2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ
ನವದೆಹಲಿ, ಮಾರ್ಚ್ 13: "2025ನೇ ಇಸವಿ ಹೊತ್ತಿಗೆ ಭಾರತದಿಂದ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿದ್ದೇವೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಿ ನಡೆಯುತ್ತಿರುವ ಕ್ಷಯರೋಗ ನಿರ್ಮೂಲನೆ ಸಮಾವೇಶದಲ್ಲಿ ಮಂಗಳವಾರ ಘೋಷಣೆ ಮಾಡಿದರು.
ಸಮೀಕ್ಷೆ: ಮೋದಿ ಸರ್ಕಾರದ 'ಜಿಎಸ್ಟಿ' ಬಗ್ಗೆ ಜನರಲ್ಲಿದೆ ಆಕ್ರೋಶ
ಕ್ಷಯ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಇನ್ನು ಹತ್ತು-ಹದಿನೈದು ವರ್ಷದ ನಂತರವೂ ನಮಗೆ ಫಲಿತಾಂಶ ಸಿಗದಿದ್ದರೆ ನಮ್ಮ ವಿಧಾನವನ್ನೇ ಬದಲಿಸಿಕೊಳ್ಳಬೇಕಾಗುತ್ತದೆ. ಪರಿಸ್ಥಿತಿಯನ್ನು ಪರಾಮರ್ಶಿಸಬೇಕು ಎಂದು ಅವರು ಹೇಳಿದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ದಿನ ವಿವಿಧ ರಾಜ್ಯಗಳಿಂದ ಸಚಿವರು ಹಾಗೂ ಅಧಿಕಾರಿಗಳು ಬಂದಿದ್ದಾರೆ. ಒಂದು ತಂಡವಾಗಿ (ಟೀಮ್ ಇಂಡಿಯಾ) ಕ್ಷಯ ರೋಗವನ್ನು ಭಾರತದಿಂದ ತೊಲಗಿಸಲು ನಾವು ಯಾವ ಪ್ರಮಾಣದಲ್ಲಿ ಬದ್ಧರಾಗಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಹೇಳಿದರು.
ಈ ಹಿಂದೆ ಕ್ಷಯ ರೋಗ ನಿವಾರಣೆಗಾಗಿ ಕೈಗೊಳ್ಳುತ್ತಿದ್ದ ಕ್ರಮಗಳ ವೇಗ ಗಮನಿಸಿದರೆ ಅದನ್ನು ಸಾಧಿಸಲು ಇನ್ನೂ ನಲವತ್ತು ವರ್ಷ ಸಮಯ ಬೇಕಾಗಿತ್ತು. ಈಗ ನನಗೆ ವಿಶ್ವಾಸ ಇದೆ, ಇನ್ನು ಒಂದು ವರ್ಷದಲ್ಲಿ ಶೇಕಡಾ ತೊಂಬತ್ತರಷ್ಟು ಕಾಯಿಲೆಯಿಂದ ರಕ್ಷಣೆ ಪಡೆಯುವ ನಮ್ಮ ಗುರಿ ಸಾಧಿಸುತ್ತೇವೆ ಎಂದು ಹೇಳಿದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !