ಸೇನಾ ನೇಮಕಾತಿಯಲ್ಲಿ ಮಹಿಳೆಯರಿಗೂ ಸಮಾನತೆ: ಸುಪ್ರೀಂಕೋರ್ಟ್ ಆದೇಶ

ನವದೆಹಲಿ, ಫೆಬ್ರವರಿ 17: ಸೇನಾ ನೇಮಕಾತಿಯಲ್ಲಿ ಮಹಿಳೆಯರಿಗೂ ಸಮಾನತೆ ನೀಡುವಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಭಾರತೀಯ ಸೇನೆಯಲ್ಲಿ ಲಿಂಗ ಸಮಾನತೆ ಅವಶ್ಯಕ. ಹೀಗಾಗಿ ಶೇ. 30ರಷ್ಟು ಮಹಿಳೆಯರಿಗೆ ಕಮಾಂಡರ್ ಸ್ಥಾನ ನೀಡಬೇಕು ಎಂದು ಕೋರ್ಟ್​ ಆದೇಶಿಸಿದೆ. ಕೇಂದ್ರ ಸರ್ಕಾರದ ಧೋರಣೆಗೆ ಸುಪ್ರೀಂ ಕಿಡಿಕಾರಿದ್ದು, ದೆಹಲಿ ಹೈಕೋರ್ಟ್​ನ​​ ಆದೇಶ ಪಾಲನೆ ಮಾಡುವಂತೆ ಸೂಚಿಸಿದೆ.

ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೂ ಕಮಾಂಡರ್ ಸ್ಥಾನ ನೀಡಬೇಕು ಮತ್ತು ಅವರಿಗೆ ಶಾಶ್ವತ ಆಯೋಗ ಕೊಡಬೇಕು,. ಸೇನೆಯಲ್ಲಿ ಲಿಂಗ ತಾರತಮ್ಯ ಸಲ್ಲದು. ಸರ್ಕಾರವು ಈ ಮಾನಸಿಕ ಸ್ಥಿತಿಯನ್ನು ಬದಲಿಸಬೇಕು ಎಂದು ಹೇಳುವ ಮೂಲಕ ಹೈ ಕೋರ್ಟ್​ ತೀರ್ಪನ್ನು ಎತ್ತಿ ಹಿಡಿದಿದೆ.

SC Orders Equal Reservation For Woman In Indian Army

ಈ ಕುರಿತು ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​, ಮಹಿಳೆಯರಿಗೂ ಸೇನೆಯಲ್ಲಿ ಅವಕಾಶ ನೀಡಬೇಕು ಎಂದು ಆದೇಶ ನೀಡಿದೆ. ಜೊತೆಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಲಿಂಗ ತಾರತಮ್ಯ ಮಾಡಬಾರದು ಎಂದು ಕೋರ್ಟ್​ ಹೇಳಿದೆ.

ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ನೀಡಿದ್ದ ಟಿಪ್ಪಣಿಯಲ್ಲಿ ಮಹಿಳೆಯರ 'ದೈಹಿಕ ಕ್ಷಮತೆ' ಮತ್ತು 'ಶಾರೀರಿಕ ಮಿತಿಗಳು' ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿತ್ತು. ಈ ಸಂಬಂಧ ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಅನೇಕ ಸವಾಲುಗಳು ಎದುರಾಗಲಿವೆ ಎಂದು ಹೇಳಿತ್ತು. ಜೊತೆಗೆ ಮಹಿಳೆಯರನ್ನು ಅಧಿಕಾರಿಗಳನ್ನಾಗಿ ಸ್ವೀಕರಿಸಲು ಸೇನಾಪಡೆಗಳು ಮಾನಸಿಕವಾಗಿ ತರಬೇತಿ ಪಡೆದಿಲ್ಲ ಎಂದು ಸಹ ಕೇಂದ್ರ ಟಿಪ್ಪಣಿಯಲ್ಲಿ ತಿಳಿಸಿತ್ತು.

ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದರೆ ಉನ್ನತ ಹುದ್ದೆ ನೀಡಲಾಗುತ್ತದೆ. ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಲು ನಾನು ಸಿದ್ಧನಿದ್ದೇನೆ. ಆದರೂ ಸೇನೆಯಲ್ಲಿರುವ ಯೋಧರು ಗ್ರಾಮೀಣ ಪ್ರದೇಶಗಳಿಂದ ಬಂದಿರುತ್ತಾರೆ. ಅವರೆಲ್ಲಾ ಮಹಿಳಾ ಕಮಾಂಡರ್ ಗಳು ತಮ್ಮ ನೇತೃತ್ವ ವಹಿಸುವುದನ್ನು ಒಪ್ಪಲ್ಲ ಎಂದು ಬಿಪಿನ್ ರಾವತ್ ಹೇಳಿದ್ದರು. ಹೇಳಿದ್ದರು.

ಸೇನೆಯಲ್ಲಿ ಮಹಿಳೆಯರು ಎಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಯು ಪಡೆಯಲ್ಲಿ ಅವರೇ ನಮ್ಮ ಶಸ್ತ್ರ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಯುದ್ಧಭೂಮಿಯಲ್ಲಿ ಆ ಮಹಿಳಾ ಯೋಧರು ಮೃತಪಡುವ ಸಾಧ್ಯತೆ ಇರುತ್ತವೆ. ಒಂದು ವೇಳೆ ಅವರು ಯುದ್ಧಭೂಮಿಯಲ್ಲಿ ಸಾವನ್ನಪ್ಪಿದರೆ ಮೃತದೇಹ ಮನೆಗೆ ಮರಳಿದಾಗ ಅದನ್ನು ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+