ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಒಬಾಮಾ- ಮೋದಿ ಜಂಟಿ ಸುದ್ದಿಗೋಷ್ಠಿ

By Mahesh
|
Google Oneindia Kannada News

ನವದೆಹಲಿ, ಜ.25: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ ನಂತರ ಹೈದರಾಬಾದ್ ಹೌಸ್ ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ದ್ವಿಪಕ್ಷೀಯ ಮಾತುಕತೆ ಆರಂಭಕ್ಕೂ ಮುನ್ನ ಇಬ್ಬರು ನಾಯಕರು ಗಾರ್ಡನ್ ನಲ್ಲಿ ಸುತ್ತಾಡಿ 'ಚಹಾ ಪೆ ಚರ್ಚಾ' ನಡೆಸಿದ್ದು ವಿಶೇಷ. ಪರಮಾಣು ಒಪ್ಪಂದ, ಆರ್ಥಿಕ ವ್ಯವಹಾರ, ರಕ್ಷಣಾ ಖಾತೆ ಒಪ್ಪಂದಗಳು, ಹವಾಮಾನ ವೈಪರೀತ್ಯ ಬಗ್ಗೆ ಉಭಯ ದೇಶಗಳ ನಾಯಕರು,ಅಧಿಕಾರಿಗಳು ನಡೆಸಿದ ಚರ್ಚೆಯ ಸಾರಾಂಶವನ್ನು ಒಬಾಮಾ ಹಾಗೂ ಮೋದಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮುಂದಿಟ್ಟರು.[ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಸುದ್ದಿ ಅಪ್ಡೇಟ್ಸ್ ]

President Obama and PM Modi Hold a Joint Press Conference at the Hyderabad House in Delhi: Highlights
ಸುದ್ದಿಗೋಷ್ಠಿ ವಿವರ:
ನರೇಂದ್ರ ಮೋದಿ ಭಾಷಣ:
* ನಮ್ಮ ಆಹ್ವಾನ ಮನ್ನಿಸಿ ಅಧ್ಯಕ್ಷ ಒಬಾಮಾ ಹಾಗೂ ಅಮೆರಿಕದ ಪ್ರಥಮ ಮಹಿಳೆ ಭಾರತಕ್ಕೆ ಬಂದಿರುವುದು ಸಂತಸ ತಂದಿದೆ.
* ಇಂದು ಸುದಿನ. ವಿಶ್ವದ ಎರಡು ಅತಿದೊಡ್ಡ ಪ್ರಜಾಪಭುತ್ವ ರಾಷ್ಟ್ರಗಳು ಒಟ್ಟಿಗೆ ಸಹಕಾರ ನೀಡಲು ಮುಂದಾಗಿವೆ.

* ಆರು ವರ್ಷಗಳ ನಂತರ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿ ವಾಣಿಜ್ಯ ಸಹಕಾರಕ್ಕಾಗಿ ಮುಂದಾಗಿದ್ದೇವೆ.
* ಜಾಗತಿಕ ಮಟ್ಟದ ಶತ್ರುವಾದ ಭಯೋತ್ಪಾದನೆ ಹತ್ತಿಕ್ಕಲು ಜಂಟಿ ಹೋರಾಟಕ್ಕೆ ಮುಂದಾಗಿದ್ದೇವೆ.
* ಹವಾಮಾನ ವೈಪರೀತ್ಯದ ಬಗ್ಗೆ ಪ್ಯಾರೀಸ್ ನ ಸಮ್ಮೇಳನ ಯಶಸ್ವಿಯಾಗುವ ನಂಬಿಕೆಯಿದೆ.
* ಅಮೆರಿಕ -ಚೀನಾ ನಡುವಿನ ಒಪ್ಪಂದಕ್ಕಿಂತ ಹವಾಮಾನ ವೈಪರೀತ್ಯ ಒತ್ತಡವೇ ನಮಗೆ ಮುಖ್ಯವಾಗಿದೆ.
[ಭಾರತದಲ್ಲಿ ಒಬಾಮಾ ಮೊದಲ ದಿನದ ಚಿತ್ರ ಸಂಪುಟ]

* ನಾವಿಬ್ಬರು ಅಧಿಕಾರಿ ಮಟ್ಟದ ಚರ್ಚೆಗೆ ಮುಖ್ಯ ಗೆಳೆಯರಂತೆ ಚರ್ಚೆ ನಡೆಸಿ, ತೀರ್ಮಾನಕ್ಕೆ ಮುಂದಾಗಿದ್ದೇವೆ.
* ಅಘ್ಘಾನಿಸ್ತಾನದ ಬಗ್ಗೆ ಸೂಕ್ತ ನಿರ್ಧಾರ ಹಾಗೂ ಶಾಂತಿ ನೆಲೆಸಲು ಅಗತ್ಯ ನೆರವು ನೀಡಲಾಗುವುದು.
* ಅಮೆರಿಕ ಹಾಗೂ ಭಾರತದ ನಡುವೆ ನಿರಂತರ ಮಾತುಕತೆ, ಚರ್ಚೆಗಳು ರಿಯಲ್ ಟೈಮ್ ಟಾಕ್ ಹೆಚ್ಚಾಗಬೇಕು.

President Obama and PM Modi Hold a Joint Press Conference
ಒಬಾಮಾ ಭಾಷಣ:
Aap sab ko mera pyar bhara namaskar. ಎಂದು ಭಾಷಣ ಆರಂಭಿಸಿದ ಒಬಾಮಾ ಜೊತೆ ಜೊತೆಯಲ್ಲಿ ನಡೆಯುವ ಎಂದು ಹೇಳಿದರು.
*
ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಯುಎಸ್ ನ ಪ್ರಥಮ ಅಧ್ಯಕ್ಷ ಎಂಬ ಹೆಮ್ಮೆ ನನಗಿದೆ.
* ನನ್ನನ್ನು ಹಾಗೂ ಪತ್ನಿ ಮಿಶೆಲ್ ರನ್ನು ಭಾರತದ ಜನತೆ ಸ್ವಾಗತಿಸಿದ ರೀತಿ, ತೋರುತ್ತಿರುವ ಪ್ರೀತಿ ಆದರಕ್ಕೆ ನಾನು ತಲೆ ಬಾಗುತ್ತೇನೆ.
* ಮೋದಿ ಅವರ ಚಾಹ್ ಪೆ ಚರ್ಚಾ ಇಷ್ಟವಾಯಿತು. ನಮ್ಮ ಶ್ವೇತಭವನದಲ್ಲೂ ಇದನ್ನು ಅಳವಡಿಸಿಕೊಳ್ಳುತ್ತೇನೆ.[ಒಬಾಮಾ ಲಂಚ್ ಮೆನು, ಡಿನ್ನರ್]
* ಮೋದಿ ಅವರ ಚುನಾವಣಾ ಸಮಯದ ಸಂಚಾರ, ತಂತ್ರಗಾರಿಕೆ, ಇಂಡೋ -ಯುಎಸ್ ಸಂಬಂಧಗಳು ಇನ್ನಷ್ಟು ಉತ್ಸಾಹ ನೀಡುತ್ತಿದೆ.
* ಕಳೆದ ವರ್ಷ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಪ್ರಧಾನಿ ಮೋದಿಗೆ ಬಾಲಿವುಡ್ ಸ್ಟಾರ್ ನ ರೀತಿ ಸ್ವಾಗತ ಸಿಕ್ಕಿದ್ದು ನಿಮಗೆಲ್ಲ ನೆನಪಿರಬಹುದು.
* ಜನ ಸಾಮಾನ್ಯರ ಜೀವನ ಸುಧಾರಣೆಗಾಗಿ ಉಭಯ ದೇಶಗಳ ನಡುವೆ ವ್ಯಾಪಾರ, ವಹಿವಾಟು ಹೆಚ್ಚಳವಾಗಬೇಕಿದೆ.
* ಇಂಧನ, ಹವಾಮಾನ ವೈಪರೀತ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಸೌರಶಕ್ತಿ ಯೋಜನೆಗಳಿಗೆ ನಮ್ಮ ನೆರವು ಸದಾಕಾಲ ಇರುತ್ತದೆ.
* ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ನಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ದೊರೆಕಿಸಿಕೊಡಲು ಅಮೆರಿಕ ಬದ್ಧವಾಗಿದೆ.

ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಸುದ್ದಿಗೋಷ್ಠಿ
* ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ 10 ವರ್ಷಗಳ ಕಾಲ ಒಪ್ಪಂದ
* ನಾಗರಿಕ ಪರಮಾಣು ಒಪ್ಪಂದಕ್ಕೆ ಉಭಯ ದೇಶಗಳಿಂದ ಸಮ್ಮತಿ
* ಭಾರತದ ಪರಮಾಣು ಘಟಕಗಳ ಮೇಲೆ ಅಮೆರಿಕದ ನಿಗಾ ಇರಿಸಲ್ಲ.
* ಸೌರಶಕ್ತಿ, ಜೆಟ್ ಇಂಜಿನ್ ಉತ್ಪಾದನೆಗೆ ಅಮೆರಿಕ ತಾಂತ್ರಿಕ ನೆರವು

* ಭಾರತದಲ್ಲಿ 3 ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅಮೆರಿಕ ಸಹಿ
ಜೊತೆ ಜೊತೆಯಲ್ಲಿ ನಡೆಯುವ ಎಂದ ಬರಾಕ್ ಒಬಾಮಾ

ವಿಡಿಯೋ ನೋಡಿ: ಒಬಾಮಾ- ಮೋದಿ ಜಂಟಿ ಸುದ್ದಿಗೋಷ್ಠಿ

English summary
Watch video: President Obama and PM Modi Hold a Joint Press Conference at the Hyderabad House in Delhi: Highlights
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X