ಬರಾಕ್ ಒಪ್ಪಿದ ಒಬಾಮಾರಿಂದ ಭಾರತದ ನಿರೀಕ್ಷೆಗಳೇನು?
ನವದೆಹಲಿ, ಜ. 20: ಭಾರತದಲ್ಲಿ ಪ್ರತಿವರ್ಷ ನಡೆಯುವ ಗಣರಾಜ್ಯೋತ್ಸವದಲ್ಲಿ ಯಾವುದೇ ಒಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ. ಆದರೆ, ಈ ವರ್ಷ ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸುತ್ತಿರುವುದು ಅತಿ ಹೆಚ್ಚು ಪ್ರಚಾರ ಪಡೆದಿದೆ.
ನರೇಂದ್ರ ಮೋದಿ ಹಾಗೂ ಬರಾಕ್ ಒಬಾಮ ಇಬ್ಬರೂ ಈಗಾಗಲೇ ಮೂರು ಬಾರಿ ಭೇಟಿಯಾಗಿದ್ದಾರೆ. ಎರಡೂ ದೇಶಗಳು ಜಂಟಿಯಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿದ್ದಾರೆ. ಆದರೆ ಈ ಬಾರಿಯ ಭೇಟಿ ಇನ್ನಷ್ಟು ಪ್ರಾಮುಖ್ಯತೆ ಪಡೆದಿದೆ. [ಒಬಾಮಾ ಭೇಟಿ : ತಿಳಿಯಬೇಕಾದ 10 ಸಂಗತಿಗಳು]
ಕಳೆದ ವಾರ ವೈಬ್ರಂಟ್ ಗುಜರಾತ್‌ನಲ್ಲಿ ಭಾಗವಹಿಸಿದ್ದ ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಮಾತನಾಡಿ "ಒಬಾಮ ಹಾಗೂ ಮೋದಿ ಚರ್ಚೆಯು ವಾತಾವರಣ ಬದಲಾವಣೆ, ರಕ್ಷಣೆ, ನಾಗರಿಕರ ಪರಮಾಣು ಸಹಕಾರ ಹಾಗೂ ಆರ್ಥಿಕ ಪಾಲುದಾರಿಕೆ ಮೇಲೆ ಮುಖ್ಯ ಪರಿಣಾಮ ಬೀರಬಲ್ಲದು" ಎಂದು ಹೇಳಿದ್ದರು.
ಈ ಎಲ್ಲ ಕಾರಣಗಳಿಂದ ಭಾರತಕ್ಕೆ ಬರಾಕ್ ಒಬಾಮ ನೀಡುತ್ತಿರುವ ಭೇಟಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. [ಒಬಾಮಾ ವಾಪಸ್ ಹೋದ ಮೇಲೆ ದಾಳಿ ನಡೆಸಬಹುದೇ?]
1) ರಕ್ಷಣೆ : ಭಾರತ ಹಾಗೂ ಅಮೆರಿಕ 10 ವರ್ಷಗಳ ಕಾಲಕ್ಕಾಗಿ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಹಾಗೂ ಡ್ರೋಣ್ ಮತ್ತು ಸಾರಿಗೆ ವಿಮಾನಗಳ ಭಾಗಗಳನ್ನು ಜಂಟಿಯಾಗಿ ತಯಾರಿಸುವ ಒಪ್ಪಂದ.
2) ಸ್ಮಾರ್ಟ್ ಸಿಟಿ : ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಅಜ್ಮೇರ್, ಅಲಹಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ಜಾರಿಗೊಳಿಸಲು ಅಮೆರಿಕ ಸಹಕಾರಕ್ಕಾಗಿ ಈಗಾಗಲೇ ಉಭಯ ದೇಶಗಳ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಂಚಾರ ನಿರ್ವಹಣೆ, ಘನತ್ಯಾಜ್ಯ ವಸ್ತು ನಿರ್ವಹಣೆ, ಕಸ ವಿಲೇವಾರಿ, ವ್ಯರ್ಥ ನೀರಿನ ಸಂಸ್ಕರಣ ಹಾಗೂ ನೀರು ಸಂಗ್ರಹಣೆಯಲ್ಲಿ ಅಮೆರಿಕ ಭಾರತಕ್ಕೆ ಸಹಕಾರ ನೀಡುವ ನಿರೀಕ್ಷೆಯಿದೆ. [ಒಬಾಮಾ ಭದ್ರತೆಗೆ 1 ಲಕ್ಷ ಪೊಲೀಸರು]

3) ಆರ್ಥಿಕ ಸಂಬಂಧ : ಮೋದಿ ಅವರ ಉದ್ಯಮ ಒಲವಿನ ಮೇಲೆ ಅಮೆರಿಕಕ್ಕೆ ಎಂತಹ ವಿಶ್ವಾಸವಿದೆ ಎಂದರೆ ವೈಬ್ರಂಟ್ ಗುಜರಾತ್ ಕಾರ್ಯಕ್ರಮಕ್ಕೆ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಅವರು 80 ಸದಸ್ಯರ ತಂಡದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಈ ತಂಡದಲ್ಲಿ ವಿವಿಧ ಕಂಪನಿಗಳ 12 ಸಿಇಓ ಇದ್ದರು.
4) ನಾಗರಿಕ ಪರಮಾಣು ಒಪ್ಪಂದ : ಭಾರತ ಹಾಗೂ ಅಮೆರಿಕ ನಡುವಣ ಇರುವ ನಾಗರಿಕ ಪರಮಾಣು ಒಪ್ಪಂದದಲ್ಲಿರುವ ಹಲವು ವಿವಾದಗಳು ಹಾಗೂ ಗೊಂದಲಗಳ ಕುರಿತು ಚರ್ಚೆ ನಡೆಸಿ ಬಗೆಹರಿಸಿಕೊಳ್ಳುವ ನಿರೀಕ್ಷೆಯಿದೆ.
5) ಬಂಡವಾಳ ಹೂಡಿಕೆ ಒಪ್ಪಂದ : ಅಮೆರಿಕವು 2010ರಿಂದಲೂ ದ್ವಿಪಕ್ಷೀಯ ಹೂಡಿಕೆ ಉತ್ತೇಜನ ಮತ್ತು ಸಂರಕ್ಷಣಾ ಒಪ್ಪಂದಕ್ಕಾಗಿ ಒತ್ತಾಯಿಸುತ್ತಿದೆ. ಇದರಲ್ಲಿರುವ ಪ್ರಮುಖ ಷರತ್ತೆಂದರೆ ಭಾರತದಲ್ಲಿನ ವ್ಯವಹಾರವನ್ನು ಅಮೆರಿಕವೇ ನಿರ್ವಹಿಸುವಂತಾಗಬೇಕು ಎಂಬುದು. [ಭಾರತಕ್ಕೆ ಬುದ್ಧಿ ಹೇಳಿ : ಪಾಕ್]
6) ಆರೋಗ್ಯ : ಆರೋಗ್ಯ ಕ್ಷೇತ್ರದಲ್ಲಿ ಅಮೆರಿಕದ ಸಹಕಾರವನ್ನು ಭಾರತ ನಿರೀಕ್ಷಿಸುತ್ತಿದೆ. ವಿಶೇಷವಾಗಿ ಡೆಂಗ್ಯೂ, ಮಲೇರಿಯಾ, ಕ್ಷಯ ರೋಗಗಳಿಗೆ ಲಸಿಕೆ ಹಾಗೂ ಕ್ಯಾನ್ಸರ್ ಸಂಬಂಧಿ ಸಂಶೋಧನೆಗೆ ಸಹಕಾರ.
7) ಇಂಧನ : ಇರಾನ್ ಜೊತೆ ವ್ಯವಹರಿಸುತ್ತಿರುವ ಕಂಪನಿಗಳ ಪಟ್ಟಿಯಿಂದ ಭಾರತೀಯ ಕಂಪನಿಗಳನ್ನು ತೆಗೆದುಹಾಕಬೇಕು ಹಾಗೂ ಅಮೆರಿಕದ ಎಲ್‌ಎನ್‌ಜಿ ರಫ್ತುಗಳಲ್ಲಿ ನೇರ ಪ್ರವೇಶಕ್ಕೆ ಆದ್ಯತೆ ನೀಡಬೇಕು.
ಅಮೆರಿಕದ 'ಸರ್ಕಾರಿ ಹೊಣೆಗಾರಿಕೆ ಕಚೇರಿ'ಯು ಈಚೆಗಷ್ಟೇ ಭಾರತದ ಮೂರು ಕಂಪನಿಗಳನ್ನು ಇರಾನ್ ಜೊತೆ ಇಂಧನ ವ್ಯವಹಾರ ನಡೆಸುತ್ತಿರುವ ಕಂಪನಿಗಳ ಪಟ್ಟಿಯಲ್ಲಿ ಸೇರಿಸಿದೆ. ಇದರಿಂದ ಇಂತಹ ಕಂಪನಿಗಳು ಅಮೆರಿಕದಂತಹ ದೇಶಗಳೊಂದಿಗೆ ವ್ಯವಹರಿಸಲು ತೊಂದರೆ ಎದುರಾಗುತ್ತಿದೆ.
ಇದರ ಜೊತೆಯಲ್ಲಿ ಅಮೆರಿಕದೊಂದಿಗೆ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್‌ಜಿ) ವ್ಯವಹಾರ ನಡೆಸುವ ಕುರಿತೂ ಭಾರತ ಆಸಕ್ತಿ ತೋರಿದೆ. ಆದರೆ, ಭಾರತ ಉಚಿತ ವ್ಯಾಪಾರ ಒಪ್ಪಂದ ಹೊಂದಿಲ್ಲದ ಕಾರಣ ಈ ಬೇಡಿಕೆ ಈಡೇರುವುದು ಕಷ್ಟಕರ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications