ಸಂಜೋತಾ ಎಕ್ಸ್ ಪ್ರೆಸ್: ಸಾಕ್ಷಿ ಕಳಿಸುವುದಕ್ಕೆ ಕಾಲಾವಕಾಶ ಕೇಳಿದ ಪಾಕ್
ನವದೆಹಲಿ, ಜುಲೈ 3: ಭಾರತದ ಇತಿಹಾಸದಲ್ಲಿ ಕರಾಳ ದಿನ ಎನ್ನಿಸಿದ 2007, ಫೆಬ್ರವರಿ 19 ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಸಾಕ್ಷಿಗಳನ್ನು ಕಳುಹಿಸಲು ಪಾಕಿಸ್ತಾನ 4 ತಿಂಗಳ ಗಡುವು ಕೇಳಿದೆ.
ಮಾರ್ಚ 17 ರಂದು ಈ ಕುರಿತು ವಿಚಾರಣೆ ನಡೆಸಿದ್ದ ಭಾರತೀಯ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯ ಜುಲೈ 4 ರಂದು ನ್ಯಾಯಾಲಯಕ್ಕೆ ಪಾಕಿಸ್ತಾನದ 13 ಸಾಕ್ಷಿಗಳು ಹಾಜರಾಗಬೇಕೆಂದು ಹೇಳಿತ್ತು.
ಸಂಜೋತಾ ಎಕ್ಸ್ ಪ್ರೆಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಭಾರತ ವಿಳಂಬ ಮಾಡುತ್ತಿದೆ ಎಂದು ಈ ಮೊದಲು ಆರೋಪಿಸಿದ್ದ ಪಾಕಿಸ್ತಾನವೇ ಇದೀಗ ನಾಲ್ಕು ತಿಂಗಳ ಕಾಲಾವಕಾಶ ಕೇಳಿರುವುದು ಅಚ್ಚರಿ ಎನ್ನಿಸಿದೆ.

2007 , ಫೆಬ್ರವರಿ 19 ನಸುಕಿನಲ್ಲಿ ದೆಹಲಿಯಿಂದ ಪಾಕಿಸ್ತಾನದ ಲಾಹೋರ್ ನ ಅಟ್ಟಾರಿ ಎಂಬಲ್ಲಿಗೆ ತೆರಳುತ್ತಿದ್ದ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟವಾಗಿ 68 ಜನ ಪ್ರಾಣ ಕಳೆದುಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 299 ಸಾಕ್ಷಿಗಳ ವಿಚಾರಣೆ ನಡೆಸಲಿರುವ ತನಿಖಾ ದಳ ಈಗಾಗಲೇ 249 ಸಾಕ್ಷಿಗಳ ವಿಚಾರಣೆ ನಡೆಸಿದೆ.












Click it and Unblock the Notifications