ದೆಹಲಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ: ಇಲ್ಮಿ
ನವದೆಹಲಿ, ಜ.16: ಆಮ್ ಆದ್ಮಿ ಪಕ್ಷದ ಫೈರ್ ಬ್ರ್ಯಾಂಡ್ ನಾಯಕಿಯಾಗಿದ್ದ ಶಾಜಿಯಾ ಇಲ್ಮಿ ಅವರು ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎದುರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯನ್ನು ಇಲ್ಮಿ ಅಲ್ಲಗೆಳೆದಿದ್ದಾರೆ. ನಾನು ಯಾವುದೇ ಅಸೆಂಬ್ಲಿ ಚುನಾವಣೆ ಎದುರಿಸುವುದಿಲ್ಲ ಎಂದು ಬುಧವಾರ ಘೋಷಿಸಿದ್ದಾರೆ.
ಶಾಜಿಯಾ ಇಲ್ಮಿ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧೆಗಿಳಿಯುವ ಸುದ್ದಿ ಹಬ್ಬುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಅವರು ಶಾಜಿಯಾ ಅವರು ನವೆಂಬರ್ 21, 2013ರಲ್ಲಿ Hypocrisy, thy name is BJP ಎಂದು ಟ್ವೀಟ್ ಮಾಡಿದ್ದನ್ನು ರೀಟ್ವೀಟ್ ಮಾಡಿದರು. [ಅಸೆಂಬ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆ]
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್, ಭಾರತದ ಪ್ರಜೆಯಾಗಿ ಎಲ್ಲಿ ಬೇಕಾದರೂ ಚುನಾವಣೆ ಸ್ಪರ್ಧಿಸಲು ಆಕೆ ಅರ್ಹಳು ಎಂದಿದ್ದರು. ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಿದ ಇಲ್ಮಿ ನಾನು ಅಸೆಂಬ್ಲಿ ಚುನಾವಣೆ ಎದುರಿಸುತ್ತಿಲ್ಲ ಎಂದಷ್ಟೇ ಹೇಳಿದ್ದಾರೆ.

ಅಣ್ಣಾ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಜನಪರ ಹೋರಾಟಗಳನ್ನು ಮೆಚ್ಚಿ ಆಮ್ ಆದ್ಮಿ ಪಕ್ಷ ಸೇರಿದ್ದ ಶಾಜಿಯಾ ಇಲ್ಮಿ ಅವರು ಕಳೆದ ವರ್ಷ ಮೇ 24ರಂದು ಪಕ್ಷ ತೊರೆದಿದ್ದರು. ಪಕ್ಷದಲ್ಲಿ ಯಾವುದೇ ರೀತಿ ಪ್ರಜಾಪ್ರಭುತ್ವ ತತ್ವಗಳನ್ನು ಪಾಲಿಸುತ್ತಿಲ್ಲ ಎಂದಿದ್ದರು.
ಶಾಜಿಯಾ ಇಲ್ಮಿ ಅವರು ದೆಹಲಿಯ ಆರ್ ಕೆ ಪುರಂ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿತ್ತು. ಭಾನುವಾರ ಕಿರಣ್ ಬೇಡಿ ಅವರು ಬಿಜೆಪಿ ಸೇರಿದ ಬೆನ್ನಲ್ಲೇ ಇಲ್ಮಿ ಸ್ಪರ್ಧೆ ಬಗ್ಗೆ ಹೆಚ್ಚಿನ ಒತ್ತಡ ಕಂಡು ಬಂದಿತ್ತು. [ಆಪ್ ನಾಯಕಿ ಶಾಜಿಯಾ ಇಲ್ಮಿ ರಾಜೀನಾಮೆ]
Was invited to speak at the National Defence College .Cdnt take media calls. Im not contesting from New Delhi or elsewhere Calm down folks
— shazia ilmi (@shaziailmi) January 14, 2015 2013ರ ದೆಹಲಿ ವಿಧಾನಸಭೆಯಲ್ಲಿ ಸ್ಟಾರ್ ಪ್ರಚಾರಕಿಯಾಗಿದ್ದ ಇಲ್ಮಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಗಾಜಿಯಾಬಾದಿನಲ್ಲಿ ವಿಕೆ ಸಿಂಗ್ ವಿರುದ್ಧ ಸೋಲು ಕಂಡಿದ್ದರು. ಟಿವಿ ಮಾಧ್ಯಮದಲ್ಲಿ ಸುಮಾರು 15 ವರ್ಷಗಳ ಅನುಭವವುಳ್ಳ ಶಾಜಿಯಾ ಅವರು ಎಎಪಿ ಸೇರಿ ರಾಜಕೀಯ ರಂಗಕ್ಕೆ ಅಧಿಕೃತವಾಗಿ ಕಾಲಿಟ್ಟರೂ ಸಾಮಾಜಿಕ ಕಾರ್ಯಕರ್ತೆಯಾಗಿ ಕೂಡಾ ಜನಪ್ರಿಯತೆ ಗಳಿಸಿದ್ದಾರೆ. [ಪಿಟಿಐ]












Click it and Unblock the Notifications