ಇನ್ನು ಗೃಹಬಳಕೆ ಅಡುಗೆ ಅನಿಲ 5 ಕೆಜಿಯಲ್ಲೂ ಲಭ್ಯ

ನವದೆಹಲಿ, ಡಿ. 10: ಸ್ವಯಂಪ್ರೇರಿತರಾಗಿ ಸಹಾಯಧನ ರಹಿತ ಅಡುಗೆ ಅನಿಲ ಸಿಲಿಂಡರ್ ಪಡೆಯಬೇಕೆಂದು ದೇಶದ ಶ್ರೀಮಂತರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೋರಿತ್ತು. ಈಗ ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಹಾಯಧನ ಸಹಿತ 5 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಹೊರತರಲು ನಿರ್ಧರಿಸಿದೆ.

ಈ ಕುರಿತು ಕೇಂದ್ರದ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಉದ್ದೇಶಿತ 5 ಕೆ.ಜಿ. ತೂಕದ ಸಿಲಿಂಡರ್ ಜನರಿಗೆ 155 ರೂ.ಗಳಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. [ಕೊಳವೆ ಮೂಲಕ ಬರಲಿದೆ ಅಡುಗೆ ಅನಿಲ]

cylinder

ವರ್ಷಕ್ಕೆ 34 ಸಿಲಿಂಡರ್‌ಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದ್ದು, ಹೆಚ್ಚಿನ ಸಿಲಿಂಡರ್ ಬೇಕಾದರೆ ಮಾರುಕಟ್ಟೆ ದರ 351 ರೂ. ನೀಡಬೇಕಾಗುತ್ತದೆ. ಪ್ರಸ್ತುತ ಗೃಹಬಳಕೆ ಸಿಲಿಂಡರ್ ಪೂರೈಸುತ್ತಿರುವ ವಿತರಕರಲ್ಲಿಯೇ 5 ಕೆ.ಜಿ. ಸಿಲಿಂಡರ್ ಕೂಡ ಸಿಗಲಿದೆ ಎಂದು ವಿವರಿಸಿದರು. [ಹೊಸದಾಗಿ ಎಲ್ ಪಿಜಿ ಸಂಪರ್ಕ ಪಡೆಯುವುದು ಹೇಗೆ]

ಇನ್ನು ಮುಂದೆ ಗ್ರಾಹಕರಿಗೆ ಬುಕ್ ಮಾಡುವಾಗ 14.2 ಕೆಜಿ ಅಥವಾ 5 ಕೆಜಿ ಸಿಲಿಂಡರ್ ಆಯ್ದುಕೊಳ್ಳುವ ಅವಕಾಶ ಸಿಗಲಿದೆ. ವರ್ಷಕ್ಕೆ ಸಿಲಿಂಡರ್ ಮಿತಿಯು 14.2 ಕೆಜಿ 12 ಹಾಗೂ 5 ಕೆಜಿಗೆ 34 ನಿಗದಿಪಡಿಸಲಾಗಿದೆ ಎಂದರು. [ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ]

ಈಗಾಗಲೇ ಮಾರುಕಟ್ಟೆಯಲ್ಲಿ: ಜೊತೆಗೆ 5 ಕೆಜಿ ಸಿಲಿಂಡರ್ ಆಯ್ದ ಪೆಟ್ರೋಲ್ ಪಂಪ್‌ಗಳಲ್ಲಿ ಮಾರುಕಟ್ಟೆ ದರ 351 ರೂ.ಗಳಲ್ಲಿ ಲಭ್ಯವಾಗುತ್ತಿದೆ. ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಈಗಾಗಲೇ 5 ಕೆಜಿ ಸಿಲಿಂಡರ್‌ಗಳನ್ನು ವರ್ಷಕ್ಕೆ 34ರಂತೆ ನೀಡುತ್ತಿವೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+