ಕನಿಷ್ಠ ಉಡುಪೇ ಮಹಿಳೆಯರ ತೊಂದರೆಗೆ ಕಾರಣ: ಅಜ್ಮಿ

Posted By: Chethan
Subscribe to Oneindia Kannada

ನವದೆಹಲಿ, ಜ. 3. ಮೈಮೇಲೆ ಕನಿಷ್ಠ ಉಡುಗೆ ತೊಡುವುದರಿಂದಲೇ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನಲ್ಲಿ ಡಿ. 31ರ ಮಧ್ಯರಾತ್ರಿ ನಡೆದಿದ್ದ ವರ್ಷಾಚರಣೆ ಸಂಭ್ರಮಾಚರಣೆ ವೇಳೆ ಕೆಲ ಕಿಡಿಗೇಡಿಗಳು ಕೆಲವಾರು ಮಹಿಳೆಯರ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣವೀಗ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅಜ್ಮಿ, ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. [ಮಹಿಳೆ ಬಗ್ಗೆ ಹಗುರ ಮಾತಾಡಿದ ಪರಂ, ಅಬುಗೆ ನೋಟೀಸ್]

Skimpily clad woman attract wicked: SP leader

ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಥದ್ದೇ ಹೇಳಿಕೆ ನೀಡಿದ್ದ ಕರ್ನಾಟಕದ ಗೃಹ ಸಚಿವ ಪರಮೇಶ್ವರ್ ವಿರುದ್ಧ ಈಗಾಗಲೇ ಹಲವಾರು ಟೀಕೆಗಳು ಬರುತ್ತಿವೆ. ಇದೀಗ, ಅಜ್ಮಿ ಕೂಡಾ ಮಹಿಳಾ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಬಹುದಾಗಿದೆ ಎಂದು ಹೇಳಲಾಗಿದೆ.

ತಮ್ಮ ವಾದಕ್ಕೆ ಪುಷ್ಟಿ ನೀಡುವ ಅವರು, "ನಮ್ಮ ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುವುದನ್ನು ಬಿಡಬೇಕು. ಅವರಂತೆ ಕನಿಷ್ಠ ಉಡುಪು ಧರಿಸುವುದು, ರಾತ್ರಿ ವೇಳೆ ಪಾರ್ಟಿಗಳಿಗೆ ಹೋಗುವುದು ಮುಂತಾದ ವಿಚಾರಗಳಿಂದ ದೂರವಿರಬೇಕು. ನನ್ನ ಮನೆಯ ಮಹಿಳಾ ಸದಸ್ಯೆಯೊಬ್ಬರು ರಾತ್ರಿ ಹೊತ್ತು ಅನಿವಾರ್ಯ ಕಾರಣಗಳಿಗೆ ಹೊರಹೋಗುವಾಗ ನಮ್ಮ ಮನೆಯ ಪುರುಷ ಸದಸ್ಯನೊಟ್ಟಿಗೇ ಹೋಗಬೇಕೆಂದು ನಿಯಮ ವಿಧಿಸಿದ್ದೇನೆ. ಒಬ್ಬರನ್ನೇ ಕಳುಹಿಸುವುದಿಲ್ಲ" ಎಂದು ಅವರು ವಿವರಿಸಿದ್ದಾರೆ.

ಇದೇ ವೇಳೆ, ಪೊಲೀಸರಿಗೆ ತಮ್ಮ ನೈತಿಕ ಬೆಂಬಲ ವ್ಯಕ್ತಪಡಿಸಿರುವ ಅವರು, "ಸಮಾಜದ ಪ್ರತಿಯೊಬ್ಬರ ಬೆನ್ನ ಹಿಂದಿದ್ದುಕೊಂಡು ಪೊಲೀಸರು ರಕ್ಷಣೆ ನೀಡಲು ಸಾಧ್ಯವಿಲ್ಲ. ಅಪಾಯ ಬರದಂತೆ ನಾಗರಿಕರೇ ಮುನ್ನಚ್ಚರಿಕೆ ವಹಿಸಬೇಕಿರುವುದು ಅವಶ್ಯ" ಎಂದಿದ್ದಾರೆ. [ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ : ತೀವ್ರ ಟೀಕೆಗೆ ಗುರಿಯಾದ ಪರಮೇಶ್ವರ ಹೇಳಿಕೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a controversial statement Samajwadi leader Abu Azmi said that, women who follows western culture and wears less costumes face sexual assault. Regarding the Womens molestation during, Bangalore new year celebration, he reacted so.
Please Wait while comments are loading...