ರಾಹುಲ್ ಗಾಂಧಿಯ ಭೇಟಿಯಾದ ಬಿಜೆಪಿ ಸಂಸದ ಶತೃಘ್ನ ಸಿನ್ಹಾ
ನವದೆಹಲಿ, ಮಾರ್ಚ್ 28: ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಸಂಸದ ಶತೃಘ್ನ ಸಿನ್ಹಾ ಅವರು ಇಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶತೃಘ್ನ ಸಿನ್ಹಾ ಅವರು ಇಂದು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎನ್ನಾಗಿತ್ತು, ಆದರೆ ಆ ರೀತಿಯ ಏನೂ ಆಗಲಿಲ್ಲ, ಇಬ್ಬರೂ ನಾಯಕರು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದರು.
ಕಾಂಗ್ರೆಸ್ ಸೇರುವ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ ಎಂದು ಅವರು ಹೇಳಿದರು.

ಬಿಜೆಪಿ ಸಂಸದರಾಗಿರುವ ಶತೃಘ್ನ ಸಿನ್ಹಾ ಅವರು ಮೋದಿ ವಿರೋಧಿಯಾಗಿ ಗುರುತಿಸಿಕೊಂಡಿದ್ದಾರೆ. ಬಹಿರಂಗವಾಗಿಯೇ ಬಿಜೆಪಿ ಹಾಗೂ ಮೋದಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಈ ಬಾರಿ ಶತೃಘ್ನ ಸಿನ್ಹಾ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಬಿಹಾರ್‌ನ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಅವರು ಮೂರು ಬಾರಿ ಬಿಜೆಪಿ ಯಿಂದಲೇ ಆರಿಸಿಬಂದಿದ್ದಾರೆ, ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಸಹ ಆಗಿದ್ದರು. ಆದರೆ ಮೋದಿ ಆಡಳಿತ ಬಂದಮೇಲೆ ಅವರ ವಿರುದ್ಧ ವಾಗ್ದಾಳಿ ಪ್ರಾರಂಭಿಸಿದ್ದರು, ಈಗ ಕಾಂಗ್ರೆಸ್ ಸೇರುವ ಸನಿಹದಲ್ಲಿದ್ದಾರೆ.












Click it and Unblock the Notifications