ದೇಶ ರಕ್ಷಣೆಗಾಗಿ ಸೈನಿಕರು ಗಡಿ ದಾಟಲು ಹಿಂಜರಿಯುವುದಿಲ್ಲ: ರಾಜನಾಥ್ ಸಿಂಗ್
ನವದೆಹಲಿ, ಫೆಬ್ರವರಿ 26: ಬಾಲಾಕೋಟ್ ವಾಯುದಾಳಿ ಯಶಸ್ಸಿನ ವರ್ಷಾಚರಣೆಯನ್ನು ಇಂದು ದೇಶದ ವಿವಿಧೆಡೆ ಆಚರಿಸಲಾಗುತ್ತಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜ್‍ನಾಥ್‍ಸಿಂಗ್ ದೇಶದ ರಕ್ಷಣೆಗಾಗಿ ನಮ್ಮ ಯೋಧರು ಗಡಿ ದಾಟಿ ಉಗ್ರರನ್ನು ಸದೆಬಡಿಯಲು ಹಿಂಜರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜ್‍ನಾಥ್‍ಸಿಂಗ್ ತಿಳಿಸಿದ್ದಾರೆ.
Recommended Video
ಪುಲ್ವಾಮಾದಲ್ಲಿ ಸಿಆರ್‍ಪಿಎಫ್‍ನ 40 ಯೋಧರನ್ನು ಹತ್ಯೆ ಮಾಡಿದ ಪಾಕಿಸ್ತಾನಿ ಬೆಂಬಲಿತ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ನಡೆಸಿದ ಯಶಸ್ವಿ ಬಾಲಾಕೋಟ್ ವೈಮಾನಿಕ ಆಕ್ರಮಣಕ್ಕೆ ಇಂದಿಗೆ ಒಂದು ವರ್ಷ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್‌ನಾಥ್ ಸಿಂಗ್ ಬಾಲಾಕೋಟ್ ದಾಳಿಗೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯೇ ಕಾರಣ. ಇದಕ್ಕಾಗಿ ನಾನು ಪ್ರಧಾನಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ದೇಶದ ರಕ್ಷಣೆ ವಿಷಯದಲ್ಲಿ ನಾವು ಯಾವುದೇ ರಾಜಿ ಸಂಧಾನ ಮಾಡಿಕೊಳ್ಳುವುದಿಲ್ಲ. ಅಗತ್ಯಬಿದ್ದರೆ ಗಡಿಯನ್ನು ದಾಟಿ ಉಗ್ರರ ಹುಟ್ಟಡಗಿಸಲು ನಮ್ಮ ಯೋಧರು ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಸೇರಿದಂತೆ ವಿವಿಧೆಡೆ ಜೈಷ್-ಎ- ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಅಡಗುತಾಣಗಳು ಮತ್ತು ತರಬೇತಿ ಶಿಬಿರಗಳ ಮೇಲೆ ಭಾರತೀಯ ಯುದ್ಧವಿಮಾನಗಳು ಇದೇ ದಿನ ಅಂದರೆ ಫೆ.26ರಂದು ಮಿಂಚಿನ ದಾಳಿ ನಡೆಸಿದವು. ಈ ಮಹತ್ವದ ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳ ಶಿಬಿರಗಳು, ಶಸ್ತ್ರಾಸ್ತ್ರ ದಾಸ್ತಾನು ಸಂಗ್ರಹಗಳು ನುಚ್ಚುನೂರಾಗಿ ಅನೇಕ ಭಯೋತ್ಪಾದಕರು ಹತರಾಗಿದ್ದರು.
ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರಗಾಮಿಗಳಿಗೆ ನಾವು ನೀಡುತ್ತಿರುವ ಉತ್ತರದ ಧಾಟಿ ಬದಲಾಗಿದೆ.












Click it and Unblock the Notifications