ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಲಂಚ್ ಮೆನು, ಡಿನ್ನರ್ ಅತಿಥಿಗಳ ಲಿಸ್ಟ್ ಬಹಿರಂಗ

By Mahesh
|
Google Oneindia Kannada News

ನವದೆಹಲಿ, ಜ.25: ಮೂರು ದಿನಗಳ ಪ್ರವಾಸ ನಿರತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ನೆಚ್ಚಿನ 'ಬರ್ಗರ್' ಮರೆತು ಭಾರತೀಯ ಶೈಲಿಯ ಆಹಾರವನ್ನು ಆಸ್ವಾದಿಸಬೇಕಿದೆ.

ಪ್ರಧಾನಿ ಮೋದಿ ಅವರು ಹೈದರಾಬಾದ್ ಹೌಸ್ ನಲ್ಲಿ ಮಧ್ಯಾಹ್ನದ ಲಂಚ್ ಆಯೋಜಿಸಿದ್ದರೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ ಸುಮಾರು 250ಕ್ಕೂ ಅಧಿಕ ಗಣ್ಯರ ಜೊತೆ ಒಬಾಮಾ ಅವರು ಡಿನ್ನರ್ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದರು. [ಮೊದಲ ದಿನದ ಸಂಪೂರ್ಣ ಅಪ್ಡೇಟ್ಸ್ ಇಲ್ಲಿ ಓದಿ]

ಭೋಜನದ ನಂತರದ ಕಾರ್ಯಕ್ರಮ: ಅಣು ಒಪ್ಪಂದ, ರಕ್ಷಣಾ ಕ್ಷೇತ್ರ, ತಾಂತ್ರಿಕ ವಿನಿಮಯ, ಕರ್ನಾಟಕದಲ್ಲಿ ಮಾನವ ರಹಿತ ಡ್ರೋನ್ ಘಟಕ ಸ್ಥಾಪನೆ, ಇಂಧನ, ವಲಸೆ ನೀತಿ, ಹೊರಗುತ್ತಿಗೆ ಸೇರಿದಂತೆ ಅನೇಕ ಕ್ಷೇತ್ರಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಒಬಾಮಾ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ನಂತರ ಸಂಜೆ 4.30ವೇಳೆಗೆ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.[ಒಬಾಮಾ ಭಾರತ ಪ್ರವಾಸ ವೇಳಾಪಟ್ಟಿ]

ಭೋಜನದ ಮೆನು: ಗುಲಾಟಿ ಕಬಾಬ್, ಫಿಶ್ ಟಿಕ್ಕಾ, ಚಿಕನ್ ಮಲಾಯಿ ಟಿಕ್ಕಾ, ಫ್ರೈಡ್ ಬ್ರೊಕೊಲಿ, ಪನ್ನೀರ್ ಮಲಾಯಿ ಟಿಕ್ಕಾ, ವೆಜಿಟೇರಿಯನ್ ಕಬಾಬ್, ಮಸ್ಟರ್ಡ್ ಫಿಶ್ ಕರಿ, ಗುಸ್ತಬಾ ಬ್ರೊಕೊಲಿ, ಮಟನ್ ರೊಗಾನ್ ಜೋಶ್, ಚಿಕನ್ ಕುರ್ಮಾ, ದಾಲ್ ರೈಸಿನಾ, ಹಕ್ಕಾ ವೆಜ್, ಕಡಾಯಿ ಪಕೋಡಾ, ಚೋಲೆ, ದಹಿ ಗುಜಿಯಾ, ಪಾಪಡ್, ಪಲಾವ್, ತಂದೂರಿ ರೋಟಿ/ನಾನ್, ಮಲ್ಪವಾ.. ಇತ್ಯಾದಿ

Barack Obama Lunch Menu, Dinner Guests list

ಅತಿಥಿಗಳ ಪಟ್ಟಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್,ಅಮೀರ್ ಖಾನ್, ಎಆರ್ ರೆಹಮಾನ್, ಗುಲ್ಜಾರ್, ಪ್ರಿಯಾಂಕಾ ಛೋಪ್ರಾ..ಹೀಗೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ರಂಗದ 250ಕ್ಕೂ ಗಣ್ಯರಿಗೆ ಆಹ್ವಾನ ಕಳಿಸಲಾಗಿದೆ.
ಸಮಯ: 7.45 PMಕ್ಕೆ ಆತಿಥಿಗಳ ಆಗಮನ, 8.45 PM ಗೆ ವೆಜ್ ಹಾಗೂ ನಾನ್ ವೆಜ್ ಡಿನ್ನರ್

ಸಾಂಸ್ಕೃತಿಕ ಕಾರ್ಯಕ್ರಮ: ಮಾಧವಿ ಮುದ್ಗಲ್ (ಒಡಿಸ್ಸಿ), ಪ್ರೇರಣಾ ಶ್ರೀಮಾಲಿ(ಕಥಕ್), ಗೀತಾ ಚಂದ್ರನ್(ಭರತನಾಟ್ಯ), ರಾಜೇಂದ್ರ ಪಿಳ್ಳೈ (ಕಥಕ್ಕಳಿ), ಚಾರು ಸಿಜಾ ಮಾಥುರ್ (ಮಣಿಪುರಿ) ಸೇರಿದಂತೆ 30 ನೃತ್ಯಗಾರ್ತಿಯರು ರಾಷ್ಟ್ರಪತಿ ಭವನದ ಆಡಿಟೋರಿಯಂನಲ್ಲಿ ಅತಿಥಿಗಳಿಗೆ ಮನರಂಜನೆ ನೀಡಲಿದ್ದಾರೆ.

English summary
Barack Obama Lunch Menu is out. Prime Minister Narendra Modi hosted a lunch at Hyderabad house in New Delhi, Amitabh, Sachin, Sonia Gandhi among 250 celebrities to attend Obama dinner hosted by President Pranab Mukherjee on Sunday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X