ಜಗತ್ತೇ ಮೋದಿ ಅಭಿನಂದಿಸುತ್ತಿರುವಾಗ ಇವರಿಬ್ಬರಿಗೇನಾಗಿತ್ತು?

ಬೆಂಗಳೂರು, ಮೇ 17 : ವಿಶ್ವದ ಎಲ್ಲೆಡೆಯಿಂದ ನರೇಂದ್ರ ಮೋದಿ ಅವರಿಗೆ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ. ಮೋದಿಯನ್ನು 'ಅಸ್ಪೃಶ್ಯ'ರಂತೆ ಕಾಣುತ್ತಿದ್ದ ವಿಶ್ವದ ನಾಯಕರು ಹಸ್ತಲಾಘವ ಮಾಡಲು ಮುಂದಾಗುತ್ತಿದ್ದಾರೆ. ಭಾರತದ ವಿವಿಧ ವಿರೋಧ ಪಕ್ಷಗಳ ನಾಯಕರು ನರೇಂದ್ರ ಮೋದಿಯ ಜಯದ ಗುಣಗಾನ ಮಾಡುತ್ತಿದ್ದಾರೆ. ಆದರೆ, ಇವರಿಬ್ಬರಿಗೇನಾಗಿತ್ತು?

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಯುನೈಟೆಡ್ ಕಿಂಗ್ಡ್ಂ ಅಧ್ಯಕ್ಷ ಡೆವಿಡ್ ಕ್ಯಾಮರಾನ್, ಆಸ್ಟ್ರೇಲಿಯಾದ ಅಧ್ಯಕ್ಷ ಟೋನಿ ಅಬಾಟ್, ಶ್ರೀಲಂಕಾದ ರಾಯಭಾರಿ, ದಿ ನ್ಯೂಯಾರ್ಕ್ ಟೈಮ್ಸ್, ದಿ ಬ್ಯಾಂಕಾಕ್ ಪೋಸ್ಟ್ ಮುಂತಾದ ದೇಶವಿದೇಶದ ವಿವಿಧ ಪತ್ರಿಕೆಗಳು, ಟಿವಿ ಚಾನಲ್ ಗಳು, ಸುದ್ದಿ ಸಂಸ್ಥೆಗಳು ಮೋದಿ ಅವರನ್ನು ಮುಕ್ತ ಕಂಠದಿಂದ ಹೊಗಳಿವೆ. ಆದರೆ, ಇವರಿಬ್ಬರಿಗೇನಾಗಿತ್ತು?

What had happened to Sonia and Rahul Gandhi

ನಾಚಿಕೆಯಿಂದ ತಲೆತಗ್ಗಿಸುವ ಹಾಗೆ ದೇಶದ ಜನರಿಂದ ಸೋಲುಣಿಸಿಕೊಂಡ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ, ಭಾರತದ ಭಾವೀ ಪ್ರಧಾನಿ ನರೇಂದ್ರ ಮೋದಿಯವರಿಗೆ, ಜಯಭೇರಿ ಬಾರಿಸಿದ ಬಿಜೆಪಿಗೆ ಒಂದು ಶುಭಾಶಯ ಹೇಳುವ ಸೌಜನ್ಯತೆ ಇರಲಿಲ್ಲವೆ? [ಮೋದಿಯನ್ನು ಆಶೀರ್ವದಿಸಿದ ಭಾರತ ಮಾ]

ಶುಭ್ರವಸ್ತ್ರದಲ್ಲಿದ್ದ ಸೋನಿಯಾ, ಬಿಳಿ ಪೈಜಾಮಾ ಜುಬ್ಬಾ ಧರಿಸಿ, ನೀಟಾಗಿ ಶೇವ್ ಮಾಡಿಕೊಂಡಿದ್ದ ರಾಹುಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ, "ನಾವು ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ. ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಇದಕ್ಕೆ ನಾವೇ ಹೊಣೆ ಹೊರುತ್ತೇವೆ. ಮುಂದಿನ ಸರಕಾರ ದೇಶಕ್ಕೆ ಧಕ್ಕೆ ತರುವಂತೆ ವರ್ತಿಸಿದರೆ ಸುಮ್ಮನಿರುವುದಿಲ್ಲ" ಅಂತ ಬರೆದುಕೊಂಡು ಬಂದ ಒಕ್ಕಣಿಕೆಯನ್ನು ಓದಿದರು.


ಆದರೆ, ಈ ಸುನಾಮಿಯಂಥ ಜಯಕ್ಕೆ ಕಾರಣಕರ್ತರಾದ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರೆ ಆಗುತ್ತಿರಲಿಲ್ಲವೆ? ಒಂದು ವೇಳೆ ಅಭಿನಂದಿಸಿದ್ದರೆ ದೊಡ್ಡವರಾಗುತ್ತಿದ್ದರು, ಜನರ ಮನ್ನಣೆಗೆ ಪಾತ್ರರಾಗುತ್ತಿದ್ದರು. ಗಾಂಧಿ ಕುಟುಂಬದ ಇವರಿಬ್ಬರ ವರ್ತನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಟ್ವಿಟ್ಟರಿನಲ್ಲಿ ರಾಹುಲ್ ಅವರನ್ನು ತರಾವರಿ ಟೀಕಿಸಲಾಗುತ್ತಿದೆ.

ಎಲ್ಲಕ್ಕಿಂತ ಅಚ್ಚರಿ ಮೂಡಿಸಿದ್ದಂದರೆ, ಆ ಪತ್ರಿಕಾಗೋಷ್ಠಿಯುದ್ದಕ್ಕೂ ರಾಹುಲ್ ಗಾಂಧಿ ಸುಖಾಸುಮ್ಮನೆ ಸ್ಮೈಲ್ ಮಾಡಿಕೊಂಡು ನಿಂತಿದ್ದು. ಸೋನಿಯಾ ಮಾತಾಡುತ್ತಿದ್ದಾಗಲೂ ಸೋತ ಹತಾಶ ಭಾವ ಅವರ ಮುಖದಲ್ಲಿ ಲವಲೇಶವೂ ಇರಲಿಲ್ಲ. ಆ ನಗುವಿನಲ್ಲಿ, ಸದ್ಯ ಎಲ್ಲ ಮುಗೀತಲ್ಲ ಎಂಬ ನಿರಾಳ ಭಾವವಿತ್ತೋ, ಮತ ಹಾಕದ ಭಾರತದ ಜನತೆಯ ಬಗ್ಗೆ ವ್ಯಂಗ್ಯವಿತ್ತೋ, ಅಥವಾ ಮತ್ತೇನಿತ್ತೋ, ಬಲ್ಲವರಾರು?


ಟ್ವಿಟ್ಟರಿನಲ್ಲಿ ನೆಟ್ಟಿಗರು, 'ರಾಹುಲ್ ಏಕೆ ಹಾಗೆ ಸ್ಮೈಲ್ ಮಾಡುತ್ತಿದ್ದಾರೆ?', 'ನಗೋದಕ್ಕೆ ರಾಹುಲ್ ಅವರಿಗೇನಾಗಿದೆ?', 'ಇಂಥವರು ಭಾರತದ ಯುವಜನತೆಗೆ ರೋಲ್ ಮಾಡೆಲ್ ಹೇಗಾಗ್ತಾರೆ?' ಎಂಬೆಲ್ಲ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಅವರೇಕೆ ನಗುತ್ತಿದ್ದರೆಂದರೆ, ಭಾರತದ ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗುತ್ತಾರೆ ಎಂದು ಯಾರ ಜೊತೆಗೋ ಬೆಟ್ಟಿಂಗ್ ಕಟ್ಟಿದ್ದರಂತೆ!

ಬಲ್ಲ ಮಾಹಿತಿ ಪ್ರಕಾರ ಇವರಿಬ್ಬರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸದ್ಯದಲ್ಲೇ ರಾಜೀನಾಮೆ ಸಲ್ಲಿಸಲಿದ್ದಾರೆ. ಹಾಗಿದ್ರೆ ಕಾಂಗ್ರೆಸ್ಸಿಗೆ ಮುಂದೆ ಗತಿ ಯಾರು? ಪ್ರಿಯಾಂಕಾ ಗಾಂಧಿ ಪ್ರವೇಶ ಯಾವಾಗ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+