ಅಮೆರಿಕ ಅಧ್ಯಕ್ಷ ಒಬಾಮಾ ಭಾರತ ಪ್ರವಾಸ ವೇಳಾಪಟ್ಟಿ
ನವದೆಹಲಿ, ಜ.22: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸಕ್ಕೆ ದಿನಗಣನೆ ಆರಂಭವಾಗಿದೆ. ಜ.25ರಿಂದ ಒಬಾಮಾ ಅವರ ಮೂರು ದಿನಗಳ ಪ್ರವಾಸ ಆರಂಭಗೊಳ್ಳಲಿದೆ.
ಭಾರತದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ ಆಗಮಿಸುತ್ತಿರುವ ಪ್ರಥಮ ಅಮೆರಿಕ ಅಧ್ಯಕ್ಷ ಹಾಗೂ ಭಾರತಕ್ಕೆ ಎರಡನೇ ಬಾರಿಗೆ ಭೇಟಿ ನೀಡುತ್ತಿರುವ ಅಧ್ಯಕ್ಷ ಎಂಬ ಟ್ಯಾಗ್ ಧರಿಸಿ ಒಬಾಮಾ ಬರುತ್ತಿದ್ದಾರೆ. [ಪ್ರಧಾನಿ ಮೋದಿ ಅಮೆರಿಕ ಪ್ರವಾಸ ವೇಳಾಪಟ್ಟಿ]
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಪ್ರಗತಿ, ಪರಮಾಣು ಒಪ್ಪಂದ, ವಿದೇಶಿ ಬಂಡವಾಳ ಹೂಡಿಕೆ, ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ಒಬಾಮಾ ಜೊತೆಗೆ ಯಾರು ಬರಲಿದ್ದಾರೆ?: ಭಾರತ ಪ್ರವಾಸದ ವೇಳೆ ಒಬಾಮಾ ಜೊತೆಗೆ ಅಮೆರಿಕ ಅಲ್ಪ ಸಂಖ್ಯಾತರ ಸಚಿವೆ ನ್ಯಾನ್ಸಿ ಪೆಲೊಸಿ, ವೈದ್ಯ ಅಮಿ ಬೆರಾ, ನ್ಯೂಯಾರ್ಕ್ ವಿದೇಶಾಂಗ ಸಚಿವ ಜೋಸೆಫ್ ಕ್ರೌಲಿ, ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಸ್‌ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಧ್ಯಕ್ಷ ಸುಸಾನ್ ಇ ರೈಸ್ ಮತ್ತು ಒಬಾಮಾ ಸಲಹೆಗಾರ ಜಾನ್ ಪೊಡೆಸ್ತಾ, ಅಮೆರಿಕ ವಿದೇಶಾಂಗ ಸಚಿವ ಮೈಕೆಲ್ ಫ್ರೊಮನ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇವರನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸ್ವಾಗತಿಸಲಿದ್ದಾರೆ. [ಬರಾಕ್ ಒಪ್ಪಿದ ಒಬಾಮಾರಿಂದ ಭಾರತದ ನಿರೀಕ್ಷೆಗಳೇನು?]

ಒಬಾಮಾ ಭೇಟಿ ವೇಳಾಪಟ್ಟಿ ಹೀಗಿದೆ:
ಜ.25- ಭಾನುವಾರ
* ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ಬರಾಕ್ ಒಬಾಮಾ ಆಗಮನ.
* ರಾಷ್ಟ್ರಪತಿ ಭವನದಿಂದ ರಾಜ್ ಘಾಟ್‌ಗೆ ಭೇಟಿ. ರಾಷ್ಟ್ರಪಿತ ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ.
* ಹೈದರಾಬಾದ್ ಹೌಸ್ ನಲ್ಲಿ ಸಭೆ : ದೇಶದ ಗಡಿ ವಿಚಾರ, ಆರ್ಥಿಕತೆ, ಹವಾಮಾನ ಬದಲಾವಣೆ, ಬಂಡವಾಳ, ರಕ್ಷಣೆ ಮತ್ತು ಭದ್ರತಾ ಸಹಕಾರ ಸೇರಿದಂತೆ ಪ್ರಾದೇಶಿಕ ಜಾಗತಿಕ ಸಮಸ್ಯೆ ಬಗ್ಗೆ ಚರ್ಚೆ
* ಪ್ರಧಾನಿ ಮೋದಿ ಅವರಿಂದ ಒಬಾಮಾ ಅವರಿಗೆ ಭೋಜನ ಕೂಟ ವ್ಯವಸ್ಥೆ
* ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಡಿನ್ನರ್. [ಮೋದಿ, ಒಬಾಮಾಗೆ ನಿಮ್ಮ ಪ್ರಶ್ನೆ, ಸಲಹೆ ಕಳಿಸಿ]
ಜ.26-ಸೋಮವಾರ
* ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯೊಂದಿಗೆ ಪರೇಡ್ ಮೈದಾನಕ್ಕೆ ಭೇಟಿ.
* ಭಾರತ ಹಾಗೂ ಅಮೆರಿಕ ದೇಶದ ಎಲ್ಲಾ ವ್ಯವಹಾರಿಕ ನಾಯಕರೊಂದಿಗೆ ಚರ್ಚೆ. ಜಂಟಿ ಸುದ್ದಿಗೋಷ್ಠಿ ಸಾಧ್ಯತೆ.
ಜ.27- ಮಂಗಳವಾರ
* ಒಬಾಮಾ ಪ್ರವಾಸದ ಕೊನೆಯ ದಿನ ಬೆಳಗ್ಗೆ ಭಾರತ ಮತ್ತು ಅಮೆರಿಕ ಭವಿಷ್ಯದ ಅಭಿವೃದ್ಧಿ ಕುರಿತಾಗಿ ಸಾರ್ವಜನಿಕ ಭಾಷಣ.
* ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ಪತ್ನಿ ಮಿಚೆಲ್ ಒಬಾಮಾ ಜೊತೆ
* ದೆಹಲಿ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ನಿರ್ಗಮನ.
Watch the LIVE Streaming of Media Briefing by Official Spokesperson, @MEAIndia https://t.co/kC7oMAzb12
— Indian Diplomacy (@IndianDiplomacy) January 22, 2015 -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications