ಮೋದಿ ಜತೆ ಅಮೆರಿಕದ ಅತಿಥಿಗಳು, ವೀಸಾ ಬಗ್ಗೆ ಚರ್ಚೆ!
ಎಚ್ 1 ವೀಸಾ ನಿಯಮದಲ್ಲಿ ಸಡಿಲಿಕೆ, ಭಾರತದ ಕೌಶಲ್ಯಪೂರ್ಣ ಉದ್ಯೋಗಿಗಳಿಂದ ಅಮೆರಿಕಕ್ಕೆ ಆಗುತ್ತಿರುವ ಕೊಡುಗೆ ಬಗ್ಗೆ ಮೋದಿ ಅವರು ಅಮೆರಿಕದ ನಿಯೋಗದೊಂದಿಗೆ ಚರ್ಚಿಸಿದರು
ನವದೆಹಲಿ, ಫೆಬ್ರವರಿ 22: ಅಮೆರಿಕ ಕಾಂಗ್ರೆಸ್ಸಿನ ಇಪ್ಪತ್ತಾರು ಸದಸ್ಯರ ಉಭಯಪಕ್ಷೀಯ ಜಂಟಿ ನಿಯೋಗ ಮಂಗಳವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಎಚ್ 1 ವೀಸಾ ನಿಯಮದಲ್ಲಿ ಸಡಿಲಿಕೆ, ಭಾರತದ ಕೌಶಲ್ಯಪೂರ್ಣ ಉದ್ಯೋಗಿಗಳಿಂದ ಅಮೆರಿಕಕ್ಕೆ ಆಗುತ್ತಿರುವ ಕೊಡುಗೆ ಬಗ್ಗೆ ಮೋದಿ ಅವರು ಚರ್ಚಿಸಿದರು ಎಂದು ತಿಳಿದು ಬಂದಿದೆ.
ಪ್ರಧಾನಮಂತ್ರಿಯವರು ಕಾಂಗ್ರೆಸ್ ಪ್ರತಿನಿಧಿಗಳನ್ನು ಭಾರತಕ್ಕೆ ಸ್ವಾಗತಿಸಿ, ಅಮೆರಿಕದ ಹೊಸ ಆಡಳಿತ ಮತ್ತು ಕಾಂಗ್ರೆಸ್ ನೊಂದಿಗೆ ದ್ವಿಪಕ್ಷೀಯ ವಿನಿಮಯದ ಉತ್ತಮ ಆರಂಭ ಶುಭ ಸೂಚನೆಯಾಗಿದೆ ಎಂದು ಅವರು ಹೇಳಿದರು.[ಎಚ್ 1 ಬಿ ಎಫೆಕ್ಟ್: ಇನ್ಫಿ,ವಿಪ್ರೋ, ಟಿಸಿಎಸ್ ಷೇರು ಕುಸಿತ]
ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗಿನ ಧನಾತ್ಮಕ ಸಂವಾದವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಆಳವಾಗಿರುವ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕದ ಪಾಲುದಾರಿಕೆಗೆ ಕಾಂಗ್ರೆಸ್ ನ ಉಭಯಪಕ್ಷೀಯ ಬೆಂಬಲವನ್ನು ಅವರು ಗುರುತಿಸಿದರು.
ಪರಸ್ಪರರ ಪ್ರಗತಿಗೆ ಹಲವಾರು ವರ್ಷಗಳಿಂದ ಕೊಡುಗೆ ನೀಡುತ್ತಿರುವ ಜನರೊಂದಿಗಿನ ಸಂಪರ್ಕ ಸೇರಿದಂತೆ, ಎರಡೂ ರಾಷ್ಟ್ರಗಳು ಇನ್ನೂ ಹೆಚ್ಚು ಆಪ್ತವಾಗಿ ಕಾರ್ಯ ನಿರ್ವಹಿಸಬಹುದಾದ ಕ್ಷೇತ್ರಗಳ ಮೇಲೆ ಪ್ರಧಾನಿಯವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.
ಈ ನಿಟ್ಟಿನಲ್ಲಿ, ಅಮೆರಿಕದ ಆರ್ಥಿಕತೆ ಮತ್ತು ಸಮಾಜವನ್ನು ಶ್ರೀಮಂತಗೊಳಿಸುವಲ್ಲಿ ಭಾರತೀಯ ಪ್ರತಿಭಾವಂತರ ಕೌಶಲ್ಯದ ಮಹತ್ವ ಪಾತ್ರವನ್ನು ಅವರು ಉಲ್ಲೇಖಿಸಿದರು. ಪ್ರತಿಫಲನಾತ್ಮಕ, ಸಮತೋಲಿತ ಮತ್ತು ದೂರದರ್ಶಿತ್ವದ ದೃಷ್ಟಿಕೋನವುಳ್ಳ ನುರಿತ ವೃತ್ತಿಪರರ ಸುಗಮ ಸಂಚಾರ ಅಭಿವೃದ್ಧಿಪಡಿಸಲು ಅವರು ಒತ್ತಾಯಿಸಿದರು.

ಮೋದಿ ಜತೆ ಸತ್ಯ ನಡೆಲ್ಲಾ
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಅವರು ಮಾತನಾಡಿ, ಮೈಕ್ರೋಸಾಫ್ಟ್ ಸಂಸ್ಥೆ ಸೇರಿ ಅಲ್ಲಿ ಉನ್ನತ ಹುದ್ದೇಗೇರಲು ಭಾರತದ ವೀಸಾ ನೀತಿ ಹಾಗೂ ಕೌಶಲ್ಯ ಪೂರ್ಣ ಉದ್ಯೋಗಿಗಳಿಗೆ ನೀಡುವ ಪ್ರೋತ್ಸಾಹವೇ ಕಾರಣ ಎಂದರು. ಆದರೆ, ಎಚ್ 1 ವೀಸಾ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

26 ಮಂದಿ ಯುಎಸ್ ಪ್ರತಿನಿಧಿಗಳು
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿಯ ದೆಸೆಯಿಂದ ಸುಮಾರು 150 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಐಟಿ ಕ್ಷೇತ್ರ ಆತಂಕದಲ್ಲಿದೆ. ವೀಸಾ ನೀತಿಯಲ್ಲಿ ಮಾರ್ಪಾಟು ಹಾಗೂ ಎಚ್ 1 ಬಿ ವೀಸಾ ಪಡೆಯುವ ಪ್ರತಿಭಾವಂತರ ಬಗ್ಗೆ ಮೋದಿ ಅವರು ಹೆಚ್ಚಿನ ಒತ್ತು ನೀಡಿ ವಿವರಿಸಿದರು ಎಂದು ತಿಳಿದು ಬಂದಿದೆ.

ಎಚ್ 1 ಬಿ ವೀಸಾ ಭಾರತೀಯರೇ ಮುಂದೆ
ಪ್ರತಿ ವರ್ಷ ಸುಮಾರು 65,000 ಎಚ್ 1 ಬಿ ವೀಸಾ ನೀಡಲಾಗುತ್ತಿದೆ. ಈ ಮಾದರಿ ವೀಸಾ ಪಡೆಯುವುದರಲ್ಲಿ ಭಾರತೀಯರೇ ಮುಂದಿದ್ದಾರೆ. ಯುಎಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದವರಿಗೆ ವಿನಾಯಿತಿ ಸೇರಿದಂತೆ ಈ ಸಂಖ್ಯೆ ಹೆಚ್ಚಳ ಹಾಗೂ ಸಂಸ್ಥೆಗಳಿಂದ ಬೇಡಿಕೆ ಅಧಿಕವಾಗುತ್ತಿದೆ. ಆದರೆ, ಇದಕ್ಕೆ ನೇರವಾಗಿ ತಡೆಯೊಡ್ಡದೆ ಪರೋಕ್ಷವಾಗಿ ಟ್ರಂಪ್ ಆದೇಶ ಹೊರಡಿಸಿದರು.

ರಫ್ತು ಆದಾಯದ ಶೇಕಡಾ 60ರಷ್ಟು
ಅಮೆರಿಕದ ಸಂಸತ್ತಿನಲ್ಲಿ (ಯುಎಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಎಚ್-1ಬಿ ವೀಸಾದಾರರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಅಂದರೆ 60,000 ಡಾಲರ್ನಿಂದ 1,30,000 ಡಾಲರ್ಗಳಿಗೆ ಏರಿಸಲು ಕರೆ ನೀಡಿದ ಎಚ್-1ಬಿ ವೀಸಾ ಸುಧಾರಣಾ ಮಸೂದೆ ಮಂಡನೆಯಾಗಿದೆs ಅಮೆರಿಕದ ಸಂಸತ್ತಿನಲ್ಲಿ ಎಚ್ 1 ಬಿ ವೀಸಾದಾರರ ಕನಿಷ್ಠ ವೇತನವನ್ನು ದುಪ್ಪಟ್ಟುಗೊಳಿಸುವ ಮಸೂದೆ ಅಂಗೀಕೃತವಾದರೆ ಈ ವೇತನ ಮೊತ್ತ ಭಾರತೀಯ ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು ಆಗುತ್ತದೆ
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications