ದೆಲಿಯ ಅರ್ಪಿತ್ ಪ್ಯಾಲೇಸ್‌ನಲ್ಲಿ ಬೆಂಕಿ ಅವಘಡ: 15 ಮಂದಿ ಸಜೀವ ದಹನ
ನವದೆಹಲಿ, ಫೆಬ್ರವರಿ 12: ದೆಹಲಿಯ ಕರೋಲ್ ಬಾಘ್‌ನಲ್ಲಿರುವ ಅರ್ಪಿತ್ ಪ್ಯಾಲೇಸ್ ಹೋಟೆಲ್‌ನಲ್ಲಿ ಅಗನಿ ಅವಘಡ ಸಂಭವಿಸಿದ್ದು ಕನಿಷ್ಠ 15 ಮಂದಿ ಸಜೀವ ದಹನವಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಕರೋಲ್ ಬಾಘ್‌ನ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹೋಟೆಲ್‌ನಲ್ಲಿ ಕೇರಳದ ಒಂದೇ ಕುಟುಂಬದ ಹತ್ತು ಮಂದಿ ನೆಲೆಸಿದ್ದರು.ಇಲ್ಲಿಯವರೆಗೆ ಸುಮಾರು ಐದು ಮಂದಿಯನ್ನು ರಕ್ಷಿಸಲಾಗಿದ್ದು ಓರ್ವ ತೀವ್ರವಾಗಿ ಗಾಯಗೊಂಡಿದ್ದಾರೆ.
ಬೆಳಗಿನ ಜಾವ ಸುಮಾರು 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. ಹೋಟೆಲ್‌ನ ಸುಮಾರು 40 ಕೋಣೆಗಳಿಗೆ ಬೆಂಕಿ ಹಾಗೂ ಹೊಗೆ ಆವರಿಸಿಕೊಂಡಿದೆ.

ಈಗ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲು ಸಾಧ್ಯವಾಗಿದೆಯೋ ಇಲ್ಲವೋ ಎಂಬುದರ ಕುರಿತು ಮಾಹಿತಿ ಇನ್ನೇನು ಬರಬೇಕಿದೆ.












Click it and Unblock the Notifications