ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಂಕಿಫಾಕ್ಸ್ ವರದಿ ನೆಗೆಟಿವ್: ದೆಹಲಿ ರೋಗಿ ಡಿಸ್ಚಾರ್ಜ್

|
Google Oneindia Kannada News

ನವದೆಹಲಿ, ಜುಲೈ 28: ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಂಕಿತ ಮಂಕಿಪಾಕ್ಸ್ ಕಾಯಿಲೆಯ ರೋಗಿಯನ್ನು ಗುರುವಾರ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

30 ವರ್ಷದ ಗಾಜಿಯಾಬಾದ್ ವ್ಯಕ್ತಿಗೆ ಮಂಕಿಪಾಕ್ಸ್ ಬದಲು ಚಿಕನ್ಪಾಕ್ಸ್ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಂಕಿಪಾಕ್ಸ್‌ ಚಿಕಿತ್ಸೆಗಾಗಿ ಗೊತ್ತುಪಡಿಸಿರುವ ಕೇಂದ್ರವಾಗಿರುವ ದೆಹಲಿ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಈ ವ್ಯಕ್ತಿಯನ್ನು ದಾಖಲಿಸಲಾಯಿತು. ದಾಖಲಾಗಿದ್ದ ವ್ಯಕ್ತಿಯು ಜ್ವರ ಮತ್ತು ಚರ್ಮದ ಗಾಯಗಳಿಂದ ಬಳಲುತ್ತಿದ್ದರು.

Suspected Monkeypox Patient Tests Negative, Discharged From LNJP Hospital

"ಮಂಕಿಪಾಕ್ಸ್‌ನ ಶಂಕಿತ ಪ್ರಕರಣ ಎರಡು ದಿನಗಳ ಹಿಂದೆ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಾಯಿತು. ಗುರುವಾರ ಅವರ ವರದಿಗಳು ನೆಗೆಟಿವ್ ಬಂದ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ" ಎಂದು ಎಲ್‌ಎನ್‌ಜೆಪಿ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ತಿಳಿಸಿದರು.

ಇನ್ನು ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಕಿಪಾಕ್ಸ್‌ನ ಮೊದಲ ಪ್ರಕರಣದ ಸೋಂಕಿತರಿಂದ ಮಾದರಿಗಳನ್ನು ತೆಗೆದುಕೊಂಡು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಕೇರಳದ ಮೂವರು ಸೇರಿದಂತೆ ದೇಶದಲ್ಲಿ ಇದುವರೆಗೆ ನಾಲ್ಕು ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಪರೋಕ್ಷ ಅಥವಾ ನೇರ ಸಂಪರ್ಕದ ಮೂಲಕ ಹರಡುತ್ತದೆ. ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಚರ್ಮದ ದದ್ದುಗಳು (ಇವುಗಳು ಮುಖದಿಂದ ಪ್ರಾರಂಭವಾಗುತ್ತದೆ ಮತ್ತು ತೋಳುಗಳು, ಕಾಲುಗಳು, ಅಂಗೈಗಳು ಮತ್ತು ಅಡಿಭಾಗಗಳಿಗೆ ಹರಡುತ್ತದೆ), ದುಗ್ಧರಸ ಗ್ರಂಥಿಯ ಹಿಗ್ಗುವಿಕೆ, ತಲೆನೋವು, ಸ್ನಾಯು ನೋವು, ಅಥವಾ ಬಳಲಿಕೆ, ಕೆಮ್ಮು ಮತ್ತು ಗಂಟಲು ನೋವು.

ವಿಶ್ವ ಆರೋಗ್ಯ ಸಂಸ್ಥೆ (WHO) ಈಗಾಗಲೇ ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಜಾಗತಿಕವಾಗಿ 75 ದೇಶಗಳು ಮತ್ತು ಪ್ರಾಂತ್ಯಗಳಿಂದ 18,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.

English summary
Suspected Monkeypox Patient Tests Negative, Discharged From Delhi's LNJP Hospital Thursday. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X