ಸುಷ್ಮಾ ಸ್ವರಾಜ್‌ಗೆ ಸಚಿವ ಸಂಪುಟದಲ್ಲಿ ಸ್ಥಾನವಿಲ್ಲ?

Recommended Video

      ನರೇಂದ್ರ ಮೋದಿ ಸಂಪುಟದಲ್ಲಿ ಸುಷ್ಮಾ ಸ್ವರಾಜ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ಇಲ್ಲ | Oneindia Kannada

      ನವದೆಹಲಿ, ಮೇ 30: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ 17ನೇ ಲೋಕಸಭೆಯ ಸಚಿವ ಸಂಪುಟದಲ್ಲಿ ಸ್ಥಾನವಿಲ್ಲ ಎನ್ನಲಾಗುತ್ತಿದೆ.

      ಸುಷ್ಮಾ ಸ್ವರಾಜ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ತಮ್ಮ ನಿರ್ಧಾರವನ್ನು ಲೋಕಸಭೆ ಚುನಾವಣೆ ಮುನ್ನವೇ ಪ್ರಕಟಿಸಿದ್ದರು, ಅಂತೆಯೇ ಅವರು ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸಿರಲಿಲ್ಲ. ಆದರೆ ಈ ಬಾರಿ ಸಂಪುಟದಿಂದಲೂ ದೂರ ಉಳಿಯುವ ಸಾಧ್ಯತೆ ಇದೆ.

      ಸುಷ್ಮಾ ಸ್ವರಾಜ್ ಅವರು ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೆ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಸಂಸದರಿಗೆ ಮೀಸಲಾಗಿರುವ ಸ್ಥಾನದಲ್ಲಿ ಕೂರದೇ ಅತಿಥಿಗಳ ಸ್ಥಾನದಲ್ಲಿ ಕೂತಿದ್ದಾರೆ.

      Sushma Swaraj may not get minister post in Modis cabinet

      ಸುಷ್ಮಾ ಸ್ವರಾಜ್ ಅವರ ಈ ನಡೆ ಅವರ ಸಂಪುಟ ಸೇರ್ಪಡೆ ಬಗ್ಗೆ ಬಹುತೇಕ ಸ್ಪಷ್ಟನೆ ನೀಡಿದ್ದು, ಅವರು ಈ ಬಾರಿ ಮೋದಿ ಸಂಪುಟದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಸ್ಪಷ್ಟವಾಗಿದೆ.

      ಸುಷ್ಮಾ ಸ್ವರಾಜ್ ಅವರು ಕಳೆದ ಅವಧಿಯಲ್ಲಿ ವಿದೇಶಾಂಗ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮೋದಿ ಅವರ ಸಂಪುಟದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸಚಿವರಲ್ಲಿ ಸುಷ್ಮಾ ಸ್ವರಾಜ್ ಅವರು ಪ್ರಮುಖರಾಗಿದ್ದರು.

      ಸುಷ್ಮಾ ಸ್ವರಾಜ್ ಅವರ ಸ್ಥಾನವನ್ನು ತುಂಬುವ ಸಚಿವೆ ಯಾರು ಎಂಬ ಕುತೂಹಲ ಸಹ ಕೆರಳಿದ್ದು, ಸ್ಮೃತಿ ಇರಾನಿ ಅವರು ಸುಷ್ಮಾ ಅವರ ಸ್ಥಾನ ತುಂಬಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+