Get Updates
Get notified of breaking news, exclusive insights, and must-see stories!

ದೆಹಲಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಸುದ್ದಿ ಅಪ್ಡೇಟ್ಸ್

ನವದೆಹಲಿ, ಜ.25: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದ್ದಾರೆ. ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ಅವರಿಗೆ ಆತ್ಮೀಯ ಸ್ವಾಗತ ನೀಡಿದರು.

ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಬರಾಕ್ ಒಬಾಮಾ ಅವರ ಜೊತೆ ಪತ್ನಿ ಮಿಶೆಲ್ ಒಬಾಮಾ ಸೇರಿದಂತೆ ಅನೇಕ ಅಧಿಕಾರಿಗಳು, ಗಣ್ಯರು ನವದೆಹಲಿಗೆ ಆಗಮಿಸಿದ್ದಾರೆ. [ಒಬಾಮಾ ಭಾರತ ಪ್ರವಾಸ ವೇಳಾಪಟ್ಟಿ]

ಜ.25ರಂದು ಒಬಾಮಾ ದೆಹಲಿ ಕಾರ್ಯಕ್ರಮಗಳ ಅಪ್ದೇಟ್ಸ್ ಇಲ್ಲಿ ಸಿಗಲಿದೆ...
5.35: Aap sab ko mera pyar bhara namaskar. ಎಂದು ಭಾಷಣ ಆರಂಭಿಸಿದ ಒಬಾಮಾ ಜೊತೆ ಜೊತೆಯಲ್ಲಿ ನಡೆಯುವ ಎಂದು ಹೇಳಿದರು.


4.55: ಮೋದಿ- ಒಬಾಮಾ ಜಂಟಿ ಸುದ್ದಿಗೋಷ್ಠಿ ಆರಂಭ
*
ಮೊದಲಿಗೆ ಪ್ರಧಾನಿ ಮೋದಿ ಅವರಿಂದ ಭಾಷಣ, ಅಹ್ವಾನ ಮನ್ನಿಸಿ ಆಗಮಿಸಿದ್ದಕ್ಕೆ ಒಬಾಮಾಗೆ ಅಭಿನಂದನೆ
* ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಮೋದಿ
* ನಾಗರಿಕ ಪರಮಾಣು ಒಪ್ಪಂದಕ್ಕೆ ಉಭಯ ದೇಶ ಸಹಿ
* ರಕ್ಷಣಾ ಕ್ಷೇತ್ರಗಳ ನವೀಕರಣ, ಡಿಜಿಟಲ್ ಯುಗ, ಸಾಗರ ಕ್ಷೇತ್ರ ಭದ್ರತೆಗೆ ಉಭಯ ದೇಶಗಳಿಂದ ಹೆಚ್ಚಿನ ಒತ್ತು.

4.15: ಭಾರತ-ಅಮೆರಿಕ ದ್ವಿಪಕ್ಷೀಯ ಮಾತುಕತೆ ಆರಂಭ,ಪರಮಾಣು ಒಪ್ಪಂದ, ವ್ಯಾಪಾರ, ವಹಿವಾಟು, ಹೊರಗುತ್ತಿಗೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ


*
ಹೈದರಾಬಾದ್ ಹೌಸ್ ಗಾರ್ಡನ್ ನಲ್ಲಿ ಏಕಾಂತವಾಗಿ ಚರ್ಚೆ ನಡೆಸಿದ ಒಬಾಮಾ-ಮೋದಿ
* ಒಬಾಮಾರಿಗೆ ಚಹಾ ತಯಾರಿಸಿ ಕೊಟ್ಟ ಮೋದಿ,

ಸಮಯ 2.05:
ಪ್ರಧಾನಿ ಮೋದಿ ಅವರು ಹೈದರಾಬಾದ್ ಹೌಸ್ ನಲ್ಲಿ ಮಧ್ಯಾಹ್ನದ ಲಂಚ್ ಆಯೋಜಿಸಿದ್ದಾರೆ. ಭೋಜನ ಕೂಟ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. [ಒಬಾಮಾ ಲಂಚ್ ಮೆನು, ಡಿನ್ನರ್ ಅತಿಥಿಗಳ ಲಿಸ್ಟ್ ]
* ಪತ್ನಿ ಮಿಶೆಲ್ ಅವರನ್ನು ಬಿಟ್ಟು ಏಕಾಂಗಿಯಾಗಿ ಬೀಸ್ಟ್ ಏರಿ ರಾಜ್ ಘಾಟ್ ಗೆ ಬಂದ ಬರಾಕ್ ಒಬಾಮಾ.
* ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ಹೂಗುಚ್ಛ ಇರಿಸಿ ಗೌರವ ವಂದನೆ ಸಲ್ಲಿಸಿದ ಒಬಾಮಾ.
* ಒಬಾಮಾ ಅವರಿಗೆ ಸಾಥ್ ನೀಡಿದ ಇಂಧನ ಖಾತೆ ರಾಜ್ಯ ಸಚಿವ ಪಿಯೂಷ್ ಗೋಯಲ್.

* ರಾಜ್ ಘಾಟ್ ನಲ್ಲಿ ಒಬಾಮಾ ಅವರಿಗೆ ಚರಕದ ಸ್ಮರಣಿಕೆ ನೀಡಲಾಯಿತು. ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದ ಒಬಾಮಾ.
* ರಾಜ್ ಘಾಟ್ ಭೇಟಿ ಸ್ಮರಣಾರ್ಥ ಅಶ್ವಥ ಗಿಡವನ್ನು ನೆಟ್ಟು ನೀರುಣಿಸಿದ ಬರಾಕ್ ಒಬಾಮಾ.

Barack Obama in New Delhi updates

* ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಒಬಾಮಾಗೆ ಭವ್ಯ ಸ್ವಾಗತ ಸಿಕ್ಕಿದೆ, ಗೌರವ ವಂದನೆ ಸ್ವೀಕರಿಸಿದ ಒಬಾಮಾ.

* ಒಬಾಮಾ ಸ್ವಾಗತಿಸಲು ಮೋದಿ ಸಂಪುಟ ಸಚಿವರಾದ ಮನೋಹರ್ ಪರಿಕ್ಕಾರ್, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಉಪಸ್ಥಿತಿ.
Barack Obama arrives in New Delhi

* ಗೌರವ ವಂದನೆ ನೀಡಿದ ರಾಷ್ಟ್ರಪತಿಗಳ ಭದ್ರತಾ ಪಡೆಯ ನೇತೃತ್ವ ವಹಿಸಿದ್ದು ಮಹಿಳಾ ಸಿಬ್ಬಂದಿ ಎಂಬುದು ವಿಶೇಷ. ವಿಂಗ್ ಕಮಾಂಡರ್ ಪೂಜಾ ಠಾಕೂರ್ ಅವರ ನೇತೃತ್ವದ ಭದ್ರತಾ ಪಡೆ...

*ದೆಹಲಿಯಲ್ಲಿ ಒಬಾಮಾ ದಂಪತಿಗೆ ನಾಗಪುರ ಶೈಲಿ ಸ್ವಾಗತ ಸಿಕ್ಕಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಶನಿವಾರ ರಾತ್ರಿ ತಮ್ಮ ಏರ್‌ಫೋರ್ಸ್ ಒನ್ ವಿಮಾನ ಏರಿದ್ದರು. ಜರ್ಮನಿಯಲ್ಲಿ ಇಂಧನ ತುಂಬಿಸಿಕೊಂಡ ವಿಮಾನ ಬೆಳಗ್ಗೆ 10 ಗಂಟೆಯೊಳಗೆ ಪಾಲಂ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.



ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರನ್ನು ಸ್ವಾಗತಿಸಿ ಕೈ ಕುಲುಕಿದ ಮೋದಿ ಅವರು ಆತ್ಮೀಯವಾಗಿ ಆಲಿಂಗನ ನೀಡಿದರು. ಒಬಾಮಾ, ಮೋದಿ ಹಾಗೂ ಮಿಶೆಲ್ ಅವರು ನೆರೆದಿದ್ದ ಇತರೆ ಗಣ್ಯರತ್ತ ಕೈಬೀಸಿ ವಿಶ್ ಮಾಡಿದರು. ನಂತರ ಒಬಾಮಾ ಅವರು ದೆಹಲಿಯ ಮೌರ್ಯ ಶೆರಾಟನ್ ಹೋಟೆಲ್ ನತ್ತ ಪ್ರಯಾಣಿಸಿದರು.


ವಿದೇಶಾಂಗ ಖಾತೆ ಅಧಿಕೃತ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರಿಂದ ಮೋದಿ-ಒಬಾಮಾ ಆಲಿಂಗನ ಟ್ವೀಟ್


ನಿಗದಿತ ವೇಳೆ 10ಗಂಟೆಗಿಂತಲೂ 20 ನಿಮಿಷ ಮುಂಚಿತವಾಗಿ ಆಗಮಿಸಿದ ಒಬಾಮಾ ಅವರು ಮೌರ್ಯ ಹೋಟೆಲ್ ನಲ್ಲಿ ತಂಗಲಿದ್ದು, 12.40 ಗಂಟೆ ಸುಮಾರಿಗೆ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ಗೌರವ ವಂದನೆ ಸಮರ್ಪಿಸುವರು.

ರಾಜ್ ಪಥ್ ನಲ್ಲಿ 13 ಸುರಕ್ಷಿತಾ ವಲಯ ಸರ್ಪಗಾವಲು ಹಾಕಲಾಗಿದೆ. ಒಬಾಮಾ ತೆರಳುವ ಎಲ್ಲಾ ಕಡೆ ಭದ್ರತೆ ಹೆಚ್ಚಿಸಲಾಗಿದೆ.

ಅಲ್ಲಿಯೇ ವನಮಹೋತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸಿ ಸಸಿ ನೆಡಲಿದ್ದಾರೆ. ಮಧ್ಯಾಹ್ನದ ಊಟ ಮೌರ್ಯ ಹೋಟೆಲಿನಲ್ಲಿ ಮೋದಿ ಜೊತೆಗೆ ನಡೆಯಲಿದೆ.

ಸಂಜೆ 4.30ರ ವೇಳೆಗೆ ಹೈದರಾಬಾದ್ ಹೌಸ್ ನಲ್ಲಿ ಮೋದಿ -ಒಬಾಮಾ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ., ಇದಕ್ಕೂ ಮುನ್ನ ರಾಯಭಾರ ಕಚೇರಿ ಸಿಬ್ಬಂದಿಯನ್ನು ಒಬಾಮಾ ಭೇಟಿ ಮಾಡಲಿದ್ದಾರೆ. ರಾತ್ರಿ ಊಟ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜೊತೆ ಮಾಡಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+