ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಕ್ಕೆ ಯಾವಾಗಲೂ ಗೆಲುವು, ರಾಬರ್ಟ್ ವಾದ್ರಾ ಫೇಸ್ಬುಕ್ ಪೋಸ್ಟ್

|
Google Oneindia Kannada News

ನವದೆಹಲಿ, ಫೆಬ್ರವರಿ 10: ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರು ಮನಿಲಾಂಡ್ರಿಂಗ್ ಕೇಸಿನಲ್ಲಿ ಸತತ ವಿಚಾರಣೆ ಎದುರಿಸಿದ ಬಳಿಕ, ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಸತತ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಬರ್ಟ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ವಾದ್ರಾ ಅವರು ಫೇಸ್‌ಬುಕ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲರಿಗೂ ಶುಭ ಮುಂಜಾನೆ ಕೋರುತ್ತಾ ಪೋಸ್ಟ್‌ ಹಾಕಿದ್ದು, ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದಿದ್ದಾರೆ.

ಸೋನಿಯಾ ಅಳಿಯನ ಆಪ್ತರಿಗೆ 'ಇಡಿ' ಆಘಾತ, ಬೆಂಗಳೂರಲ್ಲೂ ದಾಳಿ ಸೋನಿಯಾ ಅಳಿಯನ ಆಪ್ತರಿಗೆ 'ಇಡಿ' ಆಘಾತ, ಬೆಂಗಳೂರಲ್ಲೂ ದಾಳಿ

ಈ ಸಂದರ್ಭದಲ್ಲಿ ದೇಶಾದ್ಯಂತ ಬೆಂಬಲ ನೀಡಿದ ನನ್ನ ಸ್ನೇಹಿತರು ಮತ್ತು ಪರಿಚಯಸ್ಥರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಚೆನ್ನಾಗಿದ್ದೇನೆ, ಎಲ್ಲವನ್ನು ಉತ್ತಮ ಮತ್ತು ಶಿಸ್ತು ಬದ್ಧವಾಗಿ ಎದುರಿಸಿದ್ದೇನೆ. ಈ ಮೂಲಕ ಹೇಳುತ್ತಿದ್ದೇನೆ ಸತ್ಯವು ಯಾವಾಗಲೂ ವಿಜಯಶಾಲಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

Truth Will Always Prevail, Says Robert Vadra In Facebook Post

ಜಾರಿ ನಿರ್ದೇಶನಾಲಯ(ಇ.ಡಿ)ದಿಂದ ಮೂರು ಬಾರಿ ಸಮನ್ಸ್‌ ಪಡೆದಿದ್ದ ಉದ್ಯಮಿ ವಾದ್ರಾ ಅವರು ಸತತ8 ಗಂಟೆಗಳ ಕಾಲ ವಿಚಾರಣೆಗೊಳಪಟ್ಟಿದ್ದರು. ಆದರೆ, ಬಂಧನ ಭೀತಿಯಿಂದ ತಾತ್ಕಾಲಿಕವಾಗಿ ಪಾರಾಗಿದ್ದಾರೆ. ಫೆ.16ರ ತನಕ ಬಂಧಿಸುವಂತಿಲ್ಲ.

ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ? ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ?

ಫೆಬ್ರವರಿ 7ರಂದು ವಾದ್ರಾ ಅವರು ವಿಚಾರಣೆಗೆ ಹಾಜರಾಗಲು ಕಚೇರಿಗೆ ಬಂದಾಗ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಜತೆಗೆ ಬಂದಿದ್ದರು.

ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ಇದೇ ಪ್ರಕರಣದಲ್ಲಿ ವಾದ್ರಾ ಆಪ್ತ ಮನೋಜ್ ಅರೋರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಲಂಡನ್ನಿನಲ್ಲಿ ವಾದ್ರಾ ಹೆಸರಿನಲ್ಲಿ 2 ಮನೆ, 6 ಫ್ಲಾಟ್ ಹಾಗೂ ಇನ್ನಿತರ ಆಸ್ತಿ ಹೊಂದಿದ್ದಾರೆ ಎಂದು ಜಾರಿನಿರ್ದೇಶನಾಲಯ ಮಾಹಿತಿ ಕಲೆ ಹಾಕಿದೆ.

English summary
Robert Vadra, son-in-law of UPA chairperson Sonia Gandhi, who has been grilled by the Enforcement Directorate three times for his involvement in a money laundering case, on Sunday said "truth will always prevail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X