ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಪೂ ಸಮಾಧಿಗೆ ನಮಿಸಿದ ಚೀನಾ ಪ್ರಥಮ ದಂಪತಿ

By Mahesh
|
Google Oneindia Kannada News

ನವದೆಹಲಿ, ಸೆ.18:ಚೀನಾ ದೇಶದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ತಮ್ಮ ಭಾರತ ಪ್ರವಾಸದ ಎರಡನೇ ದಿನದಂದು ರಾಜ್ ಘಾಟ್, ರಾಷ್ಟ್ರಪತಿ ಭವನ ಭೇಟಿ ನಂತರ ಪ್ರಧಾನಿ ಮೋದಿ ಜೊತೆ ದ್ವೀಪಕ್ಷೀಯ ಮಾತುಕತೆ ಮುಂದುವರೆಸಿದ್ದಾರೆ.

ಸುಮಾರು 90 ನಿಮಿಷ ಅವಧಿಯ ಮಾತುಕತೆಯಲ್ಲಿ ಗಡಿಯಲ್ಲಿ ನುಸುಳುತ್ತಿರುವ ಚೀನಿ ಯೋಧರ ಬಗ್ಗೆ ಮೋದಿ-ಪಿಂಗ್ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಆಧಾತ್ಮ ಗುರು ದಲೈಲಾಮಾ ಅವರು 'ಮೋದಿ ನೋಡಿ ಪಿಂಗ್ ಕಲಿತುಕೊಳ್ಳುವುದು ಸಾಕಷ್ಟಿದೆ' ಎಂದು ಹೇಳಿಕೆ ನೀಡಿದ್ದಾರೆ. ಎರಡನೇ ದಿನದ ಕಾರ್ಯಕ್ರಮ ವಿವರ, ದ್ವಿಪಕ್ಷೀಯ ಒಪ್ಪಂದಗಳ ಮುಖ್ಯಾಂಶಗಳನ್ನು ಇಲ್ಲಿ ಓದಿರಿ..

2.30: ಭಾರತ ಹಾಗೂ ಚೀನಾ ನಡುವೆ 12 ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಲ್ಲಿ ಕೈಲಾಸ ಮಾನಸ ಸರೋವರ ಹಾಗೂ ರೈಲ್ವೆ ಯೋಜನೆಗಳು ಪ್ರಮುಖವಾಗಿವೆ.

13.55: ಹೈದರಾಬಾದ್ ಹೌಸ್ ನಲ್ಲಿ ಚೀನಾ ಹಾಗೂ ಭಾರತದ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆ ನಡೆದಿದೆ.

10.20: ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಪತ್ನಿ ಪೆಂಗ್ ಅವರು ರಾಜ್ ಘಾಟ್ ನಲ್ಲಿ ಬಾಪು ಸಮಾಧಿಗೆ ನಮಿಸಿದ್ದಾರೆ.

9.40: ಭಾರತದ ಗಡಿಯೊಳಗೆ ಚೀನಿಯರು ನುಸುಳುವಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ದಿವಸವೇ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

9.25: ಚೀನಾಯೋಧರ ಕಿರುಕುಳ ನಿಯಂತ್ರಿಸಲು ಸದ್ಯದಲ್ಲೇ ಫ್ಲಾಗ್​ ಮೀಟಿಂಗ್​ ನಡೆಸಲು ಭಾರತೀಯ ಸೇನಾ ಅಧಿಕಾರಿಗಳು ನಿರ್ಧರಿಸಿದ್ದಾರೆ.
9.15:
ಭಾರತದ ಲಡಾಕ್ ​ನಲ್ಲಿ ಚೀನಾ ಸೈನಿಕರು ಮತ್ತೆ ಗಡಿ ನಿಯಮ ಉಲ್ಲಂಘಿಸಿದ್ದಾರೆ. ಚೂಮರ್ ​ ಬಳಿ ಸುಮಾರು 4ರಿಂದ 5 ಕಿಲೋಮೀಟರ್​ ಒಳ ನುಸುಳಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ, 500 ಮೀಟರ್ ವರೆಗೆ ಅತಿಕ್ರಮ ಪ್ರವೇಶ ಮಾಡಿ, ಚೀನಾ ಪಡೆಗಳು ಟೆಂಟ್​ ಹಾಕಿದ್ದವು.

ಮೋದಿ ನೋಡಿ ಜಿನ್ ಪಿಂಗ್ ಕಲಿಯಲಿ

ಮೋದಿ ನೋಡಿ ಜಿನ್ ಪಿಂಗ್ ಕಲಿಯಲಿ

ಚೀನಾ ಮೊದಲಿಗೆ ನೆರೆ ರಾಷ್ಟ್ರಗಳ ಜೊತೆ ನಂಬಿಕೆ ಉಳಿಸಿಕೊಳ್ಳಲಿ, ಪರಸ್ಪರ ನಂಬಿಕೆ ಗೌರವ ಇದ್ದರೆ ಮಾತ್ರ ದ್ವಿಪಕ್ಷೀಯ ಮಾತುಕತೆ ಸಂಬಂಧ ವೃದ್ಧಿಯಾಗುವುದು. ಈ ವಿಷಯದಲ್ಲಿ ಮೋದಿ ನೋಡಿ ಪಿಂಗ್ ಕಲಿಯುವುದು ಸಾಕಷ್ಟಿದೆ ಎಂದು ದಲೈಲಾಮಾ ಹೇಳಿದ್ದಾರೆ.

ಟಿಬೇಟ್ ಸಮಸ್ಯೆ, ಭಾರತದ ಸಮಸ್ಯೆ ಬೇರೆಯಲ್ಲ

ಟಿಬೇಟ್ ಸಮಸ್ಯೆ, ಭಾರತದ ಸಮಸ್ಯೆ ಬೇರೆಯಲ್ಲ, ನೆರೆ ರಾಜ್ಯದ ಜೊತೆ ವ್ಯವಹರಿಸುವ ರೀತಿಯನ್ನು ಭಾರತದಿಂದ ಚೀನಾ ಕಲಿತುಕೊಳ್ಳಲಿ ಎಂದು ಟಿಬೇಟಿನ ಆಧಾತ್ಮ ಗುರು ದಲೈ ಲಾಮಾ ಹೇಳಿದ್ದಾರೆ.

ಗುರುವಾರ ಕೂಡಾ ಹೈದರಾಬಾದ್ ಹೌಸ್, ರಾಯಭಾರಿ ಕಚೇರಿ ಎದುರಲ್ಲಿ ನೂರಾರು ಜನ ಟಿಬೇಟಿಯನ್ನರು ಚೀನಾ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ

ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ

ಚೀನಾದ ಪ್ರಥಮ ಮಹಿಳೆ ಪೆಂಗ್ ಲಿಯೂನ್ ಅವರು ಕೂಡಾ ಅಧ್ಯಕ್ಷರೊಂದಿಗೆ ಆಗಮಿಸಿದ್ದಾರೆ. ಜೊತೆಗೆ 50 ಕ್ಕೂ ಅಧಿಕ ಪ್ರತಿನಿಧಿಗಳನ್ನು ತಮ್ಮೊಂದಿಗೆ ಚೀನಾ ಅಧ್ಯಕ್ಷರು ಕರೆ ತಂದಿದ್ದಾರೆ. ಮೊದಲ ದಿನ ಮೂರು ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ

ಚೀನಾ ಯೋಧರ ಕಿರುಕುಳ ಬಗ್ಗೆ MEA

ಚೀನಾ ಯೋಧರ ಕಿರುಕುಳ ಬಗ್ಗೆ ಮಾತುಕತೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿ ಸೈಯದ್ ಅಕ್ಬರುದ್ದೀನ್ ಹೇಳಿಕೆ

ಬಾಪೂ ಸಮಾಧಿಗೆ ಚೀನಾ ದಂಪತಿ ನಮನ

ಬಾಪೂ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಚೀನಾ ದಂಪತಿ ಕ್ಸಿ ಜಿನ್ ಪಿಂಗ್ ಹಾಗೂ ಪೆಂಗ್ ಅವರಿಂದ ನಮನ.

ರಾಜ್ ಘಾಟ್ ನಲ್ಲಿ ಚೀನಾ ಪ್ರಥಮ ದಂಪತಿ

ರಾಜ್ ಘಾಟ್ ನಲ್ಲಿ ಗಾಂಧೀಜಿ ಸಮಾಧಿಗೆ ಭೇಟಿ ನೀಡುವಾಗ ಚೀನಾ ಪ್ರಥಮ ದಂಪತಿಗೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಜೊತೆಯಾಗಿದ್ದರು.

ಚೀನಾ ಅಧ್ಯಕ್ಷ ಮೊದಲ ದಿನದ ಅಪ್ಡೇಟ್ಸ್

ಚೀನಾ ಅಧ್ಯಕ್ಷ ಮೊದಲ ದಿನದ ಅಪ್ಡೇಟ್ಸ್

ಬುಧವಾರ ಮಧ್ಯಾಹ್ನ ಭಾರತಕ್ಕೆ ಕಾಲಿರಿಸಿದ ಕ್ಸಿ ಜಿನ್ ಪಿಂಗ್ ದಂಪತಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಗುಜರಾತ್ ಸಿಎಂ ಅನಂದಿ ಬೇನ್ ಅವರು ಆತ್ಮೀಯವಾಗಿ ಸ್ವಾಗತ ಸಿಕ್ಕಿತು. ನಂತರ ಹೋಟೆಲ್ ಹಯಾತ್ ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ನಂತರ ಸಬರಮತಿ ಆಶ್ರಮಕ್ಕೆ ತೆರಳಿ ಗುಜರಾತಿ ಕಲಾ ತಂಡಗಳ ನೃತ್ಯ ವೈಭವ ವೀಕ್ಷಿಸಿದರು. [ಮೊದಲ ದಿನದ ಮುಖ್ಯಾಂಶಗಳು]

English summary
Xi Jinping visit to India Day 2 Updates: In a step to give India-China bilateral relations a new direction, Modi and Jinping signed three crucial memorandum of understanding pertaining to trade and business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X