ಮೋದಿ, ಒಬಾಮಾಗೆ ನಿಮ್ಮ ಪ್ರಶ್ನೆ, ಸಲಹೆ ಕಳಿಸಿ

Posted By:
Subscribe to Oneindia Kannada

ನವದೆಹಲಿ, ಜ.22: ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪ್ರಶ್ನೆ, ಸಲಹೆ, ಸೂಚನೆ ನೀಡುವ ಅವಕಾಶವನ್ನು ಟ್ವಿಟ್ಟರ್ ಮೂಲಕ ಕಲ್ಪಿಸಲಾಗಿದೆ. ಮೋದಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮಕ್ಕೂ ಮುನ್ನ ನಿಮ್ಮ ಪ್ರಶ್ನೆಗಳು ಅವರನ್ನು ತಲುಪಬೇಕಿದೆ.

ಗಣರಾಜ್ಯೋತ್ಸವ ಸಮಾರಂಭ ಅತಿಥಿಯಾಗಿ ಬರಾಕ್‌ ಒಬಾಮ ಅವರು ಆಗಮಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಗಣತಂತ್ರ ದಿನ ಸಂಭ್ರಮದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು, ಜನವರಿ 27ರಂದು ಅಮೆರಿಕಾ ಅಧ್ಯಕ್ಷರ ಜೊತೆ 'ಮನ್‌ ಕಿ ಬಾತ್‌' ರೆಡಿಯೋ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

Obama to join Modi on 'Mann ki Baat'

ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಪ್ರತಿ ಸಲ ತಾವು ಮಾತನಾಡುವ ವಿಷಯದ ಬಗ್ಗೆ ಸುಳಿವು ನೀಡುತ್ತಿದ್ದ ಪ್ರಧಾನಿ ಮೋದಿ ಈ ಬಾರಿ ಒಬಾಮಾ ಅವರ ಜೊತೆ ಜಂಟಿಯಾಗಿ ಭಾಷಣ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.

ಈ ಮನ್ ಕಿ ಬಾತ್ ಕಾರ್ಯಕ್ರಮ ಇರುವುದು ನಿಮಗಾಗಿ ನೀವುಗಳು ಪಾಲ್ಗೊಂಡರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ನಿಮ್ಮ ಸಲಹೆ, ಸೂಚನೆ, ಪ್ರಶ್ನೆಗಳನ್ನು #AskObamaModi ಎಂದು ಟ್ಯಾಗ್ ಹಾಕಿ (@narendramodi)ಟ್ವೀಟ್ ಮಾಡಿ

ಟ್ವಿಟ್ಟರ್ ಬಳಕೆ ಮಾಡುತ್ತಿಲ್ಲವಾದರೆ, ಚಿಂತಿಸಬೇಕಿಲ್ಲ. ಸರ್ಕಾರದ ಅಧಿಕೃತ ವೆಬ್ ಸೈಟ್ ಮೈ ಗವರ್ನಮೆಂಟ್ ನಲ್ಲೂ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ವೆಬ್ ತಾಣದ ಲಿಂಕ್ ಇಲ್ಲಿದೆ.

ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಅಧ್ಯಕ್ಷ ಒಬಾಮಾ ಹಾಗೂ ಪ್ರಧಾನಿ ಮೋದಿ ಅವರು ಯಾವ ವಿಷಯ ಮಾತನಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ನಿಮ್ಮ ಪ್ರಶ್ನೆಗಳು ಜನವರಿ 25ರೊಳಗೆ ತಲುಪಬೇಕಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The monthly Mann ki Baat radio broadcast of Prime Minister Narendra Modi this time will be special as he will be joined by US President Barack Obama. The programme will be aired on January 27, the Prime Minister revealed himself on Thursday through a series of tweets and asked for questions from the public.
Please Wait while comments are loading...