"ಭಗತ್ ಸಿಂಗ್, ರಾಜಗುರು, ಸುಖದೇವ್ ಗೆ ಇನ್ನೂ ಯಾಕಿಲ್ಲ ಹುತಾತ್ಮಪಟ್ಟ?"
ನವದೆಹಲಿ, ಮಾರ್ಚ್ 23: ಬ್ರಿಟಿಷರ ವಿರುದ್ಧ ಕೆಚ್ಚೆದಿಂದ ಹೋರಾಡಿ ನೇಣುಗಂಬವೇರಿದ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜಗುರು ಅವರಿಗೆ ಅಧಿಕೃತವಾಗಿ 'ಹುತಾತ್ಮ' ಪಟ್ಟ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಖ್ ದೇವ್ ಕುಟುಂಬಸ್ಥರು ಬೇಡಿಕೆ ಇಟ್ಟಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ತಮ್ಮ ಬೇಡಿಕೆಗೆ ಸರ್ಕಾರ ಕಿವಿಗೊಡದೆ ಇದ್ದಲ್ಲಿ ಇಂದಿನಿಂದಲೇ(ಮಾ.23) ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 1931 ಮಾರ್ಚ್ 23 ರಂದು ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜಗುರು ಅವರನ್ನು ಬ್ರಿಟಿಷ್ ಸರ್ಕಾರ ನೇಣಿಗೇರಿಸಿತ್ತು. 1928 ರಲ್ಲಿ ದೆಹಲಿಯ ಸೆಂಟ್ರಲ್ ಅಸೆಂಬ್ಲಿಗೆ ಬಾಂಬ್ ಎಸೆದ ಆರೋಪ ಮತ್ತು ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದ ಕಾರಣಕ್ಕೆ ಅವರನ್ನು ಸೆರೆಯಲ್ಲಿರಿಸಲಾಗಿತ್ತು.
ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಈ ಮೂವರನ್ನೂ ಅನೌಪಚಾರಿಕವಾಗಿ 'ಹುತಾತ್ಮ'ರು ಎಂದು ಕರೆಯಲಾಗುತ್ತದೆಯೇ ಹೊರತು, ಅಧಿಕೃತವಾಗಿ ಅವರಿಗೆ 'ಹುತಾತ್ಮ'ಪಟ್ಟ ಸಿಕ್ಕಿಲ್ಲ. ಆದ್ದರಿಂದಲೇ ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡುವಂತೆ ಬೇಡಿಕೆ ಇಟ್ಟಿದೆ.

ಪ್ರಧಾನಿಯಿಂದ ಹುತಾತ್ಮರ ಸ್ಮರಣೆ
"ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ನಮ್ಮ ಇತಿಹಾಸದಲ್ಲೇ ಕಣ್ಣೀರು ಭರಿಸುವಂಥ ದಿನ. ಈ ಮೂರು ಮಹಾನ್ ವ್ಯಕ್ತಿಗಳು ನಮ್ಮ ನೆಲದವರು ಎನ್ನಲು ಹೆಮ್ಮೆಯಾಗುತ್ತದೆ. ಅವರ ಯೌವ್ವನಾವಸ್ಥೆಯಲ್ಲೇ ತಮ್ಮ ಬದುಕನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟು, ಅವರ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸಿಕೊಂಡರು" ಎಂದು ಈ ಮಹಾನ್ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸ್ಮರಿಸಿದ್ದಾರೆ.












Click it and Unblock the Notifications