2ಜಿ ಸ್ಪೆಕ್ಟ್ರಂ ಹಗರಣ: ಸುಪ್ರೀಂ ಕೋರ್ಟ್ ನಲ್ಲಿಂದು ವಿಚಾರಣೆ
ನವದೆಹಲಿ, ನವೆಂಬರ್ 29: ಯುಪಿಎ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ 2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ಇಂದು(ನ.29) ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.
ಸುಮಾರು 1,76,000 ಕೋಟಿ ರೂ. 2ಜಿ ತರಂಗಗುಚ್ಛ ಹಗರಣ ಬೆಳಕಿಗೆ ಬಂದಿದ್ದು 2008 ರಲ್ಲಿ. ಆಗಿನ ಯುಪಿಎ ಮೈತ್ರಿ ಸರ್ಕಾರ, ಹಲವು ಟೆಲಿಕಾಂ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಆರೋಪದಿಂದಾಗಿ 2 ಜಿ ಸ್ಪೆಕ್ಟ್ರಂ ಸುದ್ದಿಯಾಗಿತ್ತು.

ಈ ಹಗರಣಕ್ಕೆ ಸಂಬಂಧಿಸಿದಂತೆ ಇದೇ ಡಿಸೆಂಬರ್ 5 ರಂದು ತೀರ್ಪಿನ ದಿನಾಂಕ ಘೋಷಣೆ ಮಾಡುವುದಾಗಿ ನವದೆಹಲಿಯ ವಿಶೇಷ ನ್ಯಾಯಾಲಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
2014 ರಲ್ಲಿ ಎ.ರಾಜಾ, ಕನ್ನಿಮೋಳಿ ಸೇರಿದಂತೆ 19 ಜನರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿತ್ತು. ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟುಮಾಡಿದ ಈ ಹಗರಣದ ತೀರ್ಪು ಯಾವಾಗ ಹೊರಬೀಳಲಿದೆ ಎಂಬುದನ್ನು ಡಿಸೆಂಬರ್ 5 ರಂದು ವಿಶೇಷ ನ್ಯಾಯಾಲಯ ಘೋಷಿಸಲಿದೆ.












Click it and Unblock the Notifications