ಭಾರತದಲ್ಲಿ ಟಿಕ್‌ಟಾಕ್‌ಗೆ 'ಅಂತ್ಯ'ಕಾಲ: ಚೀನಾಗೆ ಸೆಡ್ಡು ಹೊಡೆದ ಸ್ವದೇಶಿ ಮಿತ್ರೋ?

ದೆಹಲಿ, ಮೇ 27: ಇಡೀ ಜಗತ್ತಿಗೆ ಕೊರೊನಾ ವೈರಸ್‌ ಅಂಟಿಸಿರುವ ಚೀನಾ ವಿರುದ್ಧ ಅಮೆರಿಕ ಸೇರಿದಂತೆ ಹಲವು ದೇಶಗಳು ಮುನಿಸಿಕೊಂಡಿದೆ. ಚೀನಾ ದೇಶವೇ ಉದ್ದೇಶಪೂರ್ವಕವಾಗಿ ವೈರಸ್ ಸೃಷ್ಟಿಸಿದೆ ಎಂದು ಕೆಂಡಕಾರುತ್ತಿದೆ. ಈ ಕಾರಣದಿಂದಲೇ ಚೀನಾ ಜೊತೆಗಿನ ಎಲ್ಲ ಸಂಬಂಧವನ್ನು ಮುರಿದುಕೊಳ್ಳಲು ಅಮೆರಿಕ ಮುಂದಾಗಿದೆ.

Recommended Video

      3C ಪಾಲಿಸಿ ಮೂಲಕ ಕೊರೊನಾ ವಿರುದ್ಧ ಜಯಸಾಧಿಸಿದ ಜಪಾನ್..! | Japan against Corona

      ಕೊರೊನಾ ಸಂಕಷ್ಟ ಎದುರಿಸುತ್ತಿರುವ ಯುಎಸ್, ಚೀನಾ ಮೂಲದ ಟಿಕ್‌ಟಾಕ್‌ಗೆ ನಿಷೇಧ ಹೇರಿದೆ ಎನ್ನಲಾಗಿದೆ. ಭಾರತದಲ್ಲೂ ಚೀನಾ ವಸ್ತುಗಳ ನಿರ್ಬಂಧಕ್ಕೆ ಒತ್ತಡ ಹೆಚ್ಚಿದೆ. ವಿಶೇಷವಾಗಿ ಟಿಕ್‌ಟಾಕ್‌ ಬಳಸಬೇಡಿ ಎಂಬ ಕೂಗು ಜೋರಾಗಿದೆ.

      ಭಾರತದಲ್ಲೂ ಸಾವಿರಾರು ಜನರು ತಮ್ಮ ಮೊಬೈಲ್‌ಗಳಿಂದ ಟಿಕ್‌ಟಾಕ್‌ ಆಪ್‌ನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಟಿಕ್‌ಟಾಕ್‌ ದೂರವಾಗುತ್ತಿದ್ದಂತೆ ಭಾರತದ ಮಿತ್ರೋ ಆಪ್ ಹೆಚ್ಚು ಬಳಕೆಯಾಗುತ್ತಿದೆ ಎಂಬ ಅಂಶ ಹೊರಬಿದ್ದಿದೆ. ಇದನ್ನು ಗಮಿಸಿದ ಮೇಲೆ ಭಾರತದಲ್ಲಿ ಟಿಕ್‌ಟಾಕ್‌ 'ಅಂತ್ಯ'ದ ಕಡೆ ಸಾಗಿದೆ ಎಂಬ ಪ್ರಶ್ನೆ ಮೂಡುತ್ತಿದೆ. ಮುಂದೆ ಓದಿ....

      ಟಿಕ್‌ಟಾಕ್‌ಗೆ ಮಿತ್ರೋ ಸೆಡ್ಡು?

      ಟಿಕ್‌ಟಾಕ್‌ಗೆ ಮಿತ್ರೋ ಸೆಡ್ಡು?

      ಟಿಕ್‌ಟಾಕ್‌ ಮಾದರಿಯಲ್ಲಿ ಭಾರತದವರೇ ಸೃಷ್ಟಿಸಿದ ಆಪ್ ಮಿತ್ರೋ. ಆದರೆ, ಚೀನಾದ ಟಿಕ್‌ಟಾಕ್‌ ಮುಂದೆ ಮಿತ್ರೋ ಸದ್ದು ಮಾಡಿಲ್ಲ. ಆದ್ರೀಗ, ಚೀನಾ ಮೇಲೆ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಮುನಿಸಿಕೊಂಡಿದೆ. ಈ ಕಾರಣದಿಂದ ಚೀನಾದ ಟಿಕ್‌ಟಾಕ್‌ಗೆ ಗುಡ್‌ಬೈ ಹೇಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಟಿಕ್‌ಟಾಕ್‌ ಬದಲು ಮಿತ್ರೋ ಆಪ್ ಬಳಕೆ ಜನರು ಆಸಕ್ತಿ ತೋರುತ್ತಿದ್ದಾರೆ.

      5 ಮಿಲಿಯನ್ ಡೌನ್‌ಲೌಡ್

      5 ಮಿಲಿಯನ್ ಡೌನ್‌ಲೌಡ್

      ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟಿಕ್‌ಟಾಕ್‌ ಆಪ್‌ಗೆ ರೇಟಿಂಗ್ ಕಡಿಮೆಯಾಗಿದೆ. ಇದೇ ಮೊದಲ ಸಲ ಟಿಕ್‌ಟಾಕ್‌ಗೆ ಕೇವಲ 1.4 ರೇಟಿಂಗ್ ಸಿಕ್ಕಿದೆ. ಮತ್ತೊಂದೆಡೆ ಮಿತ್ರೋ ಆಪ್ ಡೌನ್‌ಲೌಡ್ ಹೆಚ್ಚಾಗುತ್ತಿದೆ. ಈವರೆಗೂ 5 ಮಿಲಿಯನ್ (50 ಲಕ್ಷ) ಜನರು ಆಪ್ ಬಳಸುತ್ತಿದ್ದಾರೆ. ಜೊತೆಗೆ ರೇಟಿಂಗ್ ಕೂಡ ಟಿಕ್‌ಟಾಕ್‌ಗಿಂತ ಹೆಚ್ಚಿದೆ. ಮಿತ್ರೋ‌ ರೇಟಿಂಗ್ 4.7 ಬಂದಿದೆ.

      ಮೋದಿ ಭಾಷಣದಿಂದ ಮಿತ್ರೋ ಬೇಡಿಕೆ ಹೆಚ್ಚಾಯಿತೇ?

      ಮೋದಿ ಭಾಷಣದಿಂದ ಮಿತ್ರೋ ಬೇಡಿಕೆ ಹೆಚ್ಚಾಯಿತೇ?

      ಇತ್ತೀಚಿಗಷ್ಟೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಸ್ವದೇಶಿ ವಸ್ತುಗಳಿಗೆ ಆಧ್ಯತೆ ನೀಡಿ ಎಂದು ಕರೆ ನೀಡಿದ್ದರು. ಇದಾದ ಬಳಿಕ ದೇಶದ ನಾಗರಿಕರು ಹಲವು ವಿಚಾರದಲ್ಲಿ ಸ್ವದೇಶಿ ಮಂತ್ರ ಜಪಿಸಿದ್ದಾರೆ. ಬಹುಶಃ ಮೋದಿ ಅವರ ಭಾಷಣದ ಬಳಿಕ ಭಾರತದ ಮಿತ್ರೋ ಬೇಡಿಕೆ ಹೆಚ್ಚಾಯಿತೆ ಎಂಬ ಕುತೂಹಲವೂ ಕಾಡುತ್ತಿದೆ.

      ಟಿಕ್‌ಟಾಕ್‌ ಹೋದ್ರೆ ಮಿತ್ರೋ‌!

      ಟಿಕ್‌ಟಾಕ್‌ ಹೋದ್ರೆ ಮಿತ್ರೋ‌!

      ಮನರಂಜನೆ ಹಾಗೂ ಟೈಂ ಪಾಸ್‌ಗೆ ಟಿಕ್‌ಟಾಕ್‌ ಬಳಸುತ್ತಿರುವವರಿಗೆ ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್ ಆಗುತ್ತಾ ಎಂಬ ಆತಂಕ ಕಾಡುತ್ತಿದೆ. ಒಂದು ವೇಳೆ ನಿಷೇಧವಾದರೆ ಮುಂದೆನೂ ಎಂದು ಯೋಚನೆ ಮಾಡುವಷ್ಟರಲ್ಲಿ ಮಿತ್ರೋ ಆಪ್ ಗಮನ ಸೆಳೆಯುತ್ತಿದೆ. ಬಹುಶಃ ಭಾರತದಲ್ಲಿ ಟಿಕ್‌ಟಾಕ್‌ಗೆ ಪರ್ಯಾಯವಾಗಿ ಮಿತ್ರೋ ನಿಲ್ಲಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+