ವಾಟ್ಸಪ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್ ಗೆ ಸುಪ್ರೀಂ ಚಾಟಿಏಟು?
ನವದೆಹಲಿ, ಸೆಪ್ಟೆಂಬರ್ 10: ನ್ಯಾಯಾಲಯದಲ್ಲಿ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸುವುದನ್ನು ನೋಡಿದ್ದೇವೆ ಆದರೆ ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆಯನ್ನು ವಾಟ್ಸಪ್ ಮೂಲಕ ನಡೆಸಿದ ಅಧೀನ ನ್ಯಾಯಾಲಯದ ಕ್ರಮವನ್ನು ಸುಪ್ರೀಂಕೋರ್ಟ್ ಖಂಡಿಸಿದೆ.
ಜಾರ್ಖಂಡ್ ನ ಮಾಜಿ ಸಚಿವ ಯೋಗೇಂದ್ರ ಸಾವೋ ಅವರ ಪತ್ನಿ ಈಗಿನ ಶಾಸಕಿ ನಿರ್ಮಲಾ ದೇವಿ ಅವರನ್ನೊಳಗೊಂಡ ವ್ಯಾಜ್ಯವೊಂದು ಹಜಾರಿಬಾಗ್ ನ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಬಂದಿತ್ತು. ಆರೋಪಿಗಳಿಗೆ ವಾಟ್ಸಪ್ ಕರೆ ಮಾಡುವ ಮೂಲಕ ಅವರ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ನ್ಯಾಯಾಧೀಶರು ಅನುಮತಿ ನೀಡಿದ್ದರು.
2016ರಲ್ಲಿ ದಾಖಲಾದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ವರ್ಷ ಅವರಿಗೆ ಉನ್ನತ ನ್ಯಾಯಾಲಯ ರತ್ತು ಬದ್ಧ ಜಾಮೀನು ನೀಡಿತ್ತು, ಆರೋಪಿಗಳು ಭೋಪಾಲ್ ನಲ್ಲೇ ಇರಬೇಕು ಮತ್ತು ಕೋರ್ಟ್ ವಿಚಾರಣೆಗೆ ಹಾಜರಾಗಲೇಬೇಕು ಎಂದು ತಿಳಿಸಿತ್ತು.

ಈಗ ತಮ್ಮ ವಿರುದ್ಧ ವಾಟ್ಸಪ್ ಮೂಲಕ ಆರೋಪಪಟ್ಟಿ ದಾಖಲಿಸಿದ್ದನ್ನು ಆಕ್ಷೇಪಿಸಿ ಇಬ್ಬರು ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎ. ಬೋಡ್ಬೆ ಮತ್ತು ಎಲ್ ಎನ್ ರಾವ ಅವರ ಪೀಠ, ವಾಟ್ಸಪ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಮಾಡುವ ಹಂತಕ್ಕೆ ಬಂದಿದ್ದೇವೆ, ಇದು ಯಾವ ಬಗೆಯ ವಿಚಾರಣೆ, ಇದೇನು ತಮಾಷೆಯೇ ಎಂದು ತರಾಟೆಗೆ ತೆಗೆದುಕೊಂಡಿತು.












Click it and Unblock the Notifications