ಪ್ರಿಯಾಂಕಾ ಗಾಂಧಿಯನ್ನು 'ಕಳ್ಳನ ಹೆಂಡತಿ' ಎಂದ ಉಮಾ ಭಾರತಿ
ನವದೆಹಲಿ, ಏಪ್ರಿಲ್ 16: ಕೇಂದ್ರ ಸಚಿವೆ ಉಮಾ ಭಾರತಿ ಅವರು ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಕಳ್ಳನ ಹೆಂಡತಿ (ಚೋರ್ ಕಿ ಪತ್ನಿ) ಎಂದು ಜರಿದಿದ್ದಾರೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಪ್ರಭಾವ ಹೇಗೆ ಆಗಬಹುದು ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಏನಿಲ್ಲ. ಆ ಮಹಿಳೆಯ ಗಂಡ ಮೇಲೆ ಕಳ್ಳತನದ ಆರೋಪ ಇದೆ... ಜನರಿಗೆ ಆಕೆ ಬಗ್ಗೆ ಎಂಥ ಅಭಿಪ್ರಾಯ ಇರಬಹುದು...ಕಳ್ಳನ ಹೆಂಡತಿಗೆ ಎಂಥ ಸ್ಥಾನ ಇರುತ್ತದೆ-ಅಂಥದೇ ಸ್ಥಾನ ಹಿಂದೂಸ್ತಾನದಲ್ಲಿ ಆಕೆಗೆ ಇರುತ್ತದೆ ಎಂದು ಉಮಾ ಭಾರತಿ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾರನ್ನು ಹಲವು ಪ್ರಕರಣಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಅದರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವೂ ಇದೆ. ಕಳೆದ ಹಲವು ವರ್ಷಗಳಿಂದ ರಾಬರ್ಟ್ ವಾದ್ರಾರನ್ನು ಮುಂದೆ ಮಾಡಿಕೊಂಡು ಕಾಂಗ್ರೆಸ್ ಮೇಲೆ ಬಿಜೆಪಿಯವರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಯಾವಾಗ ಕಾಂಗ್ರೆಸ್ ನಿಂದ ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ಜವಾಬ್ದಾರಿ ವಹಿಸಿಕೊಂಡರೋ ಆಗಿನಿಂದ ಆ ದಾಳಿ ವಿಪರೀತಕ್ಕೆ ಹೋಗಿದೆ.












Click it and Unblock the Notifications