ಸೌದಿ ಅರೇಬಿಯಾದಿಂದ ಭಾರತಕ್ಕೆ ಸಿಗಲಿದೆ ಹೆಚ್ಚುವರಿ ತೈಲ

ನವದೆಹಲಿ, ಅಕ್ಟೋಬರ್ 10: ಇರಾನ್ ಮೇಲಿನ ಅಮೆರಿದಕ ನಿರ್ಬಂಧ ನವೆಂಬರ್‌ನಲ್ಲಿ ಜಾರಿಯಾಗಲಿರುವುದರಿಂದ ತೀವ್ರ ತೈಲ ಬಿಕ್ಕಟ್ಟಿಗೆ ಒಳಗಾಗಲಿರುವ ಭಾರತಕ್ಕೆ ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ಸೌದಿ ಅರೇಬಿಯಾ ನೆರವು ನೀಡಲಿದೆ ಎಂದು ವರದಿಗಳು ತಿಳಿಸಿವೆ.

ನವೆಂಬರ್ ತಿಂಗಳಿನಲ್ಲಿ ಭಾರತದ ತೈಲ ಖರೀದಿದಾರ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ನಾಲ್ಕು ಮಿಲಿಯನ್ ಬ್ಯಾರೆಲ್‌ ಕಚ್ಚಾ ತೈಲವನ್ನು ಸೌದಿ ಪೂರೈಕೆ ಮಾಡಲಿದೆ ಎನ್ನಲಾಗಿದೆ.

ನವೆಂಬರ್ 4ರಂದು ಇರಾನ್ ಮೇಲಿನ ನಿರ್ಬಂಧ ಜಾರಿಯಾಗುತ್ತಿದ್ದಂತೆಯೇ ಭಾರತಕ್ಕೆ ರಫ್ತಾಗುತ್ತಿರುವ ಕಚ್ಚಾ ತೈಲದ ಪೂರೈಕೆಗೆ ಹೊಡೆತ ಬೀಳಲಿದೆ. ಹೀಗಾಗಿ ಭಾರತಕ್ಕೆ ನೆರವಾಗಲು ಸೌದಿ ಹೆಚ್ಚುವರಿ ಸರಕು ಸಾಗಣೆ ಹಡಗನ್ನು ಸಿದ್ಧಗೊಳಿಸುತ್ತಿದೆ.

saudi arabia india crude oil supply US sanctions on iran

ಇರಾನ್‌ನಿಂದ ಚೀನಾ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಭಾರತ ಎರಡನೆಯ ಸ್ಥಾನದಲ್ಲಿದೆ. ನಿರ್ಬಂಧ ಜಾರಿಯಾಗಲಿರುವುದರಿಂದ ಅನೇಕ ತೈಲ ಸಂಸ್ಥೆಗಳು ಇರಾನ್‌ನಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸುವ ಸೂಚನೆ ನೀಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಮತ್ತು ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ ಲಿಮಿಟೆಡ್ ಸಂಸ್ಥೆಗಳು ಸೌದಿ ಅರೇಬಿಯಾದಿಂದ ತಲಾ ಒಂದು ಮಿಲಿಯನ್ ಹೆಚ್ಚುವರಿ ಬ್ಯಾರೆಲ್ ನಿರೀಕ್ಷಿಸಿವೆ.

saudi arabia india crude oil supply US sanctions on iran

ಇರಾನ್ ತೈಲ ಪೂರೈಕೆ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ತೈಲ ಕಂಪೆನಿಗಳು ನಿರ್ಬಂಧ ಜಾರಿಯಾದರೆ ಉಂಟಾಗುವ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಏಕೆಂದರೆ, ದೇಶದ ತೈಲ ರಿಫೈನರಿಗಳು ಇರಾನ್‌ನಿಂದ ನವೆಂಬರ್‌ನಲ್ಲಿ ಸುಮಾರು 9 ಮಿಲಿಯನ್ ಬ್ಯಾರೆಲ್‌ಗೆ ಬೇಡಿಕೆ ಇಟ್ಟಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+