• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಕ್ವಾರಂಟೈನ್ ನಡುವೆ ಪಾರ್ಕಿನಲ್ಲಿ ಭೂತ ಚೇಷ್ಟೆ

|

ನವದೆಹಲಿ, ಜೂನ್ 14: ಬರಿಗಣ್ಣಿಗೆ ಕಾಣಿಸದ ಕೊರೊನಾವೈರಸ್ ವಿರುದ್ಧ ಲಾಕ್ಡೌನ್, ಕ್ವಾರಂಟೈನ್ ಮೂಲಕ ನಿಯಂತ್ರಣದ ಆಟ ನಡೆಯುತ್ತಿರುವಾಗಲೇ ದೆಹಲಿಯ ಪಾರ್ಕೊಂದರಲ್ಲಿ ಭೂತದ ಆಟ ಕಾಣಿಸಿಕೊಂಡಿದೆ. ಪಾರ್ಕಿನ ಭೂತದ ಚೇಷ್ಟೆ ಕಂಡು ಎಲ್ಲರೂ ಅವಕ್ಕಾಗಿದ್ದಾರೆ.

ಪೊಲೀಸರು ಧೈರ್ಯ ಮಾಡಿ, ಪಾರ್ಕಿಗೆ ತೆರಳಿ ವಿಡಿಯೋ ಮಾಡಿ, ಟ್ವೀಟ್ ಮಾಡಿದ್ದಾರೆ. ವಿಡಿಯೋ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಇದು ಭೂತಚೇಷ್ಟೆ ಎನ್ನಲು ಅನೇಕರು ಒಪ್ಪುತ್ತಿಲ್ಲ.

ದೆವ್ವದ ಕತೆಗಳು ಎ೦ದರೇ ಸಾಕು ಕಿವಿ ನೆಟ್ಟಗೆ!

ವಿಡಿಯೋದಲ್ಲಿ ಏನಿದೆ?: ದೆಹಲಿಯ ಪಾರ್ಕಿನಲ್ಲಿ ಅಳವಡಿಸಿರುವ ಹೊರಾಂಗಣ ಜಿಮ್ ಸಾಧನಗಳು ತನ್ನಷ್ಟಕ್ಕೆ ತಾನೇ ಚಲಿಸತೊಡಗುತ್ತವೆ. ಇದನ್ನು ಮೂವರು ಪೊಲೀಸರು ನೋಡುತ್ತಿರುತ್ತಾರೆ. ಒಬ್ಬರು ಇದನ್ನು ವಿಡಿಯೋ ಮಾಡುತ್ತಾರೆ.

ಈ ಸಾಧನದಲ್ಲಿ ಯಾರೂ ಕುಳಿತುಕೊಳ್ಳದೆ, ಸಾಧನ ಇದ್ದಕ್ಕಿದ್ದಂತೆ ಚಲಿಸಿದ್ದಾದರೂ ಹೇಗೆ? ಎಂಬ ಕುತೂಹಲ ಮೂಡಿದೆ.

ಲಾಕ್‌ಡೌನ್: ಇಂಡೋನೇಷ್ಯಾದಲ್ಲಿ ಜನರು ಹೊರಬರದಂತೆ ದೆವ್ವಗಳ ಕಾವಲು

ದೆಹಲಿಯ ರೋಹಿಣಿ ಪ್ರದೇಶದ ಜಪಾನೀಸ್ ಪಾರ್ಕಿನಲ್ಲಿ ನಡೆದ ಘಟನೆ ಎಂದು ಹಲವಾರು ಮಂದಿ ನೆಟಿಜನ್ ಹೇಳಿದ್ದಾರೆ. ಆದರೆ, ಕೆಲವು ಮಂದಿ ಇದು ನಂದನಪುರದ ಕಾನ್ಶಿರಾಮ್ ಪಾರ್ಕ್ ಎಂದು ಹೇಳಿದ್ದಾರೆ.

English summary
There is no lack of entertainment in this quarantine period in the country. This time a video that makes people puzzled, scared and amused at the same time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X