ಕಾಂಗ್ರೆಸ್ ಅನ್ನು ಹಾಡಿ ಹೊಗಳಿದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್
ನವದೆಹಲಿ, ಸೆಪ್ಟೆಂಬರ್ 18: ಅತ್ಯಪರೂಪದ ಘಟನೆ ಎಂಬಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ(ಸರಸಂಘಚಾಲಕ್) ಮೋಹನ್ ಭಾಗವತ್ ಅವರು ಕಾಂಗ್ರೆಸ್ ಪಕ್ಷವನ್ನು ಹಾಡಿ ಹೊಗಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಆರೆಸ್ಸೆಸ್ ಕಾಂಕ್ಲೇವ್ ನ ಮೊದಲ ದಿನವಾದ ನಿನ್ನೆ(ಸೆ.17), 'ಭವಿಷ್ಯದ ಭಾರತ- ಆರೆಸ್ಸೆಸ್ ದೃಷ್ಟಿಕೋನದಲ್ಲಿ' ಎಂಬ ವಿಷಯದ ಕುರಿತು ಮಾತನಾಡಿದರು.
'ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಅಪಾರವಾದುದು. ಈ ಹಿರಿಯ ಪಕ್ಷ ದೇಶಕ್ಕೆ ಮಹಾನ್ ವ್ಯಕ್ತಿಗಳನ್ನು ನೀಡಿದೆ' ಎಂದು ಅವರು ಕಾಂಗ್ರೆಸ್ ಪಕ್ಷವನ್ನು ಹಾಡಿ ಹೊಗಳಿದರು.

ಇತ್ತ ಕಾಂಗ್ರೆಸ್, ಆರೆಸ್ಸೆಸ್ ದೇಶ ವಿಭಜಿಸುವ ಸಿದ್ಧಾಂತವನ್ನು ಪಾಲಿಸುತ್ತಿದೆ ಎಂದು ದೂರಿದೆ. ಆದರೆ ಈ ಎಲ್ಲಕ್ಕೂ ಉತ್ತರ ಎಂಬಂತೆ ಮೋಹನ್ ಭಾಗವತ್ ಅವರು ತಮ್ಮ ಮಾತಿನಲ್ಲಿ ಕಾಂಗ್ರೆಸ್ ಅನ್ನು ಹೊಗಳಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವಿರತ ಶ್ರಮಿಸಿದ ಕಾಂಗ್ರೆಸ್ ನ ಹಲವು ನಾಯಕರನ್ನು ಸ್ಮರಿಸಿದ್ದಾರೆ.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಬಹುಪಾಲು ಎಲ್ಲ ಬಿಜೆಪಿ ನಾಯಕರು, ಆರೆಸ್ಸೆಸ್ ಕಾರ್ಯಕರ್ತರು ಮತ್ತು ಬಾಲಿವುಡ್ ನ ನಟ-ನಟಿಯರು ಸೇರಿದಂತೆ ಗಣ್ಯರು ಭಾಗವಹಿಸಿದ್ದಾರೆ.












Click it and Unblock the Notifications