿವೆ. ಈ ಮೂರೂ ರಾಜ್ಯಗಳಲ್ಲೂ ಬಿಜೆಪಿ ಸೋತರೆ, ಲೋಕಸಭಾ ಚುನಾವಣೆಯಲ್ಲೂ ಇದು ಮರುಕಳಿಸಬಹುದು. ಈಗಾಗಲೇ ಬಿಜೆಪಿ ವಿರುದ್ಧ ಈ ರಾಜ್ಯಗಳಲ್ಲಿದ್ದ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಂತಿದೆ. ಲೋಕಸಭಾ ಚುನಾವಣೆಯ ಸಮಯದಲ್ಲೂ ಇದೇ ರೀತಿಯ ಪ್ರಚಾರ ಕ್ರಮವನ್ನು ಅನುಸರಿಸಿದರೆ ಬಿಜೆಪಿಗೆ ಕಷ್ಟ ತಪ್ಪಿದ್ದಲ್ಲ.

ಯಾವ್ಯಾವ ರಾಜ್ಯಗಳಲ್ಲಿ ಚುನಾವಣೆ

ಯಾವ್ಯಾವ ರಾಜ್ಯಗಳಲ್ಲಿ ಚುನಾವಣೆ

ಛತ್ತೀಸ್ ಗಢ(ನವೆಂಬರ್ 12, 20), ಮಧ್ಯಪ್ರದೇಶ ಮತ್ತು ಮಿಜೋರಾಂ(ನವೆಂಬರ್ 28), ರಾಜಸ್ಥಾನ ಮತ್ತು ತೆಲಂಗಾಣ(ಡಿಸೆಂಬರ್ 07) ರಂದು ಚುನಾವಣೆ ನಡೆದಿತ್ತು. ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದ್ದು, ಚುನಾವಣೋತ್ತರ ಸಮೀಕ್ಷೆಗಳು ನಿಜವಾದರೆ ಬಿಜೆಪಿಗೆ ಆತ್ಮಾವಲೋಕನದ ಕಾಲ ಇದಾಗಲಿದೆ.

English summary
If exit polls from various news agencies and news channels on 5 states election become true, it will definitely affect on Lok Sabha elections 2019,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X