ಎರಡನೇ ಹಂತದ ನಮ್ಮ ಮೆಟ್ರೋಗೆ ಕೇಂದ್ರ ಅನುಮತಿ

ನವದೆಹಲಿ, ಜ.30 : ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 72.09 ಕಿ.ಮೀ. ಉದ್ದದ ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಸುಮಾರು 26,400 ಕೋಟಿ ವೆಚ್ಚದ ಯೋಜನೆ ಇದಾಗಿದೆ.

ನವದೆಹಲಿಯಲ್ಲಿ ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸುಮಾರು 26,400 ಕೋಟಿ ರೂ. ಯೋಜನೆಗೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.

Namma Metro

ಒಟ್ಟು 72.09 ಕಿ.ಮೀ. ಉದ್ದದ ಎರಡನೇ ಹಂತದ ಮೆಟ್ರೋ ಕಾಮಗಾರಿಗಾಗಿ ಬಿಎಂಆರ್ ಸಿಎಲ್ ಈಗಾಗಲೇ ಸ್ಥಳಗಳನ್ನು ಗುರುತಿಸಿದೆ. ನಮ್ಮ ಮೆಟ್ರೋ ಎರಡನೇ ಹಂತ ಬಹುತೇಕ ಬೆಂಗಳೂರು ಹೊರವಲಯಗಳನ್ನು ಸಂಪರ್ಕಿಸಲಿದ್ದು, 61 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ. [ಮ್ರೆಟ್ರೋ 1ನೇ ಹಂತ 2015ಕ್ಕೆ ಪೂರ್ಣ]

ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆ ಬಹುತೇಕ ನಗರದ ಹೊರವಲಯಗಳನ್ನು ಸಂಪರ್ಕಿಸಲಿದೆ. ಒಟ್ಟು 72.09 ಕಿ.ಮೀ ಉದ್ದ ಈ ಮಾರ್ಗದ ನಕ್ಷೆ ಹೀಗಿದೆ.
ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌- 15.50 ಕಿ.ಮೀ.
ಮೈಸೂರು ರಸ್ತೆ ಟರ್ಮಿನಲ್‌- ಕೆಂಗೇರಿ- 6.45 ಕಿ.ಮೀ.
ಹೆಸರಘಟ್ಟ ಕ್ರಾಸ್‌- ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ- 3.77 ಕಿ.ಮೀ.
ಗೊಟ್ಟಿಗೆರೆ-ಐಐಎಂಬಿ-ನಾಗವಾರ- 21.85 ಕಿ.ಮೀ.
ಆರ್‌.ವಿ.ರಸ್ತೆ- ಬೊಮ್ಮಸಂದ- 18.82 ಕಿ.ಮೀ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+