ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"3 ದಿನ, 3 ಮಸೂದೆ? ಇದೇನು ಪಿಜ್ಜಾ ಡೆಲಿವರಿ ಅಂದ್ಕೊಂಡ್ರಾ!"

|
Google Oneindia Kannada News

ನವದೆಹಲಿ, ಜುಲೈ 31: ಕೇಂದ್ರ ಸರ್ಕಾರ ಅವಸರವಸರವಾಗಿ ಕೆಲವು ಮಹತ್ವದ ಮಸೂದೆಗಳನ್ನು ಮಂಡಿಸುತ್ತಿರುವುದನ್ನು ಪ್ರಶ್ನಿಸಿದ ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ ಬ್ರಿಯನ್, 'ಇದೇನು ಪಿಜ್ಜಾ ಡೆಲಿವರಿ ಅಂದ್ಕೊಂಡ್ರಾ' ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾನೂನನ್ನು ಜಾರಿಗೆ ತರುವುದು ಎಂದರೆ ಅಷ್ಟೊಂದು ಸುಲಭವೇ? ಮೂರು ದಿನದಲ್ಲಿ ಮೂರು ಮಹತ್ವದ ಮಸೂದೆಗಳನ್ನು ಅಂಗೀಕರಿಸುವುದು ಎಂದರೆ ಏನು? ಅದೇನು ಪಿಜ್ಜಾ ಡೆಲಿವರಿ ಮಾಡಿದಂತೆಯೇ ಅಂದ್ಕೊಂಡ್ರಾ? ಎಂದು ಬ್ರಿಯನ್ ಖಾರವಾಗಿ ಪ್ರಶ್ನಿಸಿದ್ದಾರೆ.

ವಿರೋಧದ ನಡುವೆಯೂ ಎರಡು ಪ್ರಮುಖ ಮಸೂದೆ ಅಂಗೀಕಾರವಿರೋಧದ ನಡುವೆಯೂ ಎರಡು ಪ್ರಮುಖ ಮಸೂದೆ ಅಂಗೀಕಾರ

ಸಂಸತ್ತಿನಲ್ಲೂ ಈ ಬಗ್ಗೆ ಮಾತನಾಡಿದ್ದ ಬ್ರಿಯನ್, ಟ್ವಿಟ್ಟರ್ ನಲ್ಲೂ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಜೊತೆಗೆ 2004 ರಿಂದ ಇಲ್ಲಿಯವರೆಗಿನ ಐದೈದು ವರ್ಷಗಳ ಸರ್ಕಾರದ ಅವಧಿಯಲ್ಲಿ ಎಷ್ಟು ಮಸೂದೆಗಳನ್ನು ಮಂಡಿಸಲಾಗಿದೆ ಎಂಬ ಬಗ್ಗೆಯೂ, ಅವುಗಳಲ್ಲಿ ಯಾವುದನ್ನು ಕೂಲಂಕಷ ಪರಿಶೀಲನೆಗೆ ಅಂಗೀಕರಿಸದೆ ಬಿಡಲಾಗಿತ್ತು ಎಂಬ ಮಾಹಿತಿಯುಳ್ಳ ಚಾರ್ಟ್ ಅನ್ನು ಅವರು ಟ್ವಿಟ್ಟರ್ ನಲ್ಲಿ ಲಗತ್ತಿಸಿದ್ದಾರೆ.

TMCs Derek OBrien asks, 3 bills in 3 days, is it a pizza delivery?

ಕಳೆದ ಕೆಲವೇ ದಿನಗಳ ಅವಧಿಯಲ್ಲಿ ಸಂಸತ್ತಿನಲ್ಲಿ ತ್ರಿವಳಿ ತಲಾಕ್(ಮುಸ್ಲಿಂ ಮಹಿಳೆಯರ ಕಾಯ್ದೆ), ಆರ್ ಟಿಐ ಕಾಯ್ದೆ ಮತ್ತು ಮೆಡಿಕಲ್ ಕಮಿಶನ್ ಬಿಲ್ ಅನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತ್ತು.

ಉಗ್ರರನ್ನು ಹಣಿಯಲು ಎನ್‌ಐಎಗೆ ಬಲ: ಮಸೂದೆ ಅಂಗೀಕಾರ, ಲೋಕಸಭೆಯಲ್ಲಿ ಜಟಾಪಟಿ ಉಗ್ರರನ್ನು ಹಣಿಯಲು ಎನ್‌ಐಎಗೆ ಬಲ: ಮಸೂದೆ ಅಂಗೀಕಾರ, ಲೋಕಸಭೆಯಲ್ಲಿ ಜಟಾಪಟಿ

ಕೆಲವು ಮಹತ್ವದ ಮಸೂದೆಗಳನ್ನು ಮಂಡಿಸುವ ಸಲುವಾಗಿಯೇ ಜುಲೈ 26 ಕ್ಕೆ ಮುಗಿಯಬೇಕಿದ್ದ ಮುಂಗಾರು ಅಧಿವೇಶನವನ್ನು ಆಗಸ್ಟ್ 7 ರವರೆಗೆ ಅಂದರೆ ಹತ್ತು ದಿನಗಳ ಕಾಲ ಕೇಂದ್ರ ಸರ್ಕಾರ ಮುಂದೂಡಿತ್ತು.

English summary
TRinmool Congress leader Derek o'Brien slammed central government fpr hurried passage of bills,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X