ದೆಹಲಿಯಲ್ಲಿ ಪೆಟ್ರೋಲಿಯಂ ಸಚಿವರ ಮೆಟ್ರೋ ಸವಾರಿ!

ನವದೆಹಲಿ, ಅ.9 ತಾವು ಕೊಟ್ಟ ಮಾತನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಉಳಿಸಿಕೊಂಡಿದ್ದಾರೆ. ಪ್ರತಿದಿನ ನಾಲ್ಕಾರು ಕಾರುಗಳೊಂದಿಗೆ ಕಚೇರಿಗೆ ಬರುತ್ತಿದ್ದ ಮೊಯ್ಲಿ, ಬುಧವಾರ ಮೆಟ್ರೋ ರೈಲಿನಲ್ಲಿ ಕಚೇರಿಗೆ ಆಗಮಿಸಿದರು, ಈ ಮೂಲಕ ಇಂಧನ ಉಳಿಸಿ ಎಂಬ ಸಂದೇಶವನ್ನು ದೇಶಕ್ಕೆ ಸಾರಿದರು.

ಬುಧವಾರ ಬೆಳಗ್ಗೆ ತುಘಲಕ್ ಲೇನ್‌ನಲ್ಲಿರುವ ತಮ್ಮ ನಿವಾಸದಿಂದ ರೇಸ್‌ ಕೋರ್ಸ್ ಮೆಟ್ರೋ ನಿಲ್ದಾಣಕ್ಕೆ ನಡೆದುಬಂದ ಸಚಿವ ಮೊಯ್ಲಿ, ಎರಡು ಸ್ಟೇಶನ್ ಆಚೆಗಿರುವ ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣದಲ್ಲಿ ಮೆಟ್ರೋ ರೈಲಿನಲ್ಲಿ ಬಂದಿಳಿದರು. ನಂತರ ನಡೆದುಕೊಂಡು ಕಚೇರಿ ಸೇರಿದರು.

ಇಷ್ಟು ದೂರವನ್ನು ಕ್ರಮಿಸಲು ಕೇವಲ 15 ನಿಮಿಷ ಸಾಕಾಗುತ್ತದೆ. ಆದರೆ. ಮಾಧ್ಯಮಗಳು ಸುತ್ತುವರೆದಿದ್ದರಿಂದ ಸುಮಾರು 25 ನಿಮಿಷಗಳನ್ನು ಮೊಯ್ಲಿ ತೆಗೆದುಕೊಂಡರು. ಇನ್ನು ಮುಂದೆ ತನ್ನ ಸಚಿವಾಲಯ ಮತ್ತು 14 ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಬುಧವಾರ ಬಸ್‌ ದಿನ ಅಥವಾ ಸಾರ್ವಜನಿಕ ಸಾರಿಗೆ ದಿನವೆಂದು ಘೋಷಿಸಿದರು.

ಪೆಟ್ರೋಲಿಯಂ ಇಲಾಖೆ ಜಂಟಿ ಕಾರ್ಯದರ್ಶಿಗಳಾದ ನೀರಜ್ ಮಿತ್ತಲ್ ಮತ್ತು ಅರಮನೆ ಗಿರಿಧರ್ ಅವರು 8 ಕಿ.ಮೀ. ಸೈಕಲ್ ತುಳಿದು ಕಚೇರಿ ಸೇರಿದರೆ, ಮೊಯ್ಲಿ ಆಪ್ತ ಕಾರ್ಯದರ್ಶಿ ಸಂಜೀವ್ ಕುಮಾರ್ ಕೂಡ ಪ್ರತ್ಯೇಕ ಮೆಟ್ರೋ ರೈಲಿನಲ್ಲಿ ಕಚೇರಿಗೆ ಬಂದು ಸೇರಿದರು. ಚಿತ್ರಗಳಲ್ಲಿ ನೋಡಿ ಮೊಯ್ಲಿ ಮೆಟ್ರೋ ಪ್ರಯಾಣ

ಮೆಟ್ರೋ ನಿಲ್ದಾಣಕ್ಕೆ ಬಂದ ಸಚಿವರು

ಮೆಟ್ರೋ ನಿಲ್ದಾಣಕ್ಕೆ ಬಂದ ಸಚಿವರು

ಪ್ರತಿದಿನ ನಾಲ್ಕಾರು ಕಾರುಗಳ ಜೊತೆ ಕಚೇರಿಗೆ ತೆರಳುತ್ತಿದ್ದ ಮೊಯ್ಲಿ ಬುಧವಾರ ಬೆಳಗ್ಗೆ ನಡೆದುಕೊಂಡು ಮೆಟ್ರೋ ನಿಲ್ದಾಣ ತಲುಪಿದರು. ಅಲ್ಲಿಂದ ಎರಡು ನಿಲ್ದಾಣಗಳನ್ನು ದಾಟಿ ತಮ್ಮ ಕಚೇರಿ ತಲುಪಿದರು.

25 ನಿಮಿಷ ಅವಧಿ

25 ನಿಮಿಷ ಅವಧಿ

ಮೊಯ್ಲಿ ಅವರ ನಿವಾಸದಿಂದ ಕಚೇರಿಗೆ ತೆರಳಲು ಐದು ನಿಮಿಷಗಳ ಅವಧಿ ಸಾಕು. ಆದರೆ, ಬುಧವಾರ ಮಾಧ್ಯಮಗಳು ಮತ್ತು ಜನರು ಮೊಯ್ಲಿ ಸುತ್ತುವರೆದಿದ್ದರಿಂದ ಅವರು ರೈಲ್ವೆ ನಿಲ್ದಾಣ ತಲುಪಲು ಸುಮಾರು 24 ನಿಮಿಷ ತೆಗೆದುಕೊಂಡರು.

ಪ್ರತಿ ಬುಧವಾರ ಸಾರ್ವಜನಿಕ ಸಾರಿಗೆ

ಪ್ರತಿ ಬುಧವಾರ ಸಾರ್ವಜನಿಕ ಸಾರಿಗೆ

ಇನ್ನು ಮುಂದೆ ತನ್ನ ಸಚಿವಾಲಯ ಮತ್ತು 14 ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಬುಧವಾರ ಬಸ್‌ ದಿನ ಅಥವಾ ಸಾರ್ವಜನಿಕ ಸಾರಿಗೆ ದಿನವೆಂದು ಮೊಯ್ಲಿ ಘೋಷಿಸಿದರು. ಆ ಮೂಲಕ ಇಂಧನ ಉಳಿತಾಯ ಮಾಡುವಂತೆ ದೇಶಕ್ಕೆ ಕರೆ ನೀಡಿದರು.

ಉಳಿದವರು ಏನು ಮಾಡಿದರು

ಉಳಿದವರು ಏನು ಮಾಡಿದರು

ಪೆಟ್ರೋಲಿಯಂ ಖಾತೆಯ ಜಂಟಿ ಕಾರ್ಯದರ್ಶಿಗಳಾದ ನೀರಜ್ ಮಿತ್ತಲ್ ಮತ್ತು ಅರಮನೆ ಗಿರಿಧರ್ ಅವರು 8 ಕಿ.ಮೀ. ಸೈಕಲ್ ತುಳಿದು ಕಚೇರಿ ಸೇರಿದರು. ಮೊಯ್ಲಿ ಆಪ್ತ ಕಾರ್ಯದರ್ಶಿ ಸಂಜೀವ್ ಕುಮಾರ್ ಕೂಡ ಪ್ರತ್ಯೇಕ ಮೆಟ್ರೋ ರೈಲಿನಲ್ಲಿ ಕಚೇರಿಗೆ ಆಮಿಸಿದರು.

ಕೊಟ್ಟ ಮಾತು ಉಳಿಸಿಕೊಂಡರು

ಕೊಟ್ಟ ಮಾತು ಉಳಿಸಿಕೊಂಡರು

ಸೆ.27ರಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮೊಯ್ಲಿ ಇಂಧನ ಉಳಿತಾಯದ ಮಹತ್ವ ಸಾರಲು ಪ್ರತಿ ಬುಧವಾರ ಮೆಟ್ರೋ ಅಥವ ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುವುದಾಗಿ ಹೇಳಿದ್ದರು. ಬುಧವಾರ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ತಮ್ಮ ಮಾತನ್ನು ಮೊಯ್ಲಿ ಉಳಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+