'ಅಮ್ಮ ಮನಸಿನ ಮಾತು ಕೇಳ್ತಾರೆ, ನಾನು ಯೋಚಿಸಿ ನಿರ್ಧಾರ ಮಾಡ್ತೀನಿ'
ನವದೆಹಲಿ, ಅಕ್ಟೋಬರ್ 5: "ಅಮ್ಮ ತಮ್ಮ ಮನಸಿನ ಮಾತನ್ನು ಕೇಳ್ತಾರೆ. ಆದರೆ ನಾನು ಯೋಚನೆ ಮಾಡಿ ತೀರ್ಮಾನ ಕೈಗೊಳ್ತೀನಿ" ಅಂತ ಅವರೇ ನನಗೆ ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ಇಲ್ಲಿ ನಡೆಯುತ್ತಿರುವ ನಾಯಕತ್ವ ಸಮಾವೇಶದಲ್ಲಿ ಶುಕ್ರವಾರ ಹೇಳಿದ ಮಾತಿದು.
ಅಮ್ಮ ನನಗೆ ಸಹನೆಯನ್ನು ಕಲಿಸಿದರು. ಈ ಹಿಂದೆ ನನಗೆ ಬಹಳ ಬೇಗ ಕೋಪ ಬರ್ತಿತ್ತು. ನಿಮಗೆ ಬಹಳ ಸಹನೆ ಅಂತ ತುಂಬ ಸಲ ನಾನೇ ಅವರಿಗೆ ಹೇಳಿದ್ದೀನಿ ಎಂದು ನಾಯಕತ್ವ ಶೈಲಿಯಲ್ಲಿನ ವ್ಯತ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ನನ್ನ ಜೀವನದಲ್ಲಿ 'ಆ' ರೀತಿಯ ವಿಶೇಷ ವ್ಯಕ್ತಿ ಯಾರೂ ಇಲ್ಲ ನಗುತ್ತಾ ಉತ್ತರಿಸಿದ ಅವರು, ನನ್ನ ತಾಯಿ, ಸೋದರಿ, ಸ್ನೇಹಿತರು ಹೀಗೆ ಬಹಳ ಮಂದಿ ನನ್ನ ಪಾಲಿಗೆ ವಿಶೇಷ ಎಂದಿದ್ದಾರೆ. ಈ ಹಿಂದೊಮ್ಮೆ, ನಾನು ಕಾಂಗ್ರೆಸ್ ಪಕ್ಷವನ್ನೇ ಮದುವೆ ಆಗಿದ್ದೇನೆ ಎಂದು ಹೇಳಿದ್ದ ರಾಹುಲ್, ನನ್ನ ಜೀವನದಲ್ಲಿ ಆ ರೀತಿಯ ವಿಶೇಷ ವ್ಯಕ್ತಿ ಯಾರೂ ಇಲ್ಲ ಎಂಬ ಉತ್ತರ ನೀಡಿದ್ದಾರೆ.

ನಾನು ಹಾಗೂ ಅಮ್ಮ ಇಬ್ಬರೂ ಎದುರಿಗೆ ಇರುವವರ ಮಾತನ್ನು ಕೇಳಿಸಿಕೊಳ್ತೀವಿ. ಮುಂಚೆ ನಾನು ಆ ರೀತಿ ಇರಲಿಲ್ಲ. ಆದರೆ ಈಗ ಹೆಚ್ಚಾಗಿ ಎದುರಿಗಿರುವವರು ಆಡುವ ಮಾತನ್ನು ಕೇಳಿಸಿಕೊಳ್ತೀನಿ ಎಂದಿದ್ದಾರೆ ರಾಹುಲ್.












Click it and Unblock the Notifications