ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ
ನವದೆಹಲಿ, ಅಕ್ಟೋಬರ್ 08: ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ದಾಖಲಿಸುವುದಕ್ಕೆ ಸಮಯದ ಮಿತಿಯಿಲ್ಲ. 10-15 ಅಥವಾ ಅದಕ್ಕಿಂತ ಹೆಚ್ಚು ವರ್ಷದ ನಂತರವೂ ದೂರು ದಾಖಲಿಸಬಹುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಇತ್ತೀಚೆಗೆ 'Me Too' ಎಂಬ ಆನ್ ಲೈನ್ ಆಂದೋಲನದ ಮೂಲಕ ಹಲವು ಸೆಲೆಬ್ರಿಟಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಬಾಲಿವುಡ್ ನಟಿ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಮೇಲೆ ಹಲವರು ತಮ್ಮ ಕಹಿ ಅನುಭವಗಳನ್ನೂ ಹೊರಹಾಕಿದ್ದಾರೆ.
ದೌರ್ಜನ್ಯ ನಡೆದು ಎಷ್ಟೇ ವರ್ಷಗಳಾಗಿದ್ದರೂ ದೂರು ನೀಡಬಹುದು, ಕೆಲವರು ಕೆಲ ಅನಿವಾರ್ಯ ಕಾರಣಗಳಿಂದ ಆ ಸಂದರ್ಭದಲ್ಲಿ ದೂರು ನೀಡದೆ ಇದ್ದಿರಬಹುದು, ಅವರ ಮೇಲೆ ಒತ್ತಡವಿರಬಹದು. ಅಂಥ ಸಂದರ್ಭದಲ್ಲಿ ವರ್ಷಗಳೇ ಕಳೆದ ನಂತರವೂ ದೂರು ನೀಡಬಹುದು. ಮತ್ತು ಈ ದೂರನ್ನು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲೂ ತಿರಸ್ಕರಿಸುವಂತಿಲ್ಲ ಎಂದು ಮನೇಕಾ ಗಾಂಧಿ ಹೇಳಿದರು.

ತನುಶ್ರೀ ದತ್ತ ಅವರ ಆರೋಪದ ನಂತರ ಬಾಲಿವುಡ್ ನಟಿ ಕಂಗನಾ ರನೌತ್ ನಿರ್ದೇಶಕ ವಿಕಾಸ್ ಬಾಹ್ಲ್ ಎಂಬುವವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications