ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಷಾ ವಿರುದ್ಧದ ನೀತಿ ಸಂಹಿತೆ ಪ್ರಕರಣದಲ್ಲಿ ಇಂದು ಸುಪ್ರೀಂ ತೀರ್ಪು

|
Google Oneindia Kannada News

ನವದೆಹಲಿ, ಮೇ 6: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ಮೋದಿ ಹಾಗೂ ಷಾ ವಿರುದ್ಧ 40 ಕ್ಕೂ ಅಧಿಕ ದೂರುಗಳನ್ನು ಆಯೋಗಕ್ಕೆ ನೀಡಿದ್ದರೂ ಕ್ರಮ ಜರುಗಿಸಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಸುಷ್ಮಿತಾ ದೇವ್‌ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಲಿದೆ.

Supreme court will decide Modi shah fate relating to MCC

ಕಳೆದ ವಾರ ಅರ್ಜಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ನ್ಯಾಯಪೀಠವು ಆಯೋಗಕ್ಕೆ ನಿರ್ದೇಶನ ನೀಡಿ, ಮೇ 6 ರೊಳಗೆ ಎಲ್ಲ ದೂರುಗಳನ್ನು ಇತ್ಯರ್ಥಪಡಿಸುವಂತೆ ಆದೇಶಿಸಿತ್ತು. ನ್ಯಾಯಾಲಯ ನೀಡಿರುವ ಗುಡುವು ಸೋಮವಾರ ಅಂತ್ಯವಾಗುತ್ತಿದೆ.

ಮೂಲಗಳ ಪ್ರಕಾರ ಮೋದಿ ಹಾಗೂ ಷಾ ವಿರುದ್ಧದ ಎಲ್ಲ ದೂರುಗಳಲ್ಲಿಯೂ ಉಭಯ ನಾಯಕರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಆದರೆ ಆಯೋಗದ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌ ನಾಯಕಿ ಪ್ರಕರಣವನ್ನು ಮುಂದುವರಿಸುವ ಸಾಧ್ಯತೆಯಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ ಅಭಿಪ್ರಾಯ, ಆಯೋಗದ ವಿವರಣೆ ಹಾಗೂ ಕಾಂಗ್ರೆಸ್‌ ನಿಲುವಿನ ಬಗ್ಗೆ ಕುತೂಹಲ ಮೂಡಿದೆ.

ಏತನ್ಮಧ್ಯೆ ರಾಹುಲ್‌ ಗಾಂಧಿ ವಿರುದ್ಧದ ಕೆಲ ಪ್ರಕರಣಗಳಲ್ಲಿಯೂ ಆಯೋಗ ಕ್ಲೀನ್ ಚಿಟ್ ನೀಡಿದ್ದನ್ನು ಸ್ಮರಿಸಬಹುದು.

ಆದಾಗ್ಯೂ ಆಯೋಗ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ ಹಾಗೂ ಮಾಡೆಲ್‌ ಕೋಡ್‌ ಆಫ್‌ ಕಂಡಕ್ಟ್ ಎನ್ನುವುದು ಮೋದಿ ಕೋಡ್‌ ಆಫ್‌ ಕಂಡಕ್ಟ್ ಆಗಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ.. ಇಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಮತ್ತಿತರರು ಸೋನಿಯಾಗೆ ಎದುರಾಳಿಗಳಾಗಿದ್ದಾರೆ.

English summary
Supreme court will here the congress petition related to Prime minister Narendra Modi and BJP national president Amit Shah's alleged violation of Model code of conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X