• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುನಂದಾ ಹತ್ಯೆ ಸಾಕ್ಷಿ ನಾಶ : ನಾಲ್ವರ ಮೇಲಿದೆ ಶಂಕೆ

By ವಿಕ್ಕಿ ನಂಜಪ್ಪ
|

ಸುನಂದಾ ಪುಷ್ಕರ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶದ ಆರೋಪದ ಮೇಲೆ ವಿಶೇಷ ತನಿಖಾ ದಳ ನಾಲ್ವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಸುನಂದಾ ಸಾವಿಗೆ ಕಾರಣವಾಗಿದ್ದು ಅಲ್ಪ್ರಾಕ್ಸ್ ಟ್ಯಾಬ್ಲೆಟ್. ಇದನ್ನು ಇಲ್ಲಿಟ್ಟಿದ್ದು ಯಾರು ಎಂಬ ಪ್ರಶ್ನೆಯೂ ಉದ್ಭವಿಸಿದೆ.

ನಾರಾಯಣ ಸಿಂಗ್, ತರೂರ್ ಅವರ ಖಾಸಗಿ ಸಹಾಯಕ ಆರ್.ಕೆ. ಶರ್ಮಾ, ಕುಟುಂಬ ಸ್ನೇಹಿತ ಸಂಜಯ ದೇವನ್ ಹಾಗೂ ತರೂರ್ ಅವರ ಚಾಲಕ ಭಜರಂಗಿ ಮೇಲೆ ಸಾಕ್ಷ್ಯ ನಾಶಗೊಳಿಸಿದ ಶಂಕೆ ವ್ಯಕ್ತವಾಗಿದೆ. [ಬಟ್ಟೆ, ಶೂ ಹೊರಸಾಗಿಸಿದ್ದು ಯಾರು?]

ಯೋಜಿತ ಕೊಲೆ : ಸುನಂದಾ ಸಾವಿನ ನಂತರ ಕೋಣೆಗೆ ಬಂದಿದ್ದ ಒಬ್ಬ ಅವರ ಬಟ್ಟೆ ಹಾಗೂ ಶೂ ಸ್ಥಳಾಂತರಿಸಿದ್ದಾರೆ. ಈ ಸಮಯದಲ್ಲಿ ಒಂದು ಗ್ಲಾಸ್ ಕೂಡ ಒಡೆದಿದೆ. ಆದ್ದರಿಂದ ಇದೊಂದು ಯೋಜಿತ ಕೊಲೆ ಎಂಬ ಪೊಲೀಸರು ಶಂಕಿಸಿದ್ದಾರೆ.

ಬಟ್ಟೆ ಹಾಗೂ ಶೂ ಸುನಂದಾ ಸಾವಿಗಿಂತ ಮೊದಲು ಕೋಣೆಯೊಳಗೆ ಇತ್ತು ಎಂದು ಹೋಟೆಲ್‌ನ ಕೆಲವು ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಪೊಲೀಸರ ಶಂಕೆಗೆ ಬಲ ತಂದಿದೆ. [ಶಶಿ ತರೂರ್ ಗೆ ಕೇಳಿದ 6 ಪ್ರಮುಖ ಪ್ರಶ್ನೆಗಳು]

ಸುನಂದಾ ಅವರನ್ನು ಜೀವಂತವಾಗಿ ಕೊನೆಯ ಬಾರಿಗೆ ನೋಡಿದ ವ್ಯಕ್ತಿ ನಾರಾಯಣ ಸಿಂಗ್. ರಾತ್ರಿ 7.30 ಗಂಟೆ ಸಮಯದಲ್ಲಿ ಸುನಂದಾ ಅವರನ್ನು ಸಿಂಗ್ ಭೇಟಿಯಾಗಿದ್ದ. ಆತ ಹೋದ ಮೇಲೆ ಸುನಂದಾ ಅವರು 7.58 ಗಂಟೆಗೆ ದೂರವಾಣಿ ಕರೆ ಮಾಡಿದ್ದಾರೆ. ಇದು ಸುನಂದಾ ಮಾಡಿದ್ದ ಕೊನೆಯ ಕರೆ.

ನವದೆಹಲಿ ಪೊಲೀಸರು ಐಪಿಎಲ್ ವಿವಾದ ಕುರಿತು ಹೆಚ್ಚು ಗಮನ ಹರಿಸಿದ್ದಾರೆ. ಆದ್ದರಿಂದ ಸುನಂದಾ ಹಾಗೂ ಶಶಿ ತರೂರ್ ಅವರ ಬ್ಯಾಂಕ್ ಖಾತೆ ಮೇಲೆ ಪೊಲೀಸರ ಗಮನ ಹರಿದಿದೆ. ಅದರಲ್ಲಿ ಹಲವರ ಹೆಸರು ಕಂಡುಬಂದಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಲವು ದುಬೈ ಮೂಲದ ವ್ಯಕ್ತಿಗಳ ಕುರಿತೂ ಶಂಕೆ ವ್ಯಕ್ತವಾಗಿದೆ. [ತರಾರ್ ಜೊತೆ 3 ರಾತ್ರಿ ಕಳೆದರೇ ತರೂರ್]

2 ಪತ್ರಕರ್ತೆಯರ ವಿಚಾರಣೆ : ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಪತ್ರಕರ್ತೆಯರು ಹಾಗೂ ಸುನಂದಾ ಜೊತೆ ಸಂಪರ್ಕದಲ್ಲಿದ್ದ ಇನ್ನೂ ಎಂಟು ಜನರ ಹೇಳಿಕೆ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.

ಶಶಿ ತರೂರ್ ಪ್ರಸ್ತುತ ಜೈಪುರ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡಿದ್ದು, ನಂತರ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮೊದಲ ಸುತ್ತಿನ ತನಿಖೆಯಲ್ಲಿ ತರೂರ್ ನೀಡಿರುವ ಉತ್ತರ ತೃಪ್ತಿದಾಯಕವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. [ಸುನಂದಾ ಸಾವು ಹುಟ್ಟುಹಾಕಿದ 5 ಪ್ರಶ್ನೆಗಳು]

"ನಿನ್ನ ಕತೆ ಮುಗಿಯಿತು" ಎಂದು ಸುನಂದಾ ಹೇಳಿದ ಮಾತಿನ ಕುರಿತು ನನಗೇನೂ ತಿಳಿದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಇದು ಪೊಲೀಸರ ಅತೃಪ್ತಿಗೆ ಕಾರಣ.

ಭೇಟಿ ಮಾಡಿದ್ದು ಯಾರನ್ನು? : ಸುನಂದಾ ಅವರು ನವದೆಹಲಿಯ ಸರ್ಕಾರಿ ಬಂಗಲೆಯಲ್ಲಿ ಭೇಟಿ ಮಾಡಿದ್ದ ವ್ಯಕ್ತಿಗಳು ಈ ಕುರಿತು ಹೆಚ್ಚು ವಿಷಯ ಅರಿತಿದ್ದಾರೆ. ಆದರೆ, ಬಾಯಿಬಿಡುತ್ತಿಲ್ಲ.

ಸುನಂದಾ ಸಾಯುವ ಒಂದು ದಿನ ಮೊದಲು ಹೋಟೆಲ್‌ನಿಂದ ಹೊರಗೆ ಬಂದು ಕೆಲವರನ್ನು ಭೇಟಿ ಮಾಡಿದ್ದರು. ಈ ಕುರಿತು ಸಿಸಿಟಿವಿ ಸಾಕ್ಷಿಯೂ ಇದೆ. ಈ ಸಂದರ್ಭದಲ್ಲಿ ಅವರು ಒಬ್ಬರೇ ಇರಲಿಲ್ಲ ಹಾಗೂ ದುಃಖದಲ್ಲಿದ್ದರು. ಅವರು ಏನನ್ನೋ ಹೇಳಲು ಬಯಸಿದ್ದರು. ಈ ಭೇಟಿಯು ಸಾವಿನ ಕಾರಣವಾಗಿರಬಹುದು ಎಂದು ವಿಶೇಷ ತನಿಖಾ ದಳ ಅಭಿಪ್ರಾಯಟ್ಟಿದೆ.

English summary
Four people are on the radar of the Special Investigating Team who could have possibly removed the evidence from the room in which Sunanda Pushkar was found dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X